ಉಳ್ಳಾಲ : ಮಟ್ಕಾ ಅಡ್ಡೆಗೆ ದಾಳಿ: ಐವರ ಬಂಧನ 

ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಓಳಪೇಟೆ ಬಳಿ ಖಾಸಗಿ ಜಾಗದಲ್ಲಿ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಉಳ್ಳಾಲ ಠಾಣಾ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಲ್ಯಾನ್ಸಿ ವೇಗಸ್, ನವಾಝ್ , ಸತೀಶ್ ಗಟ್ಟಿ, ನಾಸೀರ್ ಮತ್ತು ಮಧು ಯಾನೆ ಮನು ಎಂದು ಗುರುತಿಸಲಾಗಿದೆ. ಬಂಧಿತರಿಂದ 7040ರೂ .ನಗದು, ಐದು ಮೊಬೈಲ್ ಹಾಗೂ ಜೂಜಾಟಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಳ್ಳಾಲದಲ್ಲಿ ಮಟ್ಕಾ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಅವರ ನಿರ್ದೇಶನದಂತೆ, ಉಳ್ಳಾಲ ಇನ್ಸ್ಪೆಕ್ಟರ್ ಸಂದೀಪ್ ರವರ ಮಾರ್ಗದರ್ಶನದಲ್ಲಿ ಉಪನಿರ್ದೇಶಕ ಸಂತೋಷ್ ಕುಮಾರ್ ಸಿಬ್ಬಂದಿಗಳಾದ ಆನಂದ,ಪಿ.ಸಿ.ಆಶೋಕ್ ಮತ್ತು ರಿಯಾಝ್ ರವರು ಸೂಕ್ತ ಕಾರ್ಯಾಚರಣೆ ನಡೆಸುವ ಮೂಲಕ ಈ ಪ್ರಕರಣ ವನ್ನು ಭೇದಿಸಿದ್ದಾರೆ.  

Related Posts

Leave a Reply

Your email address will not be published.