ಕಾರ್ಕಳ ಶಾಸಕರಿಂದ ಕೋವಿಡ್ ನಿಯಮ ಉಲ್ಲಂಘನೆ ಅರೋಪ:ಕಾಂಗ್ರೆಸ್ ಮುಖಂಡ ಸುಭೋದ್ ರಾವ್ ದೂರು

ಕೊವಿಡ್ ಸೊಂಕು ನಿಯಂತ್ರಣಕ್ಕೆ ಹಾಕಲಾಗಿರುವ ನಿಯಾಮವಳಿಗಳನ್ನು ಅಡಳಿತ ಪಕ್ಷದ ಶಾಸಕರೇ ಉಲ್ಲಂಘಿಸಿ ಕಾರ್ಯಕ್ರಮ ನಡೆಸಿರುವ ಅರೋಪಗಳು ಕೇಳಿ ಬಂದಿದೆ.ಕಾರ್ಕಳ ಶಾಸಕ ಸುನೀಲ್ ಕುಮಾರ್ ಮೇಲೆ ಈ ಗಂಭೀರ ಅರೋಪ ಕೇಳಿ ಬಂದಿದ್ದು,ಕಾಂಗ್ರೆಸ್ ಮುಖಂಡ ಕಾರ್ಕಳ ಸುಭೋದ್ ರಾವ್ ಈ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲದ ಮೂಲಕ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.


ಅನ್ ಲಾಕ್ ಬಳಿಕ ಉಡುಪಿ ಜಿಲ್ಲೆಯಲ್ಲಿ ಯಾವುದೇ ಸಭೆ ಸಮಾರಂಭ ನಡೆಸುವಂತಿಲ್ಲ ಎನ್ನುವ ಅದೇಶವನ್ನು ಜಿಲ್ಲಾಡಳಿತ ಅದೇಶಿಸಿತ್ತು.ಇಂತಹ ಕಾರ್ಯಕ್ರಮಗಳನ್ನು ಎಷ್ಟೇ ದೊಡ್ಡ ವ್ಯಕ್ತಿಯಾದ್ರೂ ಉಲ್ಲಂಘಿಸಿದ್ದಲ್ಲಿ ನಿರ್ದಕ್ಷಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ಕಾರ್ಕಳ ಶಾಸಕ ತನ್ನ ಸ್ವಂತ ಖಾಸಗಿ ಕಚೇರಿಯಲ್ಲಿ ಸಭೆ ಕಾರ್ಯಕ್ರಮ ನಡೆಸಿದ್ದಾರೆ.ಈ ಬಗ್ಗೆ ಸ್ವತಃ ಕಾಂಗ್ರೆಸ್ ಮುಖಂಡ ಅಲ್ಲಿಂದಲೇ ವಿಡಿಯೋ ಹೇಳಿಕೆಯನ್ನ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ದೂರನ್ನ ನೀಡಿದ್ದಾರೆ.ಜನ ಸಮಾನ್ಯರಿಗೊಂದು ಕಾನೂನು ಜನಪ್ರತಿನಿಧಿಗಳಿಗೊಂದು ಕಾನೂನು ಸರಿಯೇ…? ಎಂದು ಪ್ರಶ್ನಿಸಿದ್ದಾರೆ.ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದಾರೆ.

Related Posts

Leave a Reply

Your email address will not be published.