ತೋಕೂರು: ಗಿಡಗಳನ್ನು ಮಕ್ಕಳಂತೆ ಪೋಷಿಸಿ ಬೆಳಸಿ – ಶ್ರೀ ನಿಂಗಪ್ಪ ವಾಲಿ

ತೋಕೂರು: ಮೂಲ್ಕಿ ಹೋಬಳಿ ಒಂಬತ್ತು ಮಾಗಣೆ ಮುಂಡಾಲ ಸಮಾಜ ಸೇವಾ ಟ್ರಸ್ಟ್ (ರಿ) ಓಂಕಾರೇಶ್ವರಿನಗರ 10ನೇ ತೋಕೂರು, ಹಳೆಯಂಗಡಿ ಇದರ ಪ್ರಾಯೋಜಕತ್ವದಲ್ಲಿ ಗ್ರಾಮ ಪಂಚಾಯತ್ ಪಡುಪಣಂಬೂರು, ಓಂಕಾರೇಶ್ವರಿ ಮಂದಿರ ತೋಕೂರು ಮತ್ತು ಅರಣ್ಯ ಇಲಾಖೆ ಮೂಡಬಿದ್ರಿ ಇವರ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಮತ್ತು ಉಚಿತ ಸಸಿ ವಿತರಣಾ ಕಾರ್ಯಕ್ರಮವನ್ನು ಶ್ರೀ ಓಂಕಾರೇಶ್ವ ರೀ ಮಂದಿರದ ಅಧ್ಯಕ್ಷರಾದ ಶ್ರೀ ಸದಾಶಿವ ಟಿ ಕುಂದರ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು,

ಕಾರ್ಯಕ್ರಮವನ್ನು ಮೂಡಬಿದ್ರೆಯ ಉಪ ಅರಣ್ಯಾಧಿಕಾರಿ ಶ್ರೀ ನಿಂಗಪ್ಪ ವಾಲಿ ಯವರು ಉದ್ಘಾಟಿಸಿ ಬೆಳೆದ ಸಸಿಗಳನ್ನು ಕಡಿದು ಪರಿಸರ ನಾಶ ಮಾಡೋ ಈ ಸಮಯದಲ್ಲಿ ನೀವು ಕೈಗೊಂಡ ಸಸಿ ನೆಡುವ ಕಾರ್ಯ ಶ್ಲಾಘನಿಯವಾದುದು ಮತ್ತು ಸಸಿಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸಬೇಕು ಎಂಬುದಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪಡುಪಣಂಬೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಹೇಮನಾಥ ಅಮೀನ್ ರವರು ಮಾತನಾಡಿ ನೆಟ್ಟ ಸಸಿಯನ್ನು ಬೆಳೆಸಿ ಪೋಷಿಸಸುವ ಜವಾಬ್ದಾರಿ ನಮ್ಮದಾಗಿದೆ ಎಂಬುದಾಗಿ ತಿಳಿಸಿದರು.
ಶ್ರೀ ಸುಬ್ರಮಣ್ಯ ದೇವಸ್ಥಾನ ಇದರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಗುರುರಾಜ ಎಸ್. ಪೂಜಾರಿಯವರು ಮಾತನಾಡಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಹಸಿರೇ ಉಸಿರು ಎಂಬ ಧ್ಯೇಯ ವಾಕ್ಯದೊಂದಿಗೆ ನಾವು ಪರಿಸರ ಉಳಿವಿಗಾಗಿ ಬಧ್ಧರಾಗೋಣ ಎಂದು ಮುಲ್ಕಿ ಹೋಬಳಿ 9 ಮಾಗಣೆ ಮುಂಡಾಲ ಸಮಾಜ ಸೇವಾ ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀ ಶಂಕರ ಮಾಸ್ಟರ್ ಗೋಳಿಜೋರರವರು ತಿಳಿಸಿದರು.ಕಾರ್ಯಕ್ರಮದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮೋಹನದಾಸ್ ಹಾಗೂ ಶ್ರೀ ಅನಿಲ ಯಾನೆ ಸೀತಾರಾಮ,ಯಕ್ಷ ದೇಗುಲ ಹತ್ತು ಸಮಸ್ತರು 10ನೇ ತೋಕೂರು ಇದರ ಅಧ್ಯಕ್ಷರಾದ ಶ್ರೀ ದಿನಕರ ಸಾಲ್ಯಾನ್ ಹಾಗೂ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಭಾಸ್ಕರ ಅಮೀನ್ ಗೆತೋಕೂರುರವರು ಉಪಸ್ಥಿತರಿದ್ದರ
