ಅಥಣಿ ಪುರಸಭೆಯಲ್ಲಿ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ

ಅಥಣಿ ಪುರಸಭೆ ನಿರ್ಮಿಸಿದ 21 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಪುರಸಭಾ ಕಾರ್ಯಾಲಯದಲ್ಲಿ ನಡೆಯಿತು. ನೆಲ ಮಹಡಿಯ11 ಮತ್ತು ಮೊದಲ ಮಹಡಿಯ 10 ಮಳಿಗೆಗಳನ್ನು ಜಿಲ್ಲಾಧಿಕಾರಿಗಳ ಆದೇಶದನ್ವಯ ಹರಾಜು ಪುರಸಭಾ ಮುಖ್ಯಾಧಿಕಾರಿ ಈರಣ್ಣಾ ದಡ್ಡಿ ನೇತೃತ್ವದಲ್ಲಿ ನಡೆಯಿತು. ಹರಾಜಿನಲ್ಲಿ ನೂರಾರು ಜನ ಭಾಗವಹಿಸಿದ್ದರು.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಹರಾಜುಗಾರರನ್ನು ಉದ್ದೇಶಿಸಿ ಮಾತನಾಡಿದ ಪುರಸಭಾ ಮುಖ್ಯಾಧಿಕಾರಿ ಈರಣ್ಣಾ ದಡ್ಡಿ, ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮಳಿಗೆಯನ್ನು ಪಡದುಕೊಂಡವರು ಕಡ್ಡಾಯವಾಗಿ ತಾವೇ ಉಪಯೋಗಿಸಿಕೊಳ್ಳಬೇಕು. ಬೇರೆಯವರಿಗೆ ಬಾಡಿಗೆ ಅಥವಾ ಲೀಸ್ ಆಧಾರದ ಮೇಲೆ ಕೊಟ್ಟಿರುವ ವಿಷಯ ನಮ್ಮ ಗಮನಕ್ಕೆ ಬಂದಲ್ಲಿ ಅಂತಹ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಇನ್ನು ಅಗಸ್ಟ 31 ಮಂಗಳವಾರದ ಒಳಗಾಗಿ ಪುರಸಭೆಯ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಇಲ್ಲದಿದ್ದಲ್ಲಿ ಟೋಕನ್ ಹಣ ಮುಟ್ಟುಗೋಲು ಹಾಕಿಕೊಂಡು ಮಳಿಗೆಯನ್ನು ಹಿಂಪಡೆಯಲಾಗುವುದು ಎಂದರು.

ನೆಲ ಮಹಡಿಯ 11 ಮಳಿಗೆಗಳ ಪೈಕಿ ಒಂದು ಮಳಿಗೆ ಅತೀ ಹೆಚ್ಚು 27 ಲಕ್ಷ ರೂ.ಗಳಿಗೆ ಮಾರಾಟವಾಯ್ತು.
ಇನ್ನು ಪರಿಶಿಷ್ಠ ಜಾತಿ ಹಾಗೂ ಪಂಗಡದವರಿಗೆ ಮೀಸಲಿಟ್ಟ ಮಳಿಗೆಯೊಂದು ಅತೀ ಕಡಿಮೆ ಅಂದರೆ 1,51000 ಸಾವಿರ ರೂ.ಗಳಿಗೆ ಅತೀ ಕಡಿಮೆ ಬೆಲೆಗೆ ಹರಾಜು ಆಯಿತು. ಈ ಸಂದರ್ಭಧಲ್ಲಿ ಕಂದಾಯ ಹಿರಿಯ ನಿರೀಕ್ಷಕ ಸಿದ್ದು ಮಾಂಗ, ಲೆಕ್ಕಾಧಿಕಾರಿ ಅಭಿಜಿತ್ ಮಾಂಡವೇಕರ, ಕಿರಿಯ ಕಂದಾಯ ನೀರಿಕ್ಷಕ ಆಕಾಶ ಕಾಂಬಳೆ, ಆರೋಗ್ಯ ನೀರಿಕ್ಷಕ ರಾಜು ವಾಲವೇಕರ, ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಬಸವರಾಜ ಕಾಂಬಳೆ, ಪುರಸಭೆ ಸಿಬ್ಬಂದಿ ವರ್ಗದವರು ಕಾರ್ಮಿಕರು ಉಪಸ್ಥಿತರಿದ್ದರು

Related Posts

Leave a Reply

Your email address will not be published.