Home Posts tagged #v4stream (Page 285)

ಕಟೀಲಮ್ಮನ ಕ್ಷೇತ್ರಕ್ಕೆ ಬಂದು ತಾನು ಮಾಡಿದ ತಪ್ಪೆಂದು ಕಣ್ಣೀರಿಟ್ಟ ಆಲ್ಬರ್ಟ್ ಫೆರ್ನಾಂಡಿಸ್..!

ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬಗ್ಗೆ ಕೆಲವು ದಿನಗಳ ಹಿಂದೆ ಅಶ್ಲೀಲ ಪದ ಬಳಸಿ ಅವಹೇಳನ ಮಾಡಿದ ಆರೋಪಿ ಆಲ್ಬರ್ಟ್ ಫೆರ್ನಾಂಡಿಸ್ ಮೂಲತಃ ಬಜ್ಪೆ ನಿವಾಸಿ ಇವರು ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದು ಈತನ ಹೇಳಿಕೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದು . ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು .ಇದೀಗ ಈ ವ್ಯಕ್ತಿ ತಾನು ಮಾಡಿದ

ದಿಢೀರ್ ದಾಳಿ ನಡೆಸಿ ರಾಜ್ಯದ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಎಸಿಬಿ ಅಧಿಕಾರಿಗಳು..!

ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ 9 ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಸಂಬಂಧ ಮಾಹಿತಿ ಆಧರಿಸಿ ಬೆಳಗ್ಗೆ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. ಶೋಧ ಕಾರ್ಯದಲ್ಲಿ ಚಿನ್ನ ಮತ್ತು ಆಸ್ತಿಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ದಿಢೀರನೇ ಎಸಿಬಿ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಇಂದು

ಉರ್ವ ಪೊಲೀಸ್ ಠಾಣೆ ಸಿಬ್ಬಂದಿ ಮೇಲೆ ಹಲ್ಲೆ..! : ಪ್ರಕರಣ ದಾಖಲು

ಮಂಗಳೂರು : ಉರ್ವ ಪೊಲೀಸ್ ಠಾಣೆಗೆ ಬಂದ ಮೂವರು ಅಲ್ಲಿನ ಸಿಬ್ಬಂದಿಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದು, ಹಲ್ಲೆಗೆ ಯತ್ನಿಸಿದ್ದಾರೆ. ಈ ಪ್ರಕರಣದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಮಂಗಳೂರಿನ ಉರ್ವ ಠಾಣೆ ವ್ಯಾಪ್ತಿಯ ಅಪಾರ್ಟ್‍ಮೆಂಟ್‍ನಲ್ಲಿ ನಿರ್ವಹಣೆ ಶುಲ್ಕ ಕೊಡುವುದು ಹಾಗೂ ನೀರಿನ ಸಂಪರ್ಕ ಒದಗಿಸುವ ಕುರಿತು ಗಲಾಟೆ ನಡೆದಿತ್ತು. ಈ ಬಗ್ಗೆ ಮೇ ತಿಂಗಳಲ್ಲಿ ಎರಡು ಪ್ರತ್ಯೇಕ ಪ್ರಕರಣ

ಭಾರೀ ಮಳೆ : ದಕ್ಷಿಣ ಕನ್ನಡ ಆರೆಂಜ್ ಅಲರ್ಟ್ ಘೋಷಣೆ

ಕರಾವಳಿಯಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರೆದಿದ್ದು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ನಾಲ್ಕು ದಿನಗಳ ಕಾಲ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪೂರ್ವ ಅರಬ್ಬಿ ಸಮುದ್ರ ಹಾಗೂ ಕಚ್ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರೀ ಮಳೆ ಮುಂದುವರೆದಿದೆ. ಉತ್ತರ ಕನ್ನಡ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ,

ಬನ್ನೂರಿನ ಕಜೆ ಎಂಬಲ್ಲಿ ಕುಸಿದು ಬೀಳುವ ಹಂತದಲ್ಲಿರುವ ಮನೆ:ಕಾವು ಹೇಮನಾಥ್ ಶೆಟ್ಟಿ ಭೇಟಿ ಪರಿಶೀಲನೆ

ಪುತ್ತೂರು ತಾಲೂಕು ಬನ್ನೂರು ಗ್ರಾಮದ ಕಜೆ ಎಂಬಲ್ಲಿಯ ನಿವಾಸಿ ಸಂತೋಷ್ ಎಂಬವರ ಮನೆಯ ದಕ್ಷಿಣ ಭಾಗದ ಮಣ್ಣನ್ನು ಪಕ್ಕದ ಮನೆಯವರು ಅವೈಜ್ಞಾನಿಕವಾಗಿ ಅಗೆದ ಕಾರಣ ವಿಪರೀತ ಮಳೆಯಿಂದ ಮಣ್ಣು ಕುಸಿಯುತ್ತಿದೆ. ಕೆಲವೇ ಅಡಿಗಳ ಅಂತರದಲ್ಲಿ ಸಂತೋಷ್ ಅವರ ಮನೆಯು ಇರುವುದರಿಂದ ಮತ್ತು ಪಕ್ಕದ ಮನೆ ಸುಮಾರು 30  ಅಡಿಗಳಷ್ಟು ಆಳದಲ್ಲಿ ಇರುವುದರಿಂದ ಎರಡೂ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ್

ಮಂಗಳೂರಿನ ಎಸ್‌ ಸಿಡಿಸಿಸಿ ಬ್ಯಾಂಕ್‌ ನಿಂದ ರೈತಸ್ಪಂದನ ಕಾರ್ಯಕ್ರಮ:ವಿವಿಧ ಕೃಷಿ ಸಾಲ ವಿತರಣೆ

ಮಂಗಳೂರು: ರಾಜ್ಯದ ಕೋವಿಡ್ ಸಂತ್ರಸ್ತರ ಕುಟುಂಬದ 81ಕೋಟಿ ರೂ. ರೈತರ ಸಾಲಮನ್ನಾ ಮಾಡುವ ಗುರಿಯನ್ನು ಸರಕಾರ ಹೊಂದಿದೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.  ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಬ್ಯಾಂಕ್ ವತಿಯಿಂದ ಹಮ್ಮಿಕೊಂಡ ’ರೈತ ಸ್ಪಂದನ’ ಕಾರ್ಯಕ್ರಮದಲ್ಲಿ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ಕೃಷಿಕರಿಗೆ ವಿವಿಧ ರೀತಿಯ ಸಾಲ ವಿತರಿಸಿದರು. ಬಳಿಕ ಮಾತನಾಡಿದ್ರು, ಕೋವಿಡ್ ಸಂತ್ರಸ್ತ

ಬಿಜೆಪಿ ಮತ್ತು ಕಾಂಗ್ರೆಸ್ ಪ್ರತಿಭಟನಾಕಾರರ ಮುಖಾಮುಖಿ: ಕಾವಳಕಟ್ಟೆಯಲ್ಲಿ ವಾಗ್ವಾದ

ಬಂಟ್ವಾಳ: ಭಿನ್ನ ಉದ್ದೇಶಗಳಿಗೆ ಪ್ರತಿಭಟನೆ ನಡೆಸಲು ಜಮಾಯಿಸಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯ ಕರ್ತರ ನಡುವೆ ವಾಗ್ವಾದ ನಡೆದು ಪರಸ್ಪರ ಹೊಯೈ ಕೈ ನಡೆದ ಘಟನೆ ಕಾವಳಕಟ್ಟೆಯಲ್ಲಿ ನಡೆದಿದೆ. ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಸಿದ್ದತೆ ನಡೆಸಿದ್ದರು. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕಾವಳಮೂಡೂರು ಗ್ರಾ.ಪಂ. ನೀರು ಹಾಗೂ ಮನೆ ತೆರಿಗೆಯನ್ನು ಏಕಾಏಕಿ ಏರಿಕೆಯನ್ನು

ಆಳ್ವಾಸ್‌ ನ ಇಬ್ಬರು ಕ್ರೀಡಾಪಟುಗಳು ಟೋಕಿಯೊ ಒಲಿಂಪಿಕ್ಸ್ ಗೆ ಆಯ್ಕೆ

ಮೂಡುಬಿದಿರೆ: ಜುಲೈ 23ರಿಂದ ಜಪಾನಿನ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟ ಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಇಬ್ಬರು ಕ್ರೀಡಾ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆಳ್ವಾಸ್‌ನ ಕ್ರೀಡಾ ವಿಭಾಗ ದತ್ತು ಶಿಕ್ಷಣದ ಅಡಿಯಲ್ಲಿ ವ್ಯಾಸಂಗ ಮಾಡುತ್ತಿರುವ ಧನಲಕ್ಷಿ ಹಾಗೂ ಶುಭ ಇವರು 4*400 ಮಿಕ್ಸಡ್  ರಿಲೇಯಲ್ಲಿ ದೇಶದ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಭತ್ತ ಕೃಷಿಯಲ್ಲಿ ತೊಡಗಿಸಿಕೊಂಡ ನಿಟ್ಟೆ ಪಿಯು ಕಾಲೇಜಿನ ವಿದ್ಯಾರ್ಥಿಗಳು

ಉಳ್ಳಾಲ: ಮಂಗಳೂರಿನ ನಿಟ್ಟೆ ಶಂಕರ್ ಅಡ್ಯಂತಾಯ ಸ್ಮಾರಕ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಪಿಲಾರು ಇರ್ನೂರು ಗುತ್ತು ಗದ್ದೆಯಲ್ಲಿ ಭತ್ತದ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಕಾಲೇಜಿನ ಎನ್‍ಸಿಸಿ ವಿಭಾಗದ ಹಲವು ವಿದ್ಯಾರ್ಥಿಗಳು ಭತ್ತದ ನಾಟಿಯಲ್ಲಿ ತಮ್ಮನ್ನು ತೊಡಗಿಸಿದ್ದು, ಕೃಷಿ ಚಟುವಟಿಕೆಗಳನ್ನು ಮತ್ತೆ ನೆನಪಿಸಿಕೊಂಡರು.    ಮಾಜಿ ಶಾಸಕ ಜಯರಾಮ ಶೆಟ್ಟಿ ಕೆ. ಭಾಗವಹಿಸಿ ಮಾತನಾಡಿ ಕೃಷಿ ಕ್ಷೇತ್ರ ಆಧುನೀಕರಣಗೊಳ್ಳಬೇಕು, ಬದಲಾವಣೆಗಳಾಗಬೇಕು ಅನ್ನುವ

ಗದ್ದೆಗಿಳಿದು ಉಳುಮೆ ಮಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್..!

ಮೂಡುಬಿದಿರೆ : ವಿವಿಧ ಕೆಲಸ ಕಾರ್ಯಗಳ ಮೂಲಕ ಒಂದಲ್ಲ ಒಂದು ರೀತಿಯಲ್ಲಿ ಗಮನ ಸೆಳೆಯುತ್ತಿರುವ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮತ್ತು ಯುವಕರು ಕೃಷಿಯತ್ತ ಒಲವು ತೋರಿಸಬೇಕೆಂಬ ಉದ್ದೇಶದಿಂದ ಮಂಗಳವಾರದಂದು ಮೂಡುಬಿದಿರೆಯ ಜೈನ್ ಪೇಟೆಯ ಬಳಿ ಇರುವ ಆಸಿಸ್ ಪಿಂಟೋ ಗದ್ದೆಯಲ್ಲಿ ಕೋಣ ಮತ್ತು ಟಿಲ್ಲರ್‌ನಲ್ಲಿ ಉಳುವೆ ಮಾಡುವ ಮೂಲಕ ಯುವಕರಿಗೆ ಮಾದರಿಯಾದರು. ಬ್ಲಾಕ್ ಕಾಂಗ್ರೆಸ್ ಮತ್ತು ಕಿಸಾನ್ ಘಟಕದ ವತಿಯಿಂದ ಈ