ಮಣ್ಣಗುಡ್ಡೆಯ ವರ್ಟೆಕ್ಸ್ ಲಾಂಜ್‍ನಲ್ಲಿಎನ್ನಿಯೋಂಗ್ ಕೊರಿಯಾ
ಮಂಗಳೂರಿನ ಮಣ್ಣಗುಡ್ಡೆಯ ವರ್ಟೆಕ್ಸ್ ಲಾಂಜ್ ಮತ್ತು ಬೈ ಲೈಪ್ ಸಹಯೋಗದಲ್ಲಿ ಎನ್ನಿಯೋಂಗ್ ಕೊರಿಯಾ ಕಾರ್ಯಕ್ರಮವು ವರ್ಟೆಕ್ಸ್ ಲಾಂಜ್ ನಲ್ಲಿ ನಡೆಯಿತು.
ಮಂಗಳೂರಿನ ಮಣ್ಣಗುಡ್ಡೆಯ ಗಾಂಧಿ ಪಾರ್ಕ್ ಪಕ್ಕದಲ್ಲಿರುವ ವರ್ಟೆಕ್ಸ್ ಲಾಂಜ್ ನಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಸಿ ,ಸೈ ಎನ್ನಿಸಿಕೊಂಡಿದ್ದಾರೆ.ಇದೀಗ ಎನ್ನಿಯೋಂಗ್ ಕೊರಿಯಾ ಮನೋರಂಜನಾ ಕಾರ್ಯಕ್ರಮ ನಡೆಯುತ್ತಿದ್ದು, ನವೆಂಬರ್ 23ರಿಂದ ಆರಂಭಗೊಂಡು, 26ರತನಕ ನಡೆಯಲಿದೆ.
ಇಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮ ಹಾಗೂ ಗೇಮ್ ಶೋ, ಖಾದ್ಯಗಳು ಇಲ್ಲಿ ಸಿಗಲಿದೆ.ಗುರುವಾರದಂದು ಸುಮಿತ್ ತಂಡ ಮತ್ತು ಹೆಲಿಕ್ಸ್ ತಂಡದಿಂದ ನೃತ್ಯ ಪ್ರದರ್ಶನ ಗಮನಸೆಳೆದವು.ಇದೇ ಸಂದರ್ಭ ಧೀರಾಜ್ ಅವರಿಂದಲೂ ನೃತ್ಯ ಕಾರ್ಯಕ್ರಮ ಇನ್ನೂ ಮನರಂಜಿಸಿತು.
ಜೊತೆಗೆನೂಡಲ್ ತಿನ್ನುವ ಸ್ಪರ್ಧೆ, ರಸ ಪ್ರಶ್ನೆ ಹಾಗೂ ಗೇಮ್ ಶೋ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿ, ಆಗಮಿಸಿದವರಿಗೆ ಭರ್ಜರಿ ಮನೋರಂಜನಾ ಕಾರ್ಯಕ್ರಮ ಸಿಕ್ಕಿತು.ಈ ವೇಳೆ ವರ್ಟೆಕ್ಸ್ ಲಾಂಜ್ ಮ್ಯಾನೆಜ್‍ಮೆಂಟ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.