ಆ.28 : ವಿನಾಯಕ ಮಾರ್ಕೇಟಿಂಗ್ ನೂತನ ಶೋರೂಂನ ಉದ್ಘಾಟನಾ ಸಮಾರಂಭ

ಮಂಗಳೂರಿನ ವಿನಾಯಕ ಮಾರ್ಕೇಟಿಂಗ್ ನೂತನ ಶೋರೂಂ, ನಗರದ ಎಂ.ಜಿ.ರೋಡ್ ನ ಕೊಡಿಯಾಲ್‍ಗುತ್ತು, ಪತ್ತು ಮುಡಿ ಜನತಾ ಡಿಲಕ್ಸ್ ನ ಹೋಟೇಲ್ ಸಮೀಪದ ತಕ್ಷೀಲ ಬಿಲ್ಡಿಂಗ್‍ನಲ್ಲಿ ಆ.28ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ವಿನಾಯಕ ಮಾರ್ಕೇಟಿಂಗ್‍ನ ವ್ಯವಸ್ಥಾಪಕ ನಿರ್ದೇಶಕರಾದ ಉಮನಾಥ್ ಹೇಳಿದರು. ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನಾಯಕ ಮಾರ್ಕೇಟಿಂಗ್ 1995ರಲ್ಲಿ ಸ್ಥಾಪನೆಯಾಗಿ ಕಳೆದ 27 ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿದ್ದು, ನಗರದ ಕೊಡಿಯಾಲ್‍ಬೈಲ್ ಸಿಟಿ ಪಾಯಿಂಟ್ ಬಿಲ್ಡಿಂಗ್‍ನಲ್ಲಿ ವಿನಾಯಕ ಮಾರ್ಕೇಟಿಂಗ್ ಕಾರ್ಯಾಚರಿಸುತ್ತಿತ್ತು. ಇದೀಗ ನಗರದ ಎಂ.ಜಿ.ರೋಡ್ ನ ಕೊಡಿಯಾಲ್‍ಗುತ್ತು, ಪತ್ತು ಮುಡಿ ಜನತಾ ಡಿಲಕ್ಸ್‍ನ ಹೋಟೇಲ್ ಸಮೀಪದ ತಕ್ಷೀಲ ಬಿಲ್ಡಿಂಗ್‍ನಲ್ಲಿ ನೂತನ ಶೋರೂಂ ಕಾರ್ಯಾಚರಿಸಲಿದೆ.
ಇದರ ಉದ್ಘಾಟನಾ ಸಮಾರಂಭವು ಆಗಸ್ಟ್ 28ರ ಆದಿತ್ಯವಾರ ಬೆಳಿಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಅವರು ಹೇಳಿದರು. ವಿನ್ಸಮ್ ಸೋಲಾರ್ ವಾಟರ್ ಹೀಟರ್, ಹೀಟ್ ಪಂಪ್ ಮತ್ತು ಗ್ಯಾಸ್ ಗೀಸರ್‍ಗಳ ಮಾರಾಟ ಮತ್ತು ಸೇವೆಯಲ್ಲಿ ಸುಮಾರು 40,000 ಗ್ರಾಹಕರನ್ನು ಹೊಂದಿದ್ದು, ಕರಾವಳಿ ಕರ್ನಾಟಕದಲ್ಲಿ ಮುಂಚೂಣೆಯಲ್ಲಿರುವ ಸಂಸ್ಥೆಯಾಗಿದೆ. ನೂತನ ಶೋರೂಂ ಅನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಅವರು ಉದ್ಘಾಟನೆ ಮಾಡಲಿದ್ದಾರೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ.ವೇದವ್ಯಾಸ್ ಕಾಮತ್ ಅವರು ದೀಪ ಬೆಳಗಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಯು.ಟಿ.ಖಾದರ್ ವಹಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಎಕ್ಸ್ಪರ್ಟ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಉಪಾಧ್ಯಕ್ಷೆ ಡಾ| ಉಷಾ ಪ್ರಭಾ ಎನ್ .ನಾಯಕ್, ರೋಹನ್ ಕಾರ್ಪೋರೇಶನ್‍ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ರೋಹನ್ ಮಂತೋರೋ, ಮಂಗಳೂರು ಮೆಸ್ಕಾಂ ಸೂಪರಿಂಟೆಂಟ್ ಇಂಜಿನಿಯರ್ ಕೃಷ್ಣರಾಜ್ ಕೆ, ಶ್ರೀಅನಘ ರಿಫೈನರಿನ ಮ್ಯಾನೇಜಿಂಗ್ ಡೈರೆಕ್ಟರ್ ಶಾಂಭಶಿವ ರಾವ್, ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಉಪಾಧ್ಯಕ್ಷ ಹರ್ಬನ್ ಪಿಂಟೋ, ಸ್ಥಳೀಯ ಕಾರ್ಪೋರೇಟರ್ ಲೀಲಾವತಿ ಪ್ರಕಾಶ್ ಸೇರಿದಂತೆ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ವಿನಾಯಕ ಮಾರ್ಕೇಟಿಂಗ್‍ನ ವ್ಯವಸ್ಥಾಪಕ ನಿರ್ದೇಶಕರಾದ ಉಮನಾಥ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಎನ್‍ಐ ಅಧ್ಯಕ್ಷ ಮತ್ತು ವಿನಾಯಕ ಮಾರ್ಕೇಟಿಂಗ್‍ನ ಎಚ್.ಆರ್ ಮೋಹನ್ ರಾಜ್ , ವಿನಾಯಕ ಮಾರ್ಕೇಟಿಂಗ್‍ನ ಮೈಸೂರು ವಿಭಾಗದ ಮುಖ್ಯಸ್ಥರಾದ ಅರುಣ್, ಟೆಕ್ನಿಕಲ್ ಮುಖ್ಯಸ್ಥರಾದ ಅರುಣ್ ಉಪಸ್ಥಿತರಿದ್ದರು.