ಗಂಗೊಳ್ಳಿಯಲ್ಲಿ ಗಾಂಜಾ ಹಂಚಿಕೆಯಲ್ಲಿ ತೊಡಗಿದಾತನ ಬಂಧನ
ಕುಂದಾಪುರ ತಾಲೂಕು ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಹಂಚಿಕೆಯಲ್ಲಿ ತೊಡಗಿಸಿಕೊಂಡಿದ್ದ ರವಿರಾಜ್ ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ಎಸ್ಪಿ, ಡಿಎಸ್ಪಿ, ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ನಂಜಾ ನಾಯ್ಕ ಹಾಗೂ ಎಎಸ್ಐ ರಘುರಾಮ್ ಮತ್ತು ಪೊಲೀಸ್ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆಯಲ್ಲಿ ಆಪಾದಿತ ರವಿರಾಜ್ ಎಂಬಾತನನ್ನು ಬಂಧಿಸಿ ಮಾರಾಟ ಮಾಡುತ್ತಿದ್ದ ಗಾಂಜಾವನ್ನು ವಶ ಪಡಿಸಿಕೊಂಡು ಪ್ರಕರಣವನ್ನು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಹೆಡ್ ಕಾನ್ಸ್ಟೇಬಲ್ ರಾಮು ಹೆಗ್ಡೆ, ರಾಘವೇಂದ್ರ,ರಮೆಶ್ ಚಂದ್ರಶೇಖರ್,ಹರ್ಷ, ದಿನೇಶ್ ಭಾಗವಹಿಸಿದ್ದರು.