ಬ್ರಹ್ಮಾವರ : ಬಾಲಕಿಯರ ಯಕ್ಷಗಾನ ತಂಡದಿಂದ 1334 ಪ್ರದರ್ಶನ ಕಂಡ ಶ್ರೀ ಕೃಷ್ಣ ಪಾರಿಜಾತ ಯಕ್ಷಗಾನ

ಬ್ರಹ್ಮಾವರ : ಬ್ರಹ್ಮಾವರ ಬಳಿಯ ಚೇರ್ಕಾಡಿಯಲ್ಲಿ ಬಡಗುತಿಟ್ಟಿನ ಯಕ್ಷಗಾನ ಸವ್ಯಸಾಚಿ ಗುರು ಮಂಜುನಾಥ್ ಪ್ರಭು 32 ವರ್ಷದ ಹಿಂದೆ ಸ್ಥಾಪಿಸಿದ ಕಲಾಶ್ರೀ ಬಾಲಕಿಯರ ಯಕ್ಷಗಾನ ಮೇಳದವರಿಂದ ಶ್ರೀ ಕೃಷ್ಣ ಪಾರಿಜಾತ ಪ್ರಸಂಗ ನೀಲಾವರ ಶ್ರೀ ಮಹಿಷಮರ್ಧಿನೀ ದೇವಸ್ಥಾನದಲ್ಲಿ ಜರುಗಿತು.

ಎಂಜಿನಿಯರಿಂಗ್ ಸೇರಿದಂತೆ ನಾನಾ ಉನ್ನತ ಶಿಕ್ಷಣ ಪಡೆಯುವ 7 ಯುವತಿಯರಿಂದ ಪ್ರದರ್ಶನ ಕಂಡ ಶ್ರೀ ಕೃಷ್ಣ ಪಾರಿಜಾತ ಪ್ರಸಂಗ ಯಕ್ಷಗಾನ ಈ ತಂಡದ 1334 ನೇ ಪ್ರದರ್ಶನವಾಗಿದೆ .

ರಜಾ ದಿನದಲ್ಲಿ ಮಂಜುನಾಥ್ ಪ್ರಭುಗಳಿಂದ ಬಡಗುತಿಟ್ಟಿನ ಸಾಂಪ್ರದಾಯಕ ಯಕ್ಷಗಾನ ಶಿಕ್ಷಣ ಪಡೆದು , ಮುಂಬಾಯಿ, ಬೆಂಗಳೂರು ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲಿ ಇವರ ತಂಡದಿಂದ ನಡೆದ ಪ್ರದರ್ಶನ ಜನಮೆಚ್ಚುಗೆ ಪಡೆದಿದೆ.

180 ನಿಮಿಷದ ಯಕ್ಷಗಾನ ಪ್ರಸಂಗದಲ್ಲಿ ಬಾಲ ಗೋಪಾಲ ಸೇರಿದಂತೆ ಕೃಷ್ಣ ,ಸತ್ಯಭಾಮಾ , ದೇವೆಂದ್ರ , ಅಗ್ನಿ, ಈಶ್ವರ, ವನ ಪಾಲಕ ಹೀಗೆ 7 ಪಾತ್ರಗಳ ಪಾತ್ರವಿದ್ದ ಪ್ರಸಂಗದಲ್ಲಿ ವೈಷ್ಣವಿ ಆಚಾರ್ಯ, ಶ್ರೀನಿಧಿ ಆಚಾರ್ಯ, ಸಿಂಚನ ಆಚಾರ್ಯ, ಸುಮನ ಆಚಾರ್ಯ, ಕೃತಿ ಭಟ್, ವೃಂದಾ ಭಟ್, ಮತ್ತು ಶರಣ್ಯ ನಾಯ್ಕ್ ಪಾತ್ರದಲ್ಲಿದ್ದು, ಭಾಗವತರಾಗಿ ಶಿವಶಂಕರ ಹರಿಹರಪುರ ,ಚಂಡೆ ರಾಮಕೃಷ್ಣ ಮಂದಾರ್ತಿ, ಮದ್ದಳೆವಾದನ ಮತ್ತು ನಿರ್ದೇಶನದಲ್ಲಿ ಮಂಜುನಾಥ ಪ್ರಭು ಸಮರ್ಥವಾಗಿ ನಿರ್ವಹಿಸಿದ್ದಾರೆ.

Related Posts

Leave a Reply

Your email address will not be published.