ಪುತ್ತೂರು : ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

ಪುತ್ತೂರು: ನಗರದ ಪಾಂಗ್ಲಾಯಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊದೆಯೊಂದರ ಬಳಿ ಈ ಅಪರಿಚಿತ ಮೃತದೇಹ ಪತ್ತೆಯಾಗಿದ್ದು ಸ್ಥಳೀಯರು ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತ ಆಧಾರದಲ್ಲಿ ಸ್ಥಳಕ್ಕೆ ಬಂದ ಪೊಲೀಸ್ರು ಪರಶೀಲನೆ ನಡೆಸಿ ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತದೇಹವನ್ನು ಸಾಗಿಸುವಲ್ಲಿ ನಗರದ ಆದರ್ಶ ಆಸ್ಪತ್ರೆ ಅಂಬ್ಯುಲೆನ್ಸ್ ಚಾಲಕ ದಯಾನಂದ್ ಮತ್ತು ಸ್ಥಳೀಯರು ಸಹಕರಿಸಿದ್ದಾರೆ. ಮೃತದೇಹ ಯಾರದೆನ್ನುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಉಳಿದಂತೆ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Related Posts

Leave a Reply

Your email address will not be published.