ಖ್ಯಾತ ಗಾಯಕ ಪದ್ಮಶ್ರೀ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ “ಡಾ. ಕದ್ರಿ ಗೋಪಾಲನಾಥ್ ಜೀವಮಾನ ಸಾಧನೆ ಪ್ರಶಸ್ತಿ 2023”

ಅಂತರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೋನ್ ಕಲಾವಿದರಾದ ಪದ್ಮಶ್ರೀ ಪುರಸ್ಕೃತ ಡಾ.ಕದ್ರಿ ಗೋಪಾಲನಾಥ್ ರವರ ಹೆಸರಿನಲ್ಲಿ ನಡೆಯುತ್ತಿರುವ “ಡಾ. ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ (ರಿ)” ವತಿಯಿಂದ ದಿನಾಂಕ : 23.12.2023 ರಂದು ” ಕದ್ರಿ ಸಂಗೀತ ಸೌರಭ 2023″ ಕಾರ್ಯಕ್ರಮವನ್ನು ಡಾ. ಬಿ.ಆರ್. ಅಂಬೇಡ್ಕರ್ ಭವನ, ಉರ್ವ ಸ್ಟೋರ್ಸ್, ಮಂಗಳೂರು ಇಲ್ಲಿ ಆಯೋಜನೆ ಮಾಡಲಾಗಿದೆ.
ಅಂದು ಬೆಳಗ್ಗಿನಿಂದ ಉದಯೋನ್ಮುಖ ಕಲಾವಿದರಿಗೆ ವೇದಿಕೆ, ಭವ್ಯ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸಂಜೆ ನಡೆಯಲಿರುವ ವೇದಿಕೆಯ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗಾಯಕರಾದ ಪದ್ಮಶ್ರೀ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ ಅವರನ್ನು “ಡಾ. ಕದ್ರಿ ಗೋಪಾಲನಾಥ್ ಜೀವಮಾನ ಸಾಧನೆ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಯು 50 ಸಾವಿರ ನಗದು ಹಾಗೂ ಬೆಳ್ಳಿಯ ಫಲಕ ಹೊಂದಿರುತ್ತದೆ. ನಂತರ ಭವ್ಯ ವೇದಿಕೆಯಲ್ಲಿ ಶ್ರೀಯುತರ ಸಂಗೀತ ಕಾರ್ಯಕ್ರಮವಿರುತ್ತದೆ.
ನಾಡಿನ ಅನೇಕ ಹಿರಿಯ ಕಲಾವಿದರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ದು ಸಾಕ್ಸೋಫೋನ್ ವಾದನದಲ್ಲಿ ಅದ್ವಿತೀಯ ಅನ್ನುವ ಹಾಗೆ ಬದುಕಿ ಬಾಳಿದ ನಮ್ಮೆಲ್ಲರ ನೆಚ್ಚಿನ ಸಾಕ್ಸೋಫೋನ್ ಚಕ್ರವರ್ತಿ, ಕಲೈಮಾಮಣಿ , ಕರ್ನಾಟಕ ಕಲಾಶ್ರೀ ಡಾ.ಕದ್ರಿ ಗೋಪಾಲನಾಥ್ ಅವರ 74 ನೇ ಹುಟ್ಟು ಹಬ್ಬದ ಅಂಗವಾಗಿ ನಡೆಯುತ್ತಿರುವ ಈ ಕಾರ್ಯಕ್ರಮದ ಬಗ್ಗೆ ದಯಮಾಡಿ ತಮ್ಮ ಪತ್ರಿಕೆಯಲ್ಲಿ ಪ್ರಕಟ ಮಾಡಬೇಕೆಂದು ಕೋರುತ್ತೇವೆ.