🛑 ವಾಮಂಜೂರು ಅಣಬೆ ಪ್ಯಾಕ್ಟರಿ ಘಟಕ ಸ್ಥಳಾಂತರಿಸಲು ಆಗ್ರಹ
ವಾಮಂಜೂರಿನಲ್ಲಿ ಕಾರ್ಯಾಚರಿಸುತ್ತಿರುವ ವೈಟ್‍ಗ್ರೋ ಅಣಬೆ ಪ್ಯಾಕ್ಟರಿ ಘಟಕದಿಂದ ಊರಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಈ ಘಟಕವನ್ನು ಸ್ಥಳಾಂತರಿಸಬೇಕು ಇಲ್ಲವೇ ಶಾಶ್ವತವಾಗಿ ಬಂದ್ ಮಾಡಬೇಕು ಎಂದು ಅಣಬೆ ಫ್ಯಾಕ್ಟರಿ ವಿರುದ್ಧ ಹೋರಾಟ ಸಮಿತಿ ಆಗ್ರಹಿಸಿದೆ.
ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ ಶೇಣವ ಅವರು, ಜಿಲ್ಲಾಧಿಕಾರಿಗಳ ಆದೇಶದಂತೆ ಆ.19ರ ಬಳಿಕ ತಾಂತ್ರಿಕ ಸಮಿತಿಯ ಶಿಫಾರಸು ಪರಿಗಣಿಸಿ ಫ್ಯಾಕ್ಟರಿಯು ಕಾರ್ಯಾರಂಭ ಮಾಡುವ ಬಗ್ಗೆ ತೀರ್ಮಾನವಾಗಲಿದೆ. ಒಂದು ವೇಳೆ ಸಮಿತಿಯ ವರದಿಯಂತೆ ಫ್ಯಾಕ್ಟರಿ ಆರಂಭವಾಗಿ ಮತ್ತೆ ವಾಸನೆ ಬಂದರೆ ಗ್ರಾಮಸ್ಥರು ಸೇರಿಕೊಂಡು ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಪ್ರಮುಖರಾದ ಓಂ ಪ್ರಕಾಶ್ ಶೆಟ್ಟಿ, ಲಕ್ಷ್ಮಣ, ಜಯಂತಿ, ಜಯಪ್ರಭ, ರಿಯಾಜ್ ಅಹಮ್ಮದ್, ವಿಲಿಯಂ ಡಿಸೋಜ ಮುಂತಾದವರು ಹಾಜರಿದ್ದರು.