ಪುತ್ತೂರು: ಬೆಂಗಳೂರಿನ ಭಟ್ ಬಯೋಟೆಕ್ ಹಾಗೂ ತಾಲೂಕಿನ ಶಾಂತಿಗೋಡು ಗ್ರಾಮದ ನವಚೇತನ ರಿಟೈರ್‌ಮೆಂಟ್ ಟೌನ್‌ಶಿಪ್ ವತಿಯಿಂದ ಇಲ್ಲಿಯ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಐದು ಆಮ್ಲಜನಕ ಕಾನ್ಸಂಟ್ರೇಟರ್ ಹಾಗೂ ಎರಡು ಸಾವಿರ ವಿಟಿಎಂ ಕಿಟ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.ಸರಳ ಕಾರ್ಯಕ್ರಮದಲ್ಲಿ ಭಟ್ ಬಯೋಟೆಕ್ ಸಂಸ್ಥೆಯ ಡಾ.ಶ್ಯಾಮ್ ಭಟ್ ಶಾಸಕ ಸಂಜೀವ ಮಠಂದೂರು ಅವರಿಗೆ
ಮೂಡುಬಿದಿರೆ ತಾಲೂಕಿನಲ್ಲಿ ಪಡುಕೊಣಾಜೆಯಲ್ಲಿ ಚಿರತೆಯೊಂದು ಮನೆಯಂಗಳಕ್ಕೆ ಆಗಮಿಸಿ ನಾಯಿಯೊಂದನ್ನು ಹಿಡಿದುಕೊಂಡು ಹೋದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಪಡುಕೊಣಾಜೆಯ ಸತೀಶ್ ಎಂಬವರ ಮನೆಯ ಬಳಿ ರಾತ್ರಿ ಅಡ್ಡಾಡುತ್ತಿದ್ದ ಚಿರತೆ ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಿದೆ. ಸ್ಥಳಕ್ಕೆ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಶಿರ್ತಾಡಿ ಗ್ರಾ. ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಜತೆ ಮಾತುಕತೆ
ಪೆಟ್ರೋಲ್ ,ಡೀಸೆಲ್ ಬೆಲೆ ಏರಿಕೆಯ ಬಗ್ಗೆ ನೈಜ ಕಾರಣವನ್ನು ಜನತೆಗೆ ತಿಳಿಸಲು ಬಿಜೆಪಿ ನೇತ್ರತ್ವದ ಕೇಂದ್ರ ಸರಕಾರ ಶ್ವೇತ ಪತ್ರ ಹೊರಡಿಸಲಿ.ಬೆಲೆ ನಿಯಂತ್ರಣಕ್ಕೆ ತಕ್ಷಣ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಲಿ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.ಅವರು ಮಂಗಳೂರಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಇಂಧನದ ಬೆಲೆ ಏರಿಕೆಯ ಹಿಂದಿನ ಯುಪಿಎ ಸರಕಾರ ಪೆಟ್ರೋಲ್ ಕಂಪೆನಿಗಳಿಗೆ
ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಪದ್ಮಶ್ರೀ ಪುರಸ್ಕೃತ ದಿವಂಗತ ಮಿಲ್ಕಾ ಸಿಂಗ್ ಅವರನ್ನು ಸ್ಮರಣೆ ಮಾಡುವ ಕಾರ್ಯಕ್ರಮವು ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ದಿವಂಗತ ಮಿಲ್ಕಾ ಸಿಂಗ್ ಅವರ ಭಾವಚಿತ್ರಕ್ಕೆ ಗಣ್ಯರು ಮಾಲಾರ್ಪಣೆ ಮಾಡಿ ಸಂತಾಪ ಸೂಚಿಸಿದರು. ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಮಾತನಾಡಿ, ಪದ್ಮಶ್ರೀ ಪುರಸ್ಕೃತ ದಿವಂಗತ ಮಿಲ್ಕಾ ಸಿಂಗ್ ಅವರು ಸ್ವಯಂ ಪ್ರಯತ್ನದ ಮೂಲಕ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಧೀಮಂತ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜೆ.ಎಮ್.ಎಫ್.ಸಿ ನ್ಯಾಯಾಲಯ ಕಟ್ಟಡವು ಅಗ್ನಿಗಾಹುತಿಯಾಗಿದ್ದು, ನ್ಯಾಯಾಲಯದಲ್ಲಿದ್ದ ದಾಖಲೆಗಳು ಸಂಪೂರ್ಣ ಸುಟ್ಟು ಹೋಗಿದೆ. ಈ ಅವಘಡ ಬೆಳಿಗ್ಗಿನ ಜಾವಾ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರು. ತಕ್ಷಣವೇ ಕಾರ್ಯಾಚರಣೆ ನಡೆಸಿ ಕೆಲವು ತಾಸುಗಳ ಸತತ ಪ್ರಯತ್ನದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿರುವುದಾಗಿ ಅಗ್ನಿಶಾಮಕ ದಳ
ಮೂಡುಬಿದಿರೆ : ನಿಡ್ಡೋಡಿಯ ಪ್ರಸ್ತಾವಿತ ಸೀಫುಡ್ ಪಾರ್ಕ್‌ನಿಂದ ಪರಿಸರ ಮಾಲಿನ್ಯ ವ್ಯಾಪಕವಾಗಿ ಹರಡಲಿದೆ. ಜಲ ಸಂಪನ್ಮೂಲ ಕಲುಷಿತವಾಗಿ ಕೃಷಿ ಚಟುವಟಿಕೆಗಳಿಗೆ ಮಾರಕವಾಗಿ ಪರಿಣಮಿಸಲಿದೆ. ಇಂಥ ಯೋಜನೆ ನಿಡ್ಡೋಡಿಗೆ ತಕ್ಕುದಾಗಿಲ್ಲ’ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಅಭಿಪ್ರಾಯಪಟ್ಟರು. ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ನಿಡ್ಡೋಡಿಗೆ ಸೀಫುಡ್ ಪಾರ್ಕ್ ಬೇಕೆಂಬುವವರು ಕಾರವಾರದಲ್ಲಿ ಹಲವಾರು ವರ್ಷಗಳ ಹಿಂದೆ
ಜ್ಯೋತಿ ಚಲನಚಿತ್ರ ಮಂದಿರದ ಬಳಿ ಬಸ್ ಬೇ ನಿರ್ಮಾಣ ಯೋಜನೆಯ ಅಂಗವಾಗಿ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಅಧಿಕಾರಿಗಳೊಂದಿಗೆ ತೆರಳಿ ಸ್ಥಳ ವೀಕ್ಷಣೆ ನಡೆಸಿದರು.ಆ ಬಳಿಕ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಜ್ಯೋತಿ ಟಾಕೀಸ್ ಬಳಿಯಿಂದ ಬಂಟ್ಸ್ ಹಾಸ್ಟೆಲ್ ಹೋಗುವ ದಾರಿಯಲ್ಲಿ ಬಸ್ ಬೇ ನಿರ್ಮಾಣದ ಯೋಜನೆ ರೂಪಿಸಲಾಗಿದೆ. ಸಾಮಾನ್ಯ ದಿನಗಳಲ್ಲಿ ಈ ರಸ್ತೆಯಲ್ಲಿ ವಾಹನ ದಟ್ಟಣೆಯಿಂದ ಉಂಟಾಗುವ ಟ್ರಾಫಿಕ್ ಜಾಮ್ ಸಮಸ್ಯೆಯನ್ನು
ಸಂತ ಎಲೋಶಿಯಸ್ ಗೊನ್ಝಾಗ ಶಾಲೆಯ 2021-22ನೇ ಸಾಲಿನ ಹೊಸ ಶೈಕ್ಷಣಿಕ ವರ್ಷದ ಉದ್ಘಾಟನೆಯು ಅಂತರ್ಜಾಲ ಮುಖಾಂತರ ನಡೆಯಿತು. ಉದ್ಘಾಟಿಸಿ ಮಾತನಾಡಿದ ಸಂತ ಅಲೋಶಿಯಸ್ ಸಮೂಹ ಸಂಸ್ಥೆಯ ರೆಕ್ಟರ್ ವಂ. ಫಾ. ಮೆಲ್ವಿನ್ ಪಿಂಟೊ ಎಸ್.ಜೆ.ಅವರು ‘ಆದ್ಯತೆಯ ಮೇರೆಗೆ ಇಡೀ ದಿನದ ವೇಳಾಪಟ್ಟಿ ತಯಾರಿಸುವುದು ಹಾಗೂ ಸೃಜನಶೀಲತೆಯನ್ನು ಬೆಳೆಸುವಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಪ್ರಚಲಿತ ಸನ್ನಿವೇಶವನ್ನು ಸಮರ್ಥವಾಗಿ ಹೇಗೆ ಎದುರಿಸಬಹುದು’ ಎಂಬ ಬಗ್ಗೆ ಕಿವಿಮಾತು
ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಆಗಮಿಸಿದ ಪ್ರಯಾಣಿಕನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 20.89 ಲಕ್ಷ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕಾಸರಗೋಡು ಮೂಲದ ಪ್ರಯಾಣಿಕನಿಂದ ಈ ಚಿನ್ನವನ್ನು ಪತ್ತೆ ಹಚ್ಚಲಾಗಿದೆ. ತಪಾಸಣೆ ವೇಳೆ ಆರೋಪಿಯು 430ಗ್ರಾಂ ತೂಕದ ಚಿನ್ನವನ್ನು ಪೌಡರ್ ಮಾಡಿ ಗಮ್‌ನೊಂದಿಗೆ ಮಿಕ್ಸ್ ಮಾಡಿ
ಬೆಂಗಳೂರು: ಬೆರಳ ತುದಿಯಲ್ಲಿ ಮಾಹಿತಿ ಲಭ್ಯವಾಗಿಸುವ ತಂತ್ರಜ್ಞಾನದ ಯುಗದಲ್ಲಿ ಸುದ್ದಿ ಬಿತ್ತರಿಸುವ ರಭಸದಲ್ಲಿ ಸುದ್ದಿಯ ಸಾರವನ್ನು ಮರೆಯುವಂತಾಗಬಾರದು ಎಂಬ ಎಚ್ಚರವೂ ಇಂದು ಅಗತ್ಯ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.ಅವರು ಬೆಂಗಳೂರಿನಲ್ಲಿ ನಡೆದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸುಮಾರು ಎರಡು


















