Home Page 17

ಮಂಗಳೂರು ನಗರದ ಕೊಲೊಸೊ ಕಾಲೇಜಿನ ವಿದ್ಯಾರ್ಥಿನಿ ನೀನಾಳ ಸಾವಿನ ತನಿಖೆಗೆ ಎಸ್.ಎಫ್.ಐ. ಒತ್ತಾಯ

ಮಂಗಳೂರು ನಗರದ ಕೊಲೊಸೊ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಜನೆ ಮಾಡುತ್ತಿದ್ದ ಕಾಸರಗೋಡು ಮೂಲದ ವಿದ್ಯಾರ್ಥಿನಿ ನೀನಾ ಹಾಸ್ಟೇಲ್‌ನ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯ ಬಗ್ಗೆ ಕಾಲೇಜಿನ ವಿದ್ಯಾರ್ಥಿ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿದೆ. ವಿದ್ಯಾರ್ಥಿನಿಯು ಆತ್ಮಹತ್ಯೆಗೈಯಲು ಹಾಸ್ಟೆಲ್‌ನಲ್ಲಿ ನೀಡುವ

ಮೋರ್ಗನ್ಸ್ ಗೇಟ್‌ನಲ್ಲಿ ನಡೆದ ಶೂಟೌಟ್ ಪ್ರಕರಣ: ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಸುಧೀಂದ್ರ ಪ್ರಭು ಸಾವು

ನಗರದ ಮೋರ್ಗನ್ಸ್‌ಗೇಟ್‌ನಲ್ಲಿ ಉದ್ಯಮಿ ಹಾರಿಸಿದ ಗುಂಡು ತಗುಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಬಾಲಕ ಶುಕ್ರವಾರ ಬೆಳಗ್ಗೆ 5 ಗಂಟೆಯ ಸುಮಾರಿಗೆ ಮೃತಪಟ್ಟಿದ್ದಾರೆ.ಉದ್ಯಮಿ ರಾಜೇಶ್ ಪ್ರಭು ಎಂಬಾತನ ಪುತ್ರ ಸುಧೀಂದ್ರ (16) ಮೃತ ಬಾಲಕ. ಅ.5ರಂದು ತಂದೆಯಿಂದಲೇ ಗುಂಡೇಟಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಸುಧೀಂದ್ರನನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶೃಂಗೇರಿಗೆ ಪ್ರಯಾಣ ಬೆಳೆಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್

ರಾಷ್ಟ್ರಪತಿ ರಾಮನಾಥ ಕೋವಿಂದ್  ಅವರ ಮೂರು ದಿನಗಳ ಕರ್ನಾಟಕ ರಾಜ್ಯ ಪ್ರವಾಸದ ಸಂದರ್ಭದಲ್ಲಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ಮೈಸೂರಿಗೆ ತೆರಳಿ ಗುರುವಾರ ರಾತ್ರಿ ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಕರಾವಳಿಯ ಆತಿಥ್ಯವನ್ನು ಸ್ವೀಕರಿಸಿ ಇಂದು ಬೆಳಗ್ಗೆ 10.45ಕ್ಕೆ ಶೃಂಗೇರಿಗೆ ಪ್ರಯಾಣ ಬೆಳೆಸಿದರು. ಗುರುವಾರ ಸಂಜೆ 6:50ಕ್ಕೆ

ವೆನ್ಲಾಕ್ ಆಸ್ಪತ್ರೆಯಲ್ಲಿ ಎರಡು ಆಕ್ಸಿಜನ್ ಉತ್ಪಾದನಾ ಘಟಕ ಲೋಕಾರ್ಪಣೆ

ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ವಠಾರದಲ್ಲಿ ಎರಡು ಆಕ್ಸಿಜನ್ ಉತ್ಪಾದನಾ ಘಟಕದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಆಕ್ಸಿಜನ್ ಘಟಕವನ್ನು ಉದ್ಘಾಟಿಸಿದರು. ಆಕ್ಸಿಜನ್ ಘಟಕವನ್ನು ಉದ್ಘಾಟಿಸಿದ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿ.ಎಂ ಕೇರ್

ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ನಟಿ ರಕ್ಷಿತಾ ಪ್ರೇಮ್

ಉಳ್ಳಾಲ: ಸ್ಯಾಂಡಲ್ ವುಡ್ ನಟಿ ರಕ್ಷಿತಾ ಪ್ರೇಮ್ ಅವರು ಕುತ್ತಾರು ಕೊರಗಜ್ಜ ಕಟ್ಟೆಗೆ ಮಂಗಳವಾರ ಭೇಟಿ ನೀಡಿದರು. ಕಾರ್ಯಕ್ರಮವೊಂದರ ಯಶಸ್ಸಿಗಾಗಿ ಕೊರಗಜ್ಜನ ಬಳಿ ಹರಕೆ ಹೊತ್ತ ಹಿನ್ನೆಲೆಯಲ್ಲಿ ಭೇಟಿ ನೀಡಿ ಹರಕೆ ಸಲ್ಲಿಸಿದ್ದಾರೆ. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿರುವ ನಟಿ ರಕ್ಷಿತಾ ಪ್ರೇಮ್, ಸದ್ಯ ಝೀ ಕನ್ನಡ ವಾಹಿನಿ ರಿಯಾಲಿಟಿ ಷೋನಲ್ಲಿ

ಪುತ್ತೂರಿನಲ್ಲಿ ಆಂಬುಲೆನ್ಸ್ ಲೋಕಾರ್ಪಣೆ

ಬಜರಂಗದಳ ಪುತ್ತೂರು ಪ್ರಖಂಡ ಮಾಜಿ ಸಂಚಾಲಕರಾಗಿದ್ಧ ದಿ.ನಿತಿನ್ ನಿಡ್ಪಳ್ಳಿ ಇವರ ಸ್ಮರಣಾರ್ಥ ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ರೀ ದುರ್ಗಾ ಶಾಖೆ ಕೆಯ್ಯೂರು ವತಿಯಿಂದ ಅಂಬುಲೆನ್ಸ್ ಲೊಕಾರ್ಪಣೆ ಇಂದು ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ

ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತನೆ ಆಗಬೇಕು: ನಾವುಂದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್

ಕುಂದಾಪುರ: ಸರಕಾರದ ಅನೇಕ ವರ್ಷಗಳ ಪ್ರಯತ್ನದಿಂದ ಶಿಕ್ಷಣ ಇಲಾಖೆ ಒಂದು ಹಂತಕ್ಕೆ ಬಂದು ತಲುಪಿದೆ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಪರಿಪೂರ್ಣತೆ ಕಂಡಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತನೆ ಆಗಬೇಕು. ಅನೇಕ ಮಕ್ಕಳಿಗೆ ತಮ್ಮಲ್ಲಿರುವ ಜ್ಞಾನವನ್ನು ಬಳಸಿಕೊಳ್ಳಲು ಇನ್ನೂ ಕೂಡ ಸ್ವಾತಂತ್ರ್ಯ ದೊರೆತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.

ಶೂಟೌಟ್ ಪ್ರಕರಣದ ಸಮಗ್ರ ತನಿಖೆಗೆ ಡಿವೈಎಫ್ಐ ಆಗ್ರಹ

ನಿನ್ನೆ ಮಂಗಳೂರು ನಗರದ ಮೋರ್ಗನ್ಸ್ ಗೇಟ್ ಬಳಿಯ ವೈಷ್ಣವಿ ಎಕ್ಸ್‌ಪ್ರೆಸ್‌ ಕಾರ್ಗೋ ಸಂಸ್ಥೆಯ ಮಾಲಕ ರಾಜೇಶ್ ಪ್ರಭು ತನ್ನ ಕಾರ್ಮಿಕರ ಸಂಬಳದ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ವೇಳೆ ತಾನು ಪಿಸ್ತೂಲಿನಿಂದ ಹಾರಿಸಿದ ಗುಂಡು ಆತನ ಪುತ್ರನಿಗೆ ತಗುಲಿದ ಪ್ರಕರಣವನ್ನು ನಗರದ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ

ರಿಗ್ ಮಾಲೀಕರ ಮತ್ತು ಕಂಟ್ರಾಕ್ಟ್‌ದಾರರ ಸಭೆ

ದಕ್ಷಿಣ ಕನ್ನಡ ಮತ್ತು ಉಡುಪಿ ರಿಗ್ ಮಾಲೀಕರ ಮತ್ತು ಕಂಟ್ರಾಕ್ಟ್ದಾರರ ಸಂಘ ರಿಜಿಸ್ಟರ್ಡ್ ಮಂಗಳೂರು ವತಿಯಿಂದ ತಮಿಳುನಾಡು ರಿಗ್ ಮಾಲೀಕರ ಸಂಘದ ಪ್ರತಿನಿಧಿಗಳ ಜೊತೆ ಇಂದು ಮಂಗಳೂರಿನಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಡ್ರಿಲ್ಲಿಂಗ್ ದರ ಹೆಚ್ಚಳದ ಕುರಿತಾಗಿ ಚರ್ಚಿಸಿ, ಹೆಚ್ಚಾಗಿರುವ ಇಂಧನ ಬೆಲೆಗೆ ಅನುಗುಣವಾಗಿ ಡ್ರಿಲ್ಲಿಂಗ್ ದರವನ್ನು ನಿಗಧಿಪಡಿಲಾಗಿದೆ. ಒಂದು ಅಡಿ

ಅ.9ರಂದು ಕನ್ನಡಸೇನೆ ಕರ್ನಾಟಕ ದ.ಕ ಜಿಲ್ಲಾ ಕಚೇರಿ ಉದ್ಘಾಟನೆ

ಕನ್ನಡ ನಾಡು ನುಡಿ,ಜಲ ಸಂರಕ್ಷಣೆ, ಸ್ಥಳೀಯರಿಗೆ ಉದ್ಯೋಗ ಮತ್ತಿತರ ನ್ಯಾಯಯುತ ಬೇಡಿಕೆಗೆಹೋರಾಟ ನಡೆಸುತ್ತಾ ಬರುತ್ತಿರುವ ಕನ್ನಡ ಸೇನೆ ಕರ್ನಾಟಕ ಇದರ ದಕ್ಷಿಣಕನ್ನಡ ಜಿಲ್ಲಾ ಕಚೇರಿ” ಉದ್ಘಾಟನೆ ಸಮಾರಂಭ ಅ.9ರಂದು ಬೆಳಗ್ಗೆ 11.೦೦ ಗಂಟೆಗೆ ಕೂಳೂರಿನ ವ್ಯವಸಾಯ ಸೇವಾ ಸಹಕಾರಿ ಸಭಾಂಗಣದಲ್ಲಿ ಜರಗಲಿದೆ ಎಂದು ಕನ್ನಡ ಸೇನೆ ದ.ಕ ಜಿಲ್ಲಾ ಕಾರ್ಯಾಧ್ಯಕ್ಷ