ಉಡುಪಿ: ‘ಪರಶುರಾಮನಿಗೆ ಶಾಸಕ ಸುನಿಲ್ ಕುಮಾರ್ ರಿಂದ ಘೋರ ಅಪಚಾರ’ – ಮುತಾಲಿಕ್ ಆಕ್ರೋಶ
ತುಳುನಾಡಿನ ಪರಶುರಾಮನಿಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಘೋರ ಅಪಚಾರ, ಅವಮಾನ ಮಾಡಿದ್ದಾರೆ ಎಂದು ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಉಡುಪಿಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಮದಗ್ನಿ ಆರಾಧಕರು ಪರಶುರಾಮನ ಅರಾಧನೆ ಮಾಡುತ್ತಾರೆ. ಪರಶುರಾಮನ ಕೀರ್ತಿ, ಪ್ರಭಾವದಿಂದಾಗಿ ಅವರು ದೇವರು ಎನ್ನುವ ನಂಬಿಕೆ ಇದೆ. ತನ್ನ ಪರಾಕ್ರಮದಿಂದ ಸಮುದ್ರವನ್ನು ಹಿಂದೆ ಸರಿಸಿ ಭೂಮಿ ಸೃಷ್ಟಿಸಿದ ವ್ಯಕ್ತಿ, ಇಂತಹ ಪರಶುರಾಮನಿಗೆ ಅತ್ಯಂತ ಘೋರ ಅಪಚಾರ ಅಪಮಾನ ದ್ರೋಹ ಮಾಡಿದ ಸುನಿಲ್ ಕುಮಾರ್. ಸ್ವಾರ್ಥಕ್ಕೆ ದೇವರನ್ನೂ, ಭೃಷ್ಟಾಚಾರಕ್ಕೆ ದೇವಸ್ಥಾನವನ್ನು ಕೂಡಾ ಬಿಡದ ರಾಜಕಾರಣಿಯಾಗಿದ್ದಾರೆ. ತನ್ನ ಗೆಲುವಿಗಾಗಿ ಪವಿತ್ರ ಥೀಮ್ ಪಾರ್ಕ್ ಅನ್ನು ಅಪವಿತ್ರ ಮಾಡಿದ್ದಾರೆ. ಮೂರ್ತಿಗೆ ಸಂಬಂಧಿಸಿದಂತೆ ಎಲ್ಲವೂ ತನಿಖೆ ಅಗಬೇಕು. ಆಮೇಲೆ ಕಾಮಗಾರಿ ಮುಂದುವರೆಸಿ ಎಂದು ಆಗ್ರಹಿಸಿದ್ದಾರೆ.
ಈ ಸಂಧರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ಗಂಗಾಧರ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರು, ಉಡುಪಿ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕ್ಲಲು, ಮತ್ತು ಇತರರು ಉಪಸ್ಥಿತರಿದ್ದರು.