ಉದ್ಯಾವರ ಸೇತುವೆಯಲ್ಲಿ ಕಾರು ಲಾರಿ ಅಪಘಾತ: ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ
ಉದ್ಯಾವರ ಸೇತುವೆಯಲ್ಲಿ ಲಾರಿ ಹಾಗೂ ಕಾರು ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಬಹಳಷ್ಟು ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಕಾರು ಬಹುತೇಕ ಜಖಂಗೊಂಡು ಚಲಿಸದ ಕಾರಣ ಸ್ಥಳಕ್ಕೆ ಬಂದ ಕಾಪು ಪೊಲೀಸರು ಬಾರ ಎತ್ತುವ ಯಂತ್ರ ತರಿಸಿ ಕಾರನ್ನು ಸೇತುವೆ ಮೇಲಿಂದ ತೆರವುಗೊಳಿಸಲಾಯಿತು.