ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ನಿಂದ ವಿಭಿನ್ನ ಪ್ರತಿಭಟನೆ
ಮಳೆಯ ನಡುವೆಯೂ ತೈಲ ಬೆಲೆ ಏರಿಕೆಯನ್ನ ವಿರೋಧಿಸಿ, ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ.
ಈ ನಡುವೆ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಹಾಗೂ ಕಾಂಗ್ರೆಸ್ ಮುಖಂಡ ವಿವೇಕ್ ರಾಜ್ ನೇತೃತ್ವದಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಯಿತು. ನಗರದ ಕಾಂಗ್ರೆಸ್ ಕಚೇರಿಯಿಂದ ಮಲ್ಲಿಕಟ್ಟೆಯ ಪ್ರೆಟೋಲ್ ಬಂಕ್ನಲ್ಲಿ ಲಾರಿಗೆ ಡಿಸೇಲ್ ಹಾಕಲು ಬಂದಾಗ, ಅಲ್ಲಿ ಡಿಸೇಲ್ ಬೆಲೆ ಏರಿಕೆಯನ್ನು ಕಂಡು ಲಾರಿಯನ್ನು ಹಗ್ಗ ಕಟ್ಟಿ ರಸ್ತೆ ಮಧ್ಯೆಯೇ ಎಳೆಯೂ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ, ಬೆಲೆ ಏರಿಕೆಯಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಕೇಂದ್ರ ಸರ್ಕಾರ ಬಂಡವಾಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ದೂರಿದರು. ಈ ವೇಳೆ ಯೂತ್ ಕಾಂಗ್ರೆಸ್ ಜನರಲ್ ಸೆಕ್ರೆಟರಿ ದೀಕ್ಷಿತ್ ಅತ್ತಾವರ, ಸಂಜಯ್ ಬಿರ್ವ , ಸುನೀಲ್ ರುದ್ರಾ, ಶಹಾಜ್, ಸೈಪು, ಚೆರಿಸ್ ಕೊವೆಲ್ಲೊ, ಕಾರ್ಪೋರೇಟರ್ ನವೀನ್ ಡಿಸೋಜಾ, ಮಾಜಿ ಕಾರ್ಪೋರೇಟರ್ಗಳಾದ ಅಪ್ಪಿ, ಮಹಮ್ಮದ್ ಸೇರಿದಂತೆ ಮತ್ತಿತ್ತರ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.