ತಿರುವನಂತಪುರ – ಮದುವೆಗೆ ಬಿಎಂಡಬ್ಲ್ಯು ಕಾರು ಚಿನ್ನ ಕೇಳಿದ ವರ ; ವಧು ಆತ್ಮಹತ್ಯೆ
ತಿರುವನಂತಪುರ ವೈದ್ಯಕೀಯ ಕಾಲೇಜಿನಲ್ಲಿ ಪೋಸ್ಟ್ ಗ್ರಾಜುಯೇಶನ್ ಮಾಡುತ್ತಿದ್ದ ವೈದ್ಯೆ ಮದುವೆಗೆ ವರ ಬಿಎಂಡಬ್ಲ್ಯು ಕಾರು ಮತ್ತು ಚಿನ್ನ ಕೇಳಿದನೆಂದು 26ರ ಪ್ರಾಯದ ಶಹನಾ ಅವರು ತಾಕೊಲೆ ಮಾಡಿಕೊಂಡಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಅವರು ತಮ್ಮ ವಸತಿ ಸಮುಚ್ಚಯದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರವ್ಸಿ ಜೊತೆಗೆ ಶಹನಾ ಮದುವೆ ಗೊತ್ತಾಗಿತ್ತು. ಆದರೆ ಕೊನೆಗೆ ರವ್ಸಿ ಕುಟುಂಬದವರು 150 ಸವರನ್ ಚಿನ್ನ, 15 ಎಕರೆ ಭೂಮಿ ಮತ್ತು ಒಂದು ಬಿಎಂಡಬ್ಲ್ಯು ಕಾರು ವರದಕ್ಷಿಣೆ ಕೇಳಿದ್ದಾರೆ. ಶಹನಾರ ಅಸಹಜ ಸಾವಿಗೆ, ಆತ್ಮಹತ್ಯೆಗೆ ಇದೇ ಕಾರಣ ಎಂದು ಹೇಳಲಾಗಿದೆ. ಇದನ್ನು ಭರಿಸಲಾಗದ ಕುಟುಂಬ ಮದುವೆ ರದ್ದು ಪಡಿಸಿತ್ತು. ಇದರಿಂದ ವೈದ್ಯೆ ಖನ್ನತೆಯತ್ತ ನಡೆದಿದ್ದರು ಎಂದು ಹೇಳಲಾಗಿದೆ.
ವೆಂಜರಮೂಡು ಮೈತ್ರಿನಗರದ ದಿವಂಗತ ಅಬ್ದುಲ್ ಅಜೀಜ್ ಮತ್ತು ಜಮೀಲಾರ ಮಗಳು ಶಹನಾ. ಸಚಿವೆ ವೀಣಾ ಜಾರ್ಜ್ ಅವರು ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ನೇರ ಆದೇಶ ನೀಡಿದ್ದಾರೆ.