ಮಾಣಿ : ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್‌ನ ವಾರ್ಷಿಕ ಕಾರ್ಯಕ್ರಮ, ಪದಗ್ರಹಣ ಸಮಾರಂಭ
![](https://v4news.com/wp-content/uploads/2024/02/1-1140x620.jpeg)
ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ) ಇದರ ವಾರ್ಷಿಕ ಕಾರ್ಯಕ್ರಮ ಹಾಗೂ ಪದಗ್ರಹಣ ಸಮಾರಂಭವು ಪೆರ್ಲಾಪು ಪ್ರಾಥಾಮಿಕ ಶಾಲಾ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ನಿವೃತ್ತ ಪ್ರಾಂಶುಪಾಲರಾದ ಎ ಕೃಷ್ಣಪ್ಪ ಪೂಜಾರಿ ಮಾತನಾಡಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಅವರಲ್ಲಿ ನೈತಿಕ ಗುಣಮಟ್ಟವನ್ನು ಬೆಳೆಸಿ,ಬೇರೆ ಯಾವುದೇ ಆಸ್ತಿಮಾಡಿ ಕೊಡುವ ಅಗತ್ಯವಿಲ್ಲ.
![](https://v4news.com/wp-content/uploads/2024/02/2-1024x681.jpeg)
ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ರಿ ಇದರ ಗೌರವಾಧ್ಯಕ್ಷರಾದ ಮೋಹನ್ ಕುಮಾರ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗೌರವಾಧ್ಯಕ್ಷರಾದ ಜಯಂತ್ ನಡುಬೈಲ್, ಯಕ್ಷಗಾನ ಹಾಸ್ಯ ಕಲಾವಿದ ನಾರಾಯಣ ಉಜಿರೆ, ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು .ಕೃಷಿ ಕ್ಷೇತ್ರ ದಲ್ಲಿ ಸಾಧನೆಗೈದ ಗೌರಿ ಕೆ ಬಂಗೇರ ಬಡಕಬೈಲ್, ನಾಟಿ ಪ್ರಸೂತಿ ಪ್ರವೀಣೆ ಪೂವಕ್ಕ ಕಡೆಕೋಳಿಮಜಲ್, ಕುಲಕಸುಬು ಮೂರ್ತೆ ಗಾರಿಕೆ ಕ್ಷೆತ್ರದಲ್ಲಿ ವಾಸು ಪೂಜಾರಿ ನೆತ್ತರ, ಬಂಟ್ವಾಳ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ ಆದ್ಯೆಕ್ಷೆ ವಿದ್ಯಾರ್ಥಿ ಕುಮಾರಿ ಸಾನ್ವಿ ಇವರುಗಳನ್ನು ಅಭಿನಂದಿಸಲಾಯಿತು . ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು
![](https://v4news.com/wp-content/uploads/2024/02/3-1024x681.jpeg)
ಗಣ್ಯರ ಸಮ್ಮುಖದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಜಾತ್ರ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗೌರವಾಧ್ಯಕ್ಷರಾದ ಜಯಂತ್ ನಡುಬೈಲ್ ಬಿರುವೆರ್ ಸೇವಾ ಟ್ರಸ್ಟ್ (ರೀ )ಕಡೇಶಿವಾಲಯ ಇದರ ಸೇವಾ ಕಾರ್ಯಕ್ರಮ ಉಳಿದ ಸಂಘಟನೆಗಳಿಗೆ ಅನುಕರಣಿಯವಾಗಿದೆ, ಸಂಘಟಯೊಂದಿಗೆ ತಾನು ಕೈಜೋಡಿಸುದಾಗಿ ಹೇಳಿ ಈ ತನಕ ಬಿರುವೆರ್ ಕಡೇಶಿವಾಲಯ ಟ್ರಸ್ಟ್ ನ ಮೂಲಕ ಉಚಿತ ಶಿಕ್ಷಣದ ಪಡೆಯುತ್ತಿದ್ದ ಆತ್ಮಿಕಾ ಎನ್ನುವ ವಿದ್ಯಾರ್ಥಿನಿ ಗೆ ತನ್ನ ಅಕ್ಷಯ ಕಾಲೇಜಿನಲ್ಲಿ ಉಚಿತ ಶಿಕ್ಷಣ ನೀಡುದಾಗಿ ತಿಳಿಸಿದರು.
![](https://v4news.com/wp-content/uploads/2024/02/4-1024x681.jpeg)
ಕಾರ್ಯಕ್ರಮದಲ್ಲಿ ಕಡೇಶಿವಾಲಯ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್, ಹೊಟೇಲ್ ಶಿವಶಾಗರ್ ಉದ್ಯಾವರ ಮಾಲಕ ಪ್ರಭಾಕರ್ ಪೂಜಾರಿ, ಮಂಗಳೂರು ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘ ನಿ. ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ದ.ಕ ಜಿಲ್ಲಾ ಶಾಮಿಯಾನ ಮಾಲಕ ಸಂಘದ ಅಧ್ಯಕ್ಷ ಬಾಬು ಕೆವಿ ಉಪಸ್ಥಿತರಿದ್ದರು.
![](https://v4news.com/wp-content/uploads/2024/02/5-1024x681.jpeg)
ದ್ಯಾದರ ಪೂಜಾರಿ ಕಡೇಶಿವಾಲಯ ಅಧ್ಯಕ್ಷತೆ ಹಾಗೂ ಕಾರ್ಯದರ್ಶಿ ಯಶವಂತ್ ಪತ್ತು ಕೊಡಂಗೆ ಯ ನೂತನ ಸಮಿತಿಯ ಪದಗ್ರಹಣ ಮಾಡಲಾಯಿತು ಲೋಕನಾಥ್ ಪೂಜಾರಿ ತಿಮರಾಜೆ ಸ್ವಾಗತಿಸಿ,ಸಂದ್ಯಾ ವಿದ್ಯಾದರ್ ಹಾಗೂ ಕೀರ್ತಿ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿ,ದಿನೇಶ್ ಪೂಜಾರಿ ಸುರ್ಲಾಜೆ ವಂದಿಸಿ, ದೀಪಕ್ ಹಾಗೂ ಭವ್ಯಶ್ರೀ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
![](https://v4news.com/wp-content/uploads/2024/02/tree-house-addddd-698x1024.jpg)