ಮಂಗಳೂರು: ಡಿ.15ರಂದು ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ ಮತ್ತು ಫಾರ್ಮಸಿ ವತಿಯಿಂದ ಉಚಿತ ವೈದ್ಯಕೀಯ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ
ಮಂಗಳೂರಿನ ವೆಲೆನ್ಸಿಯದಲ್ಲಿ ಕಾರ್ಯಾಚರಿಸುತ್ತಿರುವ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ ಮತ್ತು ಫಾರ್ಮಸಿ ವತಿಯಿಂದ ಉಚಿತ ವೈದ್ಯಕೀಯ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರವನ್ನು ಡಿ.15 ರಂದು ಹಮ್ಮಿಕೊಂಡಿದ್ದಾರೆ.ಉಚಿತ ವೈದ್ಯಕೀಯ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರವು ವೆಲೆನ್ಸಿಯಾದ ವೇದಂ ಆರೋಗ್ಯ ಆಸ್ಪತ್ರೆಯಲ್ಲಿ ಡಿ.15 ರ ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ನಡೆಯಲಿದ್ದು, ವಯಸ್ಸಾದ 35 ವರ್ಷಗಳಿಗೂ ಮೇಲ್ಪಟ್ಟವರಿಗೆ ಎಲ್ಲಾ ರೀತಿಯ ಸಂಧಿವಾತಗಳಿಗೆ ವೈದ್ಯಕೀಯ ಶಿಬಿರವನ್ನು ಏರ್ಪಡಿಸಿದ್ದಾರೆ. ಎಲ್ಲಾ ರೀತಿಯ ಕೀಲು ಸಮಸ್ಯೆಗಳಿಗೆ ಉಚಿತ ತಪಾಸಣೆಯನ್ನು ಮಾಡಲಾಗುವುದು.ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಸಚಿನ್ ನಡ್ಕ ಹಾಗೂ ವೈದ್ಯರಾದ ಡಾ.ಅನುಷಾ ಜಿ, ಡಾ. ವರ್ಷಾ ಕೆ.ವಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8088606600 ಅಥವಾ 08242434666 ಅನ್ನು ಸಂಪರ್ಕಿಸಬಹುದು.