ಮುಲ್ಕಿ : ಪದ್ಮಶಾಲಿ ಮಹಾಸಭಾ, ವಿದ್ಯಾವರ್ಧಕ ಸಂಘದಿಂದ ಸಾಧಕರಿಗೆ ಗೌರವ
ಮುಲ್ಕಿ : ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾ ಸಭಾದ 77ನೇ ವಾರ್ಷಿಕ ಮಹಾಸಭೆ ಮತ್ತು ವಿದ್ಯಾ ವರ್ಧಕ ಸಂಘದ 33ನೇ ವಾರ್ಷಿಕ ಮಹಾಸಭೆ ಕಿನ್ನಿಗೋಳಿಯ ನೇಕಾರ ಸೌಧದಲ್ಲಿ ನಡೆಯಿತು.
ರಾಮದಾಸ್ ಶೆಟ್ಟಿಗಾರ್ ಮತ್ತು ಲಕ್ಷ್ಮಣ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಪದ್ಮಶಾಲಿ ಸಾಮಾಜಿಕ ನಾಯಕತ್ವ ಪ್ರಶಸ್ತಿಯನ್ನು ವಿ.ನಾರಾಯಣ ಶೆಟ್ಟಿಗಾರ್ ವಕ್ವಾಡಿ ಯವರಿಗೆ ನೀಡಲಾಯಿತು. ಸಮಾಜದ ವಿವಿಧ ಕ್ಷೇತ್ರದ ಸಾಧಕರು,ಪ್ರತಿಭಾವಂತರನ್ನು ಮತ್ತು ನೇಕಾರರನ್ನು ಗೌರವಿಸಲಾಯಿತು. 2023 -24 ನೇ ಸಾಲಿನ ನೂತನ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಬೆಂಗಳೂರು ಸಂಘದ ಚೇತನ್ ದೇರೆಬೈಲ್ ,ದುಬೈ ಸಂಘದ ರಘುರಾಮ ಶೆಟ್ಟಿಗಾರ್ ಮೂಲ್ಕಿ ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನದ ಚಂದಪ್ಪ ಗುರಿಕಾರ , ನಾನಾ ದೇವಸ್ಥಾನಗಳ ಆಡಳಿತ ಮೋಕ್ತೇಸರರಾದ ಬಾರಕೂರು ಡಾ ,ಜಯರಾಮ ಶೆಟ್ಟಿಗಾರ್ , ಸುರೇಶ್ ಶೆಟ್ಟಿಗಾರ್ ಸಾಲಿಕೇರಿ, ಮತ್ತಿತರ ಪಧಾಧಿಕಾರಿಗಳು ಉಪಸ್ಥಿತರಿದ್ದರು.