ಕುಂದಾಪುರ: ಕೆಲವು ದಿನಗಳ ಹಿಂದೆ ಸತ್ತ ತಿಮಿಂಗಲ ತ್ರಾಸಿ- ಮರವಂತೆ ಕಡಲತೀರದಲ್ಲಿ ಹೆದ್ದಾರಿ ಬದಿಯ ದಡದಲ್ಲಿ ಬಿದ್ದಿದೆ. ಬೆಳಗ್ಗಿನಿಂದಲೇ ತಿಮಿಂಗಿಲ ಕೊಳೆತು ನಾರುತ್ತಿದ್ದರೂ ಇದುವರೆಗೆ ಪ್ರವಾಸೋದ್ಯಮ ಇಲಾಖೆಯಾಗಲೀ ಮೀನುಗಾರಿಕಾ ಇಲಾಖೆಯಾಗಲೀ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲದಿರುವುದು ಹೆದ್ದಾರಿ ಪ್ರಯಾಣಿಕರು ಹಾಗೂ ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಮೂಡುಬಿದಿರೆ : ಮಾದಕ ದ್ರವ್ಯ ಸೇವನೆ, ಮಾದಕ ವ್ಯಸನ ಈ ಸಮಾಜಕ್ಕೆ ಅಂಟಿಕೊಂಡಿರುವ ಕೆಟ್ಟ ರೋಗ. ಈ ದುಶ್ಚಟಕ್ಕೆ ದೊಡ್ಡ ದೊಡ್ಡ ನಗರಗಳಲ್ಲಿ ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ಅತೀ ವೃದ್ಧರು ಕೂಡ ಬಲಿಯಾಗುವ ಮೂಲಕ ಇದು ರಾಷ್ಟ್ರೀಯ ಸಮಸ್ಯೆಯಾಗಿ ತಲೆದೂರಿದೆ. ಇಂತಹ ವ್ಯಸನಕ್ಕೆ ದಾಸರಾಗಿರುವ ವ್ಯಕ್ತಿಗಳಿಗೆ ಧೈರ್ಯ ತುಂಬಿ ಮನ ಪರಿವರ್ತನೆ ಮಾಡಬೇಕು ಎಂದು ಆಳ್ವಾಸ್‍ನ ಪ್ರಕೃತಿ – ಯೋಗ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ದೀಕ್ಷಾ ಶೆಣೈ
ಪುತ್ತೂರು : ಪುತ್ತೂರಿಗೆ ಬರುವ ಖಾಸಗಿ ಬಸ್ ನಲ್ಲಿ ಪ್ರಯಾಣಿಕ ಮಹಿಳೆಯೊಬ್ಬರು ಮತ್ತೊಂದು ಮಹಿಳೆಯ ಪರ್ಸ್ ಕದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಪರ್ಸ್ ಕಳೆದುಕೊಂಡ ಪುತ್ತೂರು ತಾಲೂಕು ಪಂಚಾಯಿತಿಯ ಯೋಜನಾಧಿಕಾರಿ ಸುಕನ್ಯ ಪುತ್ತೂರು ಠಾಣೆಗೆ ಸಿಸಿಟಿವಿ ದೃಶ್ಯ ಆಧರಿಸಿ ದೂರು ನೀಡಿದ್ದು, ಕಳ್ಳತನಗೈದ ಮಹಿಳೆಗಾಗಿ ಪೆÇಲೀಸರು ಹುಡುಕಾಟ ಪ್ರಾರಂಭಿಸಿದ್ದರೆ. ಆದರೆ ಹುಡುಕಾಟಕ್ಕೆ ಖಾಸಗಿ ಬಸ್ ಬಸ್ಸಿನೊಳಗೆ ಅಳವಡಿಸಿದ್ದ ಸಿಸಿಟಿವಿಯ ದೃಶ್ಯವೇ ಪ್ರಮುಖ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಇದರ ಸಾರಥ್ಯದಲ್ಲಿ ಬ್ರಹ್ಮಸಭೆಯು ನಂತೂರಿನ ಶ್ರೀ ಭಾರತೀ ಕಾಲೇಜಿನ ಶಂಕರ ಶ್ರೀ ಸಭಾಂಗಣದಲ್ಲಿ ನಡೆಯಿತು. ಮಂಗಳೂರಿನ ನಂತೂರು ಭಾರತಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬ್ರಹ್ಮಸಭೆಯ ಉದ್ಘಾಟನಾ ಸಮಾರಂಭ ಜರುಗಿತ್ತು. ಇನ್ನು ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಆರ. ಅಶೋಕ್ ಹಾರನಹಳ್ಳಿ ಅವರು ಉದ್ಘಾಟಿಸಿದರು. ತದ ಬಳಿಕ ಮಾತನಾಡಿದ ಅವರು, ಒಂದು ಕಾಲದಲ್ಲಿ ನಾನು
ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಇದಾಗಿದ್ದು ಸತತ ಹತ್ತು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದೆ. ಸಂಪೂರ್ಣ ಕೆಸರು ಮಯವಾಗಿರುವ ಈ ರಸ್ತೆ ಶೇಣಿಯಿಂದ ಹೊಸಮಜಲು ಎಂಬಲ್ಲಿಗೆ ಸಂಪರ್ಕ ಕಲ್ಪಿಸುತ್ತದೆ. ಅಮರ ಪಡ್ನೂರು ಗ್ರಾಮದ ಅತೀ ಪುರಾತನ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಲ್ಲದೆ 25 ಕ್ಕಿಂತ ಹೆಚ್ಚು ಮನೆಯವರು ಈ ರಸ್ತೆಯನ್ನೆ ಅವಲಂಬಸಿರುತ್ತಾರೆ. 1954 ನೇ ಇಸವಿಯಲ್ಲಿ ಪುನರ್ಜಿತ ರಸ್ತೆ ಇದೀಗ ಸಂಪೂರ್ಣ ಹದಗೆಟ್ಟು
ಮಂಗಳೂರು ದಸರಾ ಈ ಬಾರಿ ಹಿಂದಿನ ದಸರಾಕ್ಕಿಂತಲೂ ವಿಶಿಷ್ಟ ರೀತಿಯಲ್ಲಿ ನಡೆಯಲಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣ ನಾಥ ಕ್ಷೇತ್ರದ ನವೀಕರಣದ ರೂವಾರಿ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ತಿಳಿಸಿದ್ದಾರೆ. ಅವರು ಕುದ್ರೋಳಿ ಕ್ಷೇತ್ರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯವರಿಗೂ ಆಹ್ವಾನ ನೀಡಲಾಗುವುದು. ಅವರು ಭೇಟಿ ನೀಡುತ್ತಾರೆ ಎನ್ನುವ ವಿಶ್ವಾಸವಿದೆ. ಕೊರೋನ ಕಾರಣದಿಂದ ಈ ಹಿಂದಿನ ವರ್ಷ ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗಿಲ್ಲ.
ಬಂಟ್ವಾಳ: ವಿಶ್ವಕರ್ಮ ಸಮಾಜ ಸೇವಾ ಸಂಘ ಇದರ ವತಿಯಿಂದ 29 ನೇ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಕಲಶ ಪ್ರತಿಷ್ಠೆ, ಮಹಾಪೂಜೆ ನಡೆಯಿತು. ವಿಶ್ವಜ್ಯೋತಿ ಮಹಿಳಾ ಸಂಘದ ಸದಸ್ಯೆಯರಿಂದ ಭಜನೆ ನಡೆಯಿತು. ಈ ಸಂದರ್ಭ ಶಾಸಕ ರಾಜೇಶ್ ನಾಯ್ಕ್, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಮೊದಲಾದವರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ
ಕೇರಳದ ಕೊಚ್ಚಿಯಲ್ಲಿ ನಡೆದ ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿದ್ದ ಬೆಂಗಳೂರಿನ ವಿದ್ಯಾರ್ಥಿನಿ ಅಕ್ಷಿತಾ ಸತ್ಯನಾರಾಯಣ್ ಅವರು ಕರ್ನಾಟಕ ಮಿಸ್ ಕ್ವೀನ್ 2022 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಕ್ಷಿತಾ ಸತ್ಯನಾರಾಯಣ್ ಅವರು, ಬೆಂಗಳೂರಿನ ಮಹಾರಾಣಿ ಅಮ್ಮಣ್ಣಿ ಕಾಲೇಜಿನ ಪತ್ರಿಕೋದ್ಯಮ ಮತ್ತು ಮನೋವಿಜ್ಞಾನ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಮುಂಬೈಯಲ್ಲಿ ತರಬೇತಿ ಪಡೆದು ರೂಪದರ್ಶಿಯಾಗಿದ್ದಾರೆ. 2019ರ ಮಿಸ್ ಕರ್ನಾಟಕ
ಪುತ್ತೂರು: ಕಾಲುವೆ ವಿಚಾರದಲ್ಲಿ ಜಾಗ ಅತಿಕ್ರಮಣ ಆಗಿದ್ದರೆ ಯಾವುದೇ ನೋಟೀಸ್ ನೀಡದೇ ತೆರವು ಮಾಡಿ. ಇಂದು ಬೆಂಗಳೂರು, ನಾಳೆ ನಮ್ಮೂರು. ಆದ್ದರಿಂದ ತೆರವು ಕಾರ್ಯವನ್ನು ನಿರ್ದಾಕ್ಷಿಣ್ಯವಾಗಿ ಮಾಡಿ ಎಂದು ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಕಂದಾಯ ಅಧಿಕಾರಿಗಳು ಸೇರಿದಂತೆ ಗ್ರಾಪಂಗಳಿಗೆ ಕಡಕ್ ಆದೇಶ ನೀಡಿದರು. ಇದು ಮುರ ಗೌರ ಸಮುದಾಯ ಭವನದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು
ಹೆಣ್ಮಕ್ಕಳು ಶಿಕ್ಷಣ ಪಡೆಯಬಾರದು ಎನ್ನುವ ಹೊತ್ತಲ್ಲಿ ಅವರ ಶಿಕ್ಷಣಕ್ಕಾಗಿ ವಿದ್ಯಾರ್ಥಿನಿ ನಿಲಯ ತೆರೆದು ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆದವರು ಕರಾವಳಿಯ ಬಂಟರು. ಒಂದೆಡೆ ಸ್ವಾತಂತ್ರ್ಯದ ಕಿಚ್ಚು ಹಚ್ಚುತ್ತಿದ್ದ ಹೊತ್ತಲ್ಲೇ ಹೆಣ್ಮಕ್ಕಳ ಶಿಕ್ಷಣಕ್ಕಾಗಿ ಬಂಟರ ಸಂಘದವರು ಮಂಗಳೂರಿನಲ್ಲಿ ರಾಮಕೃಷ್ಣ ವಿದ್ಯಾರ್ಥಿನಿ ಭವನ ಆರಂಭಿಸಿದ್ದರು. ಸ್ವಾತಂತ್ರ್ಯ ಸಿಗೋದಕ್ಕೂ ಮೊದಲೇ ಸ್ಥಾಪನೆಗೊಂಡಿದ್ದ ವಿದ್ಯಾರ್ಥಿನಿ ಭವನಕ್ಕೀಗ ಅಮೃತೋತ್ಸವದ ಸಂಭ್ರಮ.ಮಂಗಳೂರು ನಗರದ




























