Home Posts tagged #v4newskarnataka (Page 149)

ಜೀವಂತ ನಾಗರ ಹಾವಿಗೆ ತನು ಎರೆದು ನಾಗರಪಂಚಮಿ ಆಚರಣೆ

ಕಾಪು ಸಮೀಪದ ಮಜೂರಿನ ಗೋವರ್ಧನ ಭಟ್ ಅವರು ಜೀವಂತ ನಾಗರ ಹಾವಿಗೆ ತನು ಎರೆದು,ಆರತಿ ಬೆಳಗಿಸಿ ಮಂಗಳವಾರ ನಾಗರಪಂಚಮಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಪ್ರತೀ ವರ್ಷ ನಾಗರ ಪಂಚಮಿಯಂದು ತನ್ನ ಮನೆಯಲ್ಲಿ ಶುಶ್ರೂಷೆಯಲ್ಲಿರುವ ನಾಗರ ಹಾವುಗಳಿಗೆ ತನು ಎರೆಯುವ ಗೋವರ್ಧನ ಭಟ್ ಅವರು ಈ ಬಾರಿ ಒಂದು ಹಾವಿಗೆ ಮನೆಯವರ ಜೊತೆಗೂಡಿ ತನು ಎರೆದು, ಪೂಜೆ ಮಾಡಿ, ನಾಗರ

ಸುರತ್ಕಲ್ ಫಾಜಿಲ್ ಕೊಲೆ ಪ್ರಕರಣ ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ನಡೆದ ಕೊಲೆ ?

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಎರಡು ದಿನದ ಬಳಿಕ ಸುರತ್ಕಲ್ ನಲ್ಲಿ ಕೊಲೆಯಾದ ಫಾಝಿಲ್ ಪ್ರಕರಣದಲ್ಲಿ ನಗರ ಪೆÇಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳವಾರ ಉಡುಪಿ ಉದ್ಯಾವರ ಸಮೀಪ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಜುಲೈ 28ರಂದು

ಏನೆಕಲ್ಲು: ಮಳೆಯ ಅವಾಂತರ: ದೇವಸ್ಥಾನದ ಕಾಂಪೌಂಡ್ ಕುಸಿತ

ನಿನ್ನೆ ಸುರಿದ ಭಾರೀ ಮಳೆಗೆ ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಹರಿಯುವ ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ನೀರು ದೇವಾಲಯದ ಒಳಂಗಾಣಕ್ಕೆ ಆವರಿಸಿತ್ತು. ನೀರಿನೊಂದಿಗೆ ಮಣ್ಣು ಹರಿದು ಬಂದು ದೇವಸ್ಥಾನದ ಒಳಾಂಗಣ ಮತ್ತು ಪರಿಸರ ಕೆಸರುಮಯವಾಗಿದೆ. ನೀರಿನಲ್ಲಿ ತೇಲಿಕೊಂಡು ಬಂದ ದೊಡ್ಡ ಗಾತ್ರದ ಮರದ ದಿಮ್ಮಿ ಹೊರಾಂಗಣದ ಕಾಂಪೌಂಡ್ ಬಳಿ ನಿಂತಿದೆ. ಕಾಂಪೌಂಡ್ ಕುಸಿದುಬಿದ್ದು ಅಪಾರ ನಷ್ಟ ಉಂಟಾಗಿರುವುದಾಗಿ ತಿಳಿದುಬಂದಿದೆ.

ಬೆಳ್ಳಾರೆ ಪ್ರವೀಣ್ ಹತ್ಯೆ ಪ್ರಕರಣ ಮತ್ತಿಬ್ಬರು ಆರೋಪಿಗಳ ಬಂಧನ

ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಆ.2 ರಂದು ಬಂಧಿಸಿದ್ದಾರೆ. ಬೆಳ್ಳಾರೆ ಪಲ್ಲಿಮಜಲು ನಿವಾಸಿಗಳಾದ ಸದ್ದಾಂ(32ವ) ಮತ್ತು ಹಾರಿಸ್(42ವ) ರವರು ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಈಗಾಗಲೇ ಇಬ್ಬರು ಆರೋಪಿಗಳಾದ ಶಫೀಕ್ ಮತ್ತು ಜಾಕೀರ್ ಅವರನ್ನು ಜು.28 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಪೆÇಲೀಸರು ಆರೋಪಿಗಳ ಹೆಚ್ಚಿನ ವಿಚಾರಣೆಗೆ ಪೊಲೀಸ್

ಫಾಜಿಲ್ ಹತ್ಯೆ ಪ್ರಕರಣ ಆರು ಮಂದಿ ಆರೋಪಿಗಳ ಬಂಧನ

ಸುರತ್ಕಲ್‍ನ ಮಂಗಳಪೇಟೆ ನಿವಾಸಿ ಮುಹಮ್ಮದ್ ಫಾಝಿಲ್ ಹತ್ಯೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಪಣಂಬೂರು ಎಸಿಪಿ ಅವರ ಕಚೇರಿಯಿಂದ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪೊಲೀಸ್ ಕಮಿಷನರ್ ಶಶಿಕುಮಾರ್, ಪ್ರಕರಣದ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆಯ ವೇಳೆ ಆರೋಪಿಗಳು ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಅವರು ಮಾಹಿತಿ ನಿಡಿದರು. ಘಟನೆಗೆ ಸಂಬಂಧಿಸಿದಂತೆ

ಬೈಂದೂರು ಧಾರಾಕಾರ ಮಳೆ : ಸ್ಥಳದಲ್ಲಿ ಬೀಡುಬಿಟ್ಟ ಕಂದಾಯ ಇಲಾಖೆ, ಅಗ್ನಿಶಾಮಕ ದಳ

ಎರಡು ದಿನಗಳಿಂದ ಭಾರಿ ಮಳೆ ಹಿನ್ನೆಲೆ ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡದ ಅಂಚಿನಲ್ಲಿರುವ ಶಿರೂರು ಬೈಂದೂರು ಕಳುಹಿತ್ಲು ಕಲ್ಮಕ್ಕಿಯ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ ಯಾವುದೇ ಸಂಪರ್ಕವಿಲ್ಲದೆ ಜನ ಕಂಗೆಟ್ಟಿದ್ದಾರೆ ಭಾರೀ ಮಳೆಯಿಂದಾದ್ದು ರಾತ್ರಿ ಹಲವಾರು ಮನೆಗಳಿಗೆ ನೀರು ನುಗ್ಗಿದೆ ,ರಾಜ್ಯ ಹೆದ್ದಾರಿ ಸಂಪೂರ್ಣ , ಕೆಲವು ಶಾಲೆಯ ಎದುರುಗಡೆ ಮುಳುಗಡೆಯಾಗಿದೆ ಯಾವುದೇ ವಾಹನ ಸಂಚಾರ ಇಲ್ಲದೆ ಸ್ಥಗಿತಗೊಂಡಿದೆ. ಹಲವಾರು ಮನೆಗಳು ರಸ್ತೆ ಸಂಪರ್ಕವನ್ನೇ

13ರಿಂದ ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜಾರೋಣಕ್ಕೆ ಸೂಚನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಇದೇ ಆಗಸ್ಟ್ 13 ರಿಂದ 15 ರವರೆಗೆ ಹರ್ ಘರ್ ತಿರಂಗ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳ ಕಟ್ಟಡಗಳ ಮೇಲೆ ಕಡ್ಡಾಯವಾಗಿ ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಅವರು ಸಂಬಂಧಿಸಿದ ಎಲ್ಲಾ ಇಲಾಖೆಗಳ ಮುಖ್ಯಸ್ಥರುಗಳಿಗೆ ನಿರ್ದೇಶನ ನೀಡಿದರು. ಅವರು ಆ.1ರ ಸೋಮವಾರ ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಹರ್ ಘರ್

ಸುಬ್ರಮಣ್ಯ: ಭಾರಿ ಮಳೆಗೆ ಗುಡ್ಡ ಕುಸಿದು ಇಬ್ಬರು ಮಕ್ಕಳ ದುರ್ಮರಣ

ಸುಬ್ರಹ್ಮಣ್ಯದ ಪರ್ವತಮುಖಿಯಲ್ಲಿ ಭಾರಿ‌ಮಳೆಗೆ ಮನೆ ಮೇಲೆ ಗುಡ್ಡಕುಸಿದು ಮಣ್ಣಿನಡಿ ಸಿಲುಕಿ ಇಬ್ಬರು ಮಕ್ಕಳು ದಾರುಣ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ‌ ನಡೆದಿದೆ.ಕಡಬ ತಾಲೂಕಿನ ಸುಬ್ರಹ್ಮಣ್ಯ ಕುಮಾರದಾರ ಪರ್ವತಮುಖಿ ಪ್ರದೇಶದಲ್ಲಿ ಸೋಮವಾರ ರಾತ್ರಿ ಸುಮಾರು 7 ಗಂಟೆಗೆ ಭಾರಿ ಮಳೆಗೆ ಮನೆ ಮೇಲೆ ಗುಡ್ಡಕುಸಿದು ಮನೆ ಸಂಪೂರ್ಣ ಮಣ್ಣಿನಡಿ ಬಿದ್ದಿದ್ದು ಇದರಲ್ಲಿ ಕುಸುಮಧಾರ ಮತ್ತು ರೂಪಾಶ್ರೀ ದಂಪತಿಗಳ ಇಬ್ಬರು ಹೆಣ್ಣು ಮಕ್ಕಳಾದ ಐದನೇ ತರಗತಿ ವಿದ್ಯಾಭ್ಯಾಸ

ಕುಕ್ಕೆ ಸುಬ್ರಹ್ಮಣ್ಯ ಭಾರಿ ಮಳೆ ಹಿನ್ನೆಲೆ : ಕ್ಷೇತ್ರ ದರ್ಶನಕ್ಕೆ ನಿರ್ಬಂಧ

ದ.ಕ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅದರಲ್ಲೂ ಸುಬ್ರಹ್ಮಣ್ಯ, ಕಲ್ಮಕಾರು, ಕೊಲ್ಲಮೊಗ್ರು,ಹರಿಹರ,ಬಾಳುಗೋಡು ಆಸುಪಾಸಿನ ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ಭಾಗದಲ್ಲಿ ಮುಂಜಾಗ್ರತ ಕ್ರಮವಹಿಸಲು ಎಸ್ ಡಿಆರ್ ಎಪ್ ಹಾಗೂ ಎನ್ ಡಿಆರ್ ಎಪ್ ತಂಡವನ್ನು ಆ ಭಾಗಕ್ಕೆ ಈಗಾಗಲೆ ಕಳುಹಿಸಿಕೊಡಲಾಗುತ್ತಿದೆ.ಸಂಬಂಧಿಸಿದ ಅಧಿಕಾರಿಗಳಿಗೂ ಕಟ್ಟೆಚ್ಚರ ವಹಿಸಿ ಮುಂಜಾಗ್ರತೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ.ನೆರೆ ಸಂದರ್ಭ ಸಾರ್ವಜನಿಕರು ಸಹಕರಿಸಿ, ಸುರಕ್ಷತೆ ಕಡೆ ಹೆಚ್ಚಿನ

ನಳಿನ್‍ಗೆ ತಡೆ ನಿಜವಾದ ಕಾರ್ಯಕರ್ತರಿಂದ ಅಲ್ಲ : ಜಗದೀಶ ಶೇಣವ

ಇತ್ತೀಚೆಗೆ ಬೆಳ್ಳಾರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಕಾರನ್ನು ತಡೆದು ದಿಗ್ಬಂಧನ ಹಾಕುವ ಕೆಲಸ ಆಕಾಂಕ್ಷಿಗಳು, ಅತೃಪ್ತರಿಂದ ಆಗಿದೆಯೇ ಹೊರತು ಬಿಜೆಪಿಯ ನಿಜವಾದ ಕಾರ್ಯಕರ್ತರಿಂದ ಅಲ್ಲ ಎಂದು ದ.ಕ ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ ಶೇಣವ ಹೇಳಿದ್ದಾರೆ.ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ಯೆಯಾದ ಪ್ರವೀಣ್ ನೆಟ್ಟಾರ್ ಮನೆಗೆ ತೆರಳುವಾಗ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಸೇರಿದಂತೆ ಇತರೆ ಶಾಸಕರಿದ್ದರೂ ಕೇವಲ