ಮೂಡುಬಿದಿರೆ: ಶಾರದಾದಾಸ್ ಸಿದ್ಧಾಶ್ರಮದ ಸ್ಥಾಪಕ ಅಧ್ಯಕ್ಷ ಕೆ. ಸುಂದರ ಹೆಗ್ಡೆ ನಿಧನ
ಮೂಡುಬಿದಿರೆ:ಪಡುಕೊಣಾಜೆ ಗ್ರಾಮದ ಕೊಣಾಜೆ ಕಲ್ಲು ಶಾರದಾದಾಸ್ ಸಿದ್ಧಾಶ್ರಮದ ಸ್ಥಾಪಕ ಅಧ್ಯಕ್ಷ ಕಲ್ಲಬೆಟ್ಟು ಗ್ರಾಮದ ಸಾಗಿನಬೆಟ್ಟು ಕೆ. ಸುಂದರ ಹೆಗ್ಡೆ (87) ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕೃಷಿಕರಾಗಿದ್ದ ಅವರು ಹೌದಾಲಿನಲ್ಲಿ ಹಲವು ವರ್ಷ ದಿನಸಿ ವ್ಯಾಪಾರ ಮಾಡಿಕೊಂಡು ಬಂದಿದ್ದರು. ಐತಿಹಾಸಿಕ ಹಿನ್ನೆಲೆಯ ಕೊಣಾಜೆಕಲ್ಲು ಸಿದ್ಧಾಶ್ರಮದ ಸ್ಥಾಪಕ ಅಧ್ಯಕ್ಷರಾಗಿ ಕ್ಷೇತ್ರದ ಅಭಿವೃದ್ಧಿಗೆ ಅನೇಕ ವರ್ಷ ದುಡಿದಿದ್ದರು. ನಡ್ಯೋಡಿ ಸರಕಾರಿ ಪ್ರಾಥಮಿಕ ಶಾಲಾವೃದ್ಧಿ ಸಮಿತಿ ಸ್ಥಾಪಕ ಸದಸ್ಯರಾಗಿ, ಖಜಾಂಜಿಯಾಗಿ ಹಾಗು ನಡ್ಯೋಡಿ ದೈವಸ್ಥಾನ ಸೇವಾ ಸಮಿತಿಯ ಖಜಾಂಜಿಯಾಗಿ ಸೇವೆ ಸಲ್ಲಿಸಿದ್ದರು. ಕಲ್ಲಬೆಟ್ಟು ಭಜನಾ ಮಂದಿರದ ಸ್ಥಾಪಕ ಸದಸ್ಯರಾಗಿಯು ಕಾರ್ಯ ನಿರ್ವಹಿಸಿದ್ದರು.
ಅವರಿಗೆ ಪತ್ನಿ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.