ಮಂಗಳೂರು: ಹಿಂದೂ ವ್ಯಾಪಾರಸ್ಥರ ಅಂಗಡಿಗಳಿಗೆ ಕೇಸರಿ ಪತಾಕೆ ಕಟ್ಟಿದ ವಿಹಿಂಪ ಕಾರ್ಯಕರ್ತರು
ಮಂಗಳೂರಿನ ದೇವಸ್ಥಾನದಲ್ಲಿ ಸಂತೆ ವ್ಯಾಪಾರಕ್ಕೆ ಜಿಲ್ಲಾಡಳಿತ ಸೂಚನೆಯಂತೆ ಎರಡನೇ ಬಾರಿ ಹರಾಜು ನಡೆಸಿ ಅನ್ಯ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಿದ್ದನ್ನು ಹಿಂದೂ ಸಂಘಟನೆಗಳು ಖಂಡನೆ ವ್ಯಕ್ತಪಡಿಸಿದ್ದಾರೆ.
ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ಸ್ಥಳಕ್ಕೆ ಬಂದ ಕಾರ್ಯಕರ್ತರು, ಹಿಂದು ವ್ಯಾಪಾರಸ್ಥರು ನಡೆಸುವ ಅಂಗಡಿಗಳಿಗೆ ಕೇಸರಿ ಪತಾಕೆಯನ್ನು ಹಾಕಿದ್ದಾರೆ. ಇದೇ ವೇಳೆ ಮಾತನಾಡಿದ ಶರಣ್ ಪಂಪ್ವೆಲ್, ಇವತ್ತು ಎಲ್ಲಾ ಅಂಗಡಿಗಳಿಗೆ ಕೇಸರಿ ಭಗವಾಧ್ವಜ ಹಾಕಿದ್ದೇವೆ. ಹಿಂದೂಗಳ ಅಂಗಡಿಯೆಂದು ಭಕ್ತರಿಗೆ ಗೊತ್ತಾಗಬೇಕು ಎಂದು ಭಗವಧ್ವಜ ಕಟ್ಟುತ್ತಿದ್ದೇವೆ. ಹಿಂದೂಗಳ ದೇವಸ್ಥಾನದಲ್ಲಿ ಹಿಂದುಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.