ತಮಿಳು ನಟ ವಿಜಯಕಾಂತ್ ನಿಧನ
ತಮಿಳಿನ ಖ್ಯಾತ ನಾಯಕ ನಟರಾಗಿದ್ದ ವಿಜಯಕಾಂತ್ ಅವರು ಗುರುವಾರ ಬೆಳಿಗ್ಗೆ ವಿಧಿವಶರಾದರು. ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು.ಅವರು ನ್ಯುಮೋನಿಯಾದ ಜೊತೆಗೆ ಕೋವಿಡ್ ಸೋಂಕಿಗೆ ಒಳಗಾಗುತ್ತಲೇ ಸಾವಿಗೆ ಸೆರೆಯಾದರು ಎಂದೂ ವರದಿಯಾಗಿದೆ. 1979ರಲ್ಲಿ ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸಿದ ಅವರು 2005ರವರೆಗೂ ನಟನೆಯಲ್ಲಿ ಸಕ್ರಿಯರಾಗಿದ್ದರು. ಆಗ ಡಿಎಂಡಿಕೆ- ದೇಸೀಯ ಮುರ್ಪೋಕು ದ್ರಾವಿಡ ಕಳಗಂ ಸ್ಥಾಪನೆ ಮಾಡಿ ರಾಜಕೀಯದಲ್ಲಿ ಈಡುಗೊಂಡರು. ಅವರ ಪಕ್ಷವು ಮೂರನೆಯ ಸ್ಥಾನಿಯಾಗಿ ಡಿಎಂಕೆ, ಎಡಿಎಂಕೆಗಳಿಗೆ ಆತಂಕ ಮೂಡಿಸಿತ್ತಾದರೂ ಮತ್ತಷ್ಟು ಬೆಳೆಯಲಿಲ್ಲ.
ಇತ್ತೀಚೆಗೆ ಕಾಯಿಲೆಗೀಡಾಗಿದ್ದರಾದ್ದರಿಂದ ಡಿಎಂಡಿಕೆ ಜವಾಬುದಾರಿಯನ್ನು ವಿಜಯಕಾಂತ್ ಪತ್ನಿ ಪ್ರೇಮಲತಾ ವಹಿಸಿಕೊಂಡಿದ್ದರು. 2015ರಲ್ಲಿ ತೆರೆಕಂಡ ಸಗಾಪ್ತಂ ವಿಜಯಕಾಂತ್ ಕಾಣಿಸಿಕೊಂಡ ಕೊನೆಯ ಸಿನಿಮಾವಾಗಿದೆ.