ಸ್ಥಗಿತಗೊಂಡ ಸರ್ಕಾರಿ ಬಸ್ ಪುನರಾರಂಭಿಸಲು ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ
ಸ್ಥಗಿತಗೊಂಡ ಸರ್ಕಾರಿ ಬಸ್ ಪುನರಾರಂಭಿಸಬೇಕು ಮತ್ತು ಜಿಲ್ಲೆಯ ವಿವಿಧ ಭಾಗಗಳಿಗೆ ಸರ್ಕಾರಿ ಬಸ್ ಒದಗಿಸಬೇಕೆಂದು ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆಗಳವರು ಪ್ರತಿಭಟನೆ ನಡೆಸುತ್ತಿದ್ದಾರೆ.
ನಗರದಲ್ಲಿ ಜನವಾದಿ ಮಹಿಳಾ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಜಯಂತಿ ಬಿ. ಶೆಟ್ಟಿ ಅವರು, ಕೇಂದ್ರದ ಬಿಜೆಪಿ ಸರ್ಕಾರ ಕೇವಲ ಭರವಸೆಗಳನ್ನು ಮಾತ್ರ ಕೊಡುತ್ತಿದ್ದಾರೆ ಹೊರತು ಯಾವ ಯೋಜನೆಗಳನ್ನು ಕೂಡ ಸರಿಯಾಗಿ ಕಾರ್ಯಗತಗೊಳಿಸಿಲ್ಲ. ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಯೋಜನೆಗಳ ಫಲ ರಾಜ್ಯದ ಎಲ್ಲಾ ಜನತೆಗೂ ಸಿಗಬೇಕು. ಮಹಿಳೆಯರಿಗೆ ಉಚಿತ ಬಸ್‍ನ ಯೋಜನೆ ಸಿಗಬೇಕು ಹಾಗಾಗಿ ಬಸ್‍ಗಳ ವ್ಯವಸ್ಥೆಯನ್ನು ಮಾಡಿಕೊಡಬೇಕು. ಮಂಗಳೂರು ಮೂಡಬಿದ್ರಿ ಕಾರ್ಕಳ ಹಾಗೂ ಮಂಗಳೂರು ಉಡುಪಿ ನಡುವೆ ಸರಕಾರಿ ಬಸ್ ಸೇವೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ನಾಯಕರಾದ ಪ್ರಮೀಳಾ ಶಕ್ತಿ ನಗರ, ಜಯಲಕ್ಷ್ಮಿ, ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.