ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ಮಿಜಾರು, ದ.ಕ. ಸಂಗ್ರಹಿಸಿದ ಧನ ಸಹಾಯ ಹಸ್ತಾಂತರ

ಲಂಗ್ಸ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಮೂಡುಬಿದ್ರೆಯ ತೋಡಾರಿನ ಬೇಬಿ ಹಾಗೂ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಬೆಂಜನಪದವು ನಿವಾಸಿ ಹರೀಶ್ ಕುಲಾಲ್ ಇವರ ಚಿಕಿತ್ಸೆಗೆ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ಸಂಗ್ರಹಿಸಿದ ಧನ ಸಹಾಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಿಪ್ಲಬೆಟ್ಟು ಒಕ್ಕೂಟದ ಸೇವಾ ಪ್ರತಿನಿಧಿ ಮಲ್ಲಿಕಾ ಶೆಟ್ಟಿ, ಚಂದ್ರಹಾಸ ಪೂಜಾರಿ ಕುಲತ್ತಕೋಡಿ ಕೃಷಿಕರು, ಪಧಾದಿಕಾರಿಗಳು ಹಾಗೂ ಸೇವಾಮಾಣಿಕ್ಯರ ಸಮ್ಮುಖದಲ್ಲಿ ತಲಾ 15000 ಹಸ್ತಾಂತರಿಸಲಾಯಿತು.