ಗ್ರಾಮದಲ್ಲಿ ಸಂಗ್ರಹಿಸಿದ ತ್ಯಾಜ್ಯಗಳನ್ನ ವಿಲೇವಾರಿ ಮಾಡೋ ಬದಲು ಗ್ರಾಮ ಪಂಚಾಯಿತಿನ ಗ್ರಂಥಾಲಯದಲ್ಲಿ ತುಂಬಿಸಿಟ್ಟಿದ್ದಾರೆ.ಇಲ್ಲಿ ಗ್ರಾಮಸ್ಥರು ಪುಸ್ತಕಗಳನ್ನು ದಿನಪತ್ರಿಕೆಗಳನ್ನ ಓದಬೇಕಾದರೆ ಈ ಕಸದ ರಾಶಿಗಳ ಮಧ್ಯೆ ಹಾಕಿರುವ ಟೇಬಲ್ ನಲ್ಲಿ ಮೂಗುಮುಚ್ಚಿಕೊಂಡು ಓದಬೇಕಾದ ಪರಿಸ್ಥಿತಿ ನಿರ್ಮಿಸಿದೆ. ಇದು ಅಂಬಲಪಾಡಿ ಗ್ರಾಮ ಪಂಚಯತ್ ವ್ಯಾಪ್ತಿಯ ಅವ್ಯವಸ್ಥೆ.
ಮೂಡುಬಿದಿರೆ: ಬೆಳ್ಳಿಹಬ್ಬ ಸಂಭ್ರಮದಲ್ಲಿರುವ ಭಾರತೀಯ ಜೈನ್ ಮಿಲನ್ ಮೂಡುಬಿದಿರೆ ಹಾಗೂ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಜಂಟಿ ಆಶ್ರಯದಲ್ಲಿ ’ಸಂಮಿಲನ್ ‘2021’ಕ್ರೀಡಾಕೂಟವು ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಕ್ಯಾಂಪಸ್‌ನಲ್ಲಿ ನಡೆಯಿತು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ವೀರಸಾಗರ ಸಭಾಂಗಣದಲ್ಲಿ ಸಂಮಿಲನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೈನ ಸಮುದಾಯದವರು ಇಂದು ಸುಶಿಕ್ಷಿತರಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಶಿಕ್ಷಣ,
ಬೆಂಗಳೂರು, ನ.24: ಮಂಗಳೂರು ಸ್ಮಾರ್ಟ್ ಸಿಟಿ ಎಕ್ಸಿಕ್ಯುಟಿವ್ ಇಂಜಿನಿಯರ್ ಕೆ.ಎಸ್.ಲಿಂಗೇಗೌಡ ಸೇರಿದಂತೆ ರಾಜ್ಯದ 15 ಕಡೆಗಳಲ್ಲಿ ಏಕಕಾಲದಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಮತ್ತು ಕಚೇರಿಗಳಿಗೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು ಕಡತ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೆ.ಎಸ್ ಲಿಂಗೇಗೌಡ, ಮಂಡ್ಯ ಹೆಚ್.ಎಲ್.ಬಿ.ಸಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಶ್ರೀನಿವಾಸ್ ಕೆ, ದೊಡ್ಡಬಳ್ಳಾಪುರ
ಭಾರತದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಪ್ರಯುಕ್ತ ಕಲೆ ಮತ್ತು ಸಾಹಿತ್ಯಕ್ಕಾಗಿ ಸಮರ್ಪಿತವಾದ ರಾಷ್ಟ್ರೀಯ ಸಂಘಟನೆಯಾದ ಮಂಗಳೂರು ಸಂಸ್ಕಾರ ಭಾರತೀಯ ಆಶ್ರಯದಲ್ಲಿ ನವೆಂಬರ್ 28 ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪ್ರಸಿದ್ಧ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಕ್ರಾಂತಿಸೂರ್ಯ ಭಗತ ಸಿಂಹ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಪುರುಷೋತ್ತಮ ಕೆ. ಭಂಡಾರಿ ಅಡ್ಯಾರು ತಿಳಿಸಿದರು. ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಖಾಸಗಿ ಟಿವಿ ವರದಿಗಾರನ ಮೇಲೆ ಹಲ್ಲೆ ನಡೆದಿದ್ದು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಸರಕಾರ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಇನ್ನು ಮುಂದೆ ಇಂತಹ ಘಟನೆಗಳು ನಡೆದಲ್ಲಿ ಅದಕ್ಕೆ ಸರಕಾರವೇ ಹೊಣೆ ಹೊರಬೇಕು ಎಂಬುದು ನಮ್ಮ ಆಗ್ರಹ ಎಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಮತ್ತು ಸದಸ್ಯರು ಮಾನ್ಯ ಮುಖ್ಯ ಮಂತ್ರಿಗಳಿಗೆ
ಮಂಗಳೂರು: ದಕ್ಷಿಣ ಕನ್ನಡ ವಿಧಾನ ಪರಿಷತ್ ಕ್ಷೇತ್ರಕ್ಕೆ ಡಿಸೆಂಬರ್ 10 ರಂದು ನಡೆಯುವ ಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಸ್ ಡಿಪಿಐ ಪಕ್ಷದ ಅಭ್ಯರ್ಥಿಯಾಗಿ ರಾಜ್ಯ ಕಾರ್ಯದರ್ಶಿ, ಯುವ ನಾಯಕ ಶಾಫಿ ಬೆಳ್ಳಾರೆಯವರು ಇಂದು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳಲ್ಲಿ ಇರುವಂತಹ ಸಮಸ್ಯೆ ಪರಿಹಾರವೇ ನನ್ನ ಗುರಿ ಎಂದು ಹೇಳಿದರು.
ಮಂಗಳೂರು: ಮಂಗಳೂರಲ್ಲಿ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಜುನಾಥ್ ಭಂಡಾರಿ ಸ್ಪರ್ಧಿಸುತ್ತಿದ್ದು, ಇಂದು ಅವರು ಚುನಾವಣಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರಿಗೆ ನಾಮಪತ್ರ ಸಲ್ಲಿಸಿದರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್ ಭಂಡಾರಿ, ವಿದ್ಯಾರ್ಥಿ ಜೀವನದಿಂದಲೇ ನಾನು ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದೇನೆ. ಕಳೆದ 40 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯನಾಗಿದ್ದೇನೆ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದ
ಕರ್ನಾಟ ರಾಜ್ಯ ವಿದ್ಯಾರ್ಥಿ ಒಕ್ಕೂಟವು ಯುವ ಜನಾಂಗದದಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪೋಷಿಸಲು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುತ್ತಾ ಬಂದಿರುವ ಪ್ರತಿಭೋತ್ಸವ ರಾಜ್ಯ ಸಮಾವೇಶವು ನವೆಂಬರ್ 26 ರಿಂದ 28 ರ ವರೆಗೆ ಕೃಷ್ಣಾಪುರದಲ್ಲಿ ನಡೆಯಲಿದೆ ಎಂದು ರಾಜ್ಯ ಪ್ರತಿಭೋತ್ಸವ ಸಮಿತಿಯ ಚೇರ್‌ಮೆನ್ ಕೆ.ಎಂ. ಮುಸ್ತಫಾ ನಈಮಿ ಹಾವೇರಿ ತಿಳಿಸಿದರು. ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.
ಯೇನೆಪೋಯ ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಟ್ಟ ಯೇನೆಪೋಯ ನರ್ಸಿಂಗ್ ಕಾಲೇಜು ಮಂಗಳೂರು ಮತ್ತು ಭಾರತದ ಶುಶ್ರೂಷಕರ ಸಂಶೋಧನಾ ಸೊಸೈಟಿ ಜಂಟಿ ಸಹಯೋಗದಲ್ಲಿ ನವೆಂಬರ್ 26 ಮತ್ತು 27 ರಂದು 24 ನೇ ರಾಷ್ಟ್ರಮಟ್ಟದ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಯೆನೆಪೋಯ ನರ್ಸಿಂಗ್ ಕಾಲೇಜಿನ ಡೀನ್ ಡಾ. ಲೀನಾ ಕೆ.ಸಿ. ತಿಳಿಸಿದರು. ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಸಂಶೋಧನಾ ಬರಹಗಳ ಮೂಲಕ ನರ್ಸಿಂಗ್ ಪಾಂಡಿತ್ಯವನ್ನು ಬಲಪಡಿಸುವುದು
ಮಂಜೇಶ್ವರ: ಸಿಪಿಐಎಂ ರಾಜ್ಯ ಸಮಿತಿ ತೀರ್ಮಾನ ಪ್ರಕಾರ ಕೇರಳ ಎಲ್ಲಾ ಏರಿಯಾ ಕೇಂದ್ರಗಳಲ್ಲಿ ಪೆಟ್ರೋಲ್ ಡಿಸೇಲ್ ಅಡುಗೆ ಅನಿಲ ಬೆಲೆ ಏರಿಕೆ ಮಾಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಉಪ್ಪಳ ಪೋಸ್ಟ್ ಆಫೀಸ್ ಎದುರುಗಡೆ ಧರಣಿ ಹಮ್ಮಿಕೊಳಲಾಯಿತು. ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ಕಾರ್ಯದರ್ಶಿ ಕಾಂ ಕೆ ವಿ ಕುಂಞಿಹಿರಾಮನ್ ಧರಣಿ ಉದ್ಘಾಟಿಸಿದರು. ಅಬ್ದುಲ್ ರಝಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದ್ದರು.


















