ನಟನ ಕ್ಷೇತ್ರದಲ್ಲಿ ಮಿಂಚುತ್ತಿರುವ ಯುವನಟಿ ಸಿಂಚನಾ ಚಂದ್ರಮೋಹನ್

ನಟನೆ ಎಂಬುವುದು ಒಂದು ಕಲೆ ಆ ಕಲೆಯನ್ನು ಪ್ರದರ್ಶಿಸುವ ಜಾಣ್ಮೆ ಎಲ್ಲರಲ್ಲಿಯೂ ಇರುವುದಿಲ್ಲ, ಇನ್ನೂ ಕೆಲವರಿಗೆ ಅವಕಾಶ ದೊರೆಯುವುದಿಲ್ಲ, ಅದರೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡವರು ಉತ್ತಮ ನಟನಾಗಬಹುದು. ನಟನೆ ಎಂಬುವುದು ಜೀವವಿಲ್ಲದ ಪಾತ್ರಕ್ಕೆ ಜೀವ ತುಂಬುವುದು. ತನನ್ನು ತಾನು ಆ ಪಾತ್ರಕ್ಕೆ ಅರ್ಪಿಸಿಕೊಳ್ಳಬೇಕಾಗುತ್ತದೆ. ಎಂತಹ ಪಾತ್ರವಾದರು ನಿರ್ವಹಿಸುತ್ತೇನೆ ಎಂಬ ಗಟ್ಟಿ ನಿರ್ಧಾರ ನಮ್ಮಲ್ಲಿರಬೇಕು ಆಗ ಮಾತ್ರ ಆ ಪಾತ್ರಕ್ಕೆ ಜೀವ ಬರುತ್ತದೆ. ಅಂತಹ ಪಾತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಆ ಪಾತ್ರಕ್ಕೆ ಜೀವಕೊಟ್ಟವಂತವರಲ್ಲಿ ಸಿಂಚನಾ ಚಂದ್ರಮೋಹನ್ ಕೂಡ ಒಬ್ಬರು.

ಮೂಲತಃ ಕುಶಾಲನಗರದ ಕೊಪ್ಪದವರು, ಇವರ ತಂದೆ ಚಂದ್ರಮೋಹನ್ ತಾಯಿ ವನಿತಾ. ಸಿಂಚನಾ ಪ್ರಾಥಮಿಕ ಪ್ರೌಢ, ಪದವಿಪೂರ್ವ ಶಿಕ್ಷಣವನ್ನು ಕೊಪ್ಪದ ಭಾರತ್‍ಮಾತ ಶಾಲೆಯಲ್ಲಿ ಪೂರ್ಣಗೊಳಿಸಿದ ಇವರು ನಂತರ ಪದವಿ ಶಿಕ್ಷಣವನ್ನು ಮೈಸೂರಿನ ಜೆ.ಸಿ.ಸಿ ನಲ್ಲಿ ಪೂರ್ಣಗೊಳಿಸಿದರು. ತನ್ನ ಪದವಿ ಶಿಕ್ಷಣದ ಸಮಯದಲ್ಲಿ ವಿಶ್ವವಾಣಿ ಪತ್ರಿಕೆಯಲ್ಲಿ ವರದಿಗಾರರಾಗಿ ಉದ್ಯೋಗ ಕ್ಷೇತ್ರಕ್ಕೆ ಹೆಜ್ಜೆ ಇಟ್ಟ ಇವರು ನಂತರದ ದಿನಗಳಲ್ಲಿ ಕಸ್ತೂರಿ ವಾಹಿನಿಯಲ್ಲಿ ಮತ್ತು ಅನೇಕ ವಾಹಿನಿಗಳಲ್ಲಿ ಸುದ್ದಿವಾಚಕ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

 ತನ್ನ ತಾಯಿಯ ಆಸೆಯನ್ನು ಈಡೇರಿಸುವ ಸಲುವಾಗಿ ಧಾರಾವಾಹಿಗೆ ಸೇರಿಕೊಳ್ಳುತ್ತಾರೆ.ಇವರ ಮೊದಲ ಉದಯ ಟಿ,ವಿಯಲ್ಲಿ ಪ್ರಸಾರವಾಗುತ್ತಿದ್ದ “ಕಣ್ಮನಿ”. ಹೀಗೆ ಅಲ್ಲಿಂದ ಆರಂಭವಾದ ಸಿಂಚನಾ ಅವರ ನಟನೆಯ ಪಯಣ ಮುಂದುವರೆದು ಕಲರ್ ಕನ್ನಡದಲ್ಲಿ “ರಕ್ಷಾಬಂಧನ”,“ಹೊ ಮಳೆ”,ಸ್ಟಾರ್ ಸುವರ್ಣದಲ್ಲಿ “ನನ್ನ ಹೆಂಡ್ತಿ ಎಂಬಿಬಿಎಸ್”, “ಶಾಂತಂ ಪಾಪಂ” ಹೀಗೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದ ಹಿರಿಮೆ ಇವರದ್ದು.ಅದು ಮಾತ್ರವಲ್ಲದೇ “ಅವಲಕ್ಕಿ ಪವಲಕ್ಕಿ”, ಹಾಗೂ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ “ಪಿಂಗಾರ” ಎಂಬ ತುಳು ಸಿನಿಮಾದಲ್ಲಿ ನಟಿಸಿರುವುದು ನಮ್ಮಲ್ಲಿಗೂ ಹೆಮ್ಮೆ ಸಂಗತಿ.ಪ್ರಸುತ್ತ ಉದಯ ಟಿ.ವಿಯಲ್ಲಿ ಪ್ರಾಸಾರವಾಗುತ್ತಿರುವ “ಕಾವ್ಯಾಂಜಲಿ” ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ವೆಬ್ ಸರಣೆಯಲ್ಲಿ ನಟನೆಯನ್ನು ಪ್ರದರ್ಶಸುತ್ತಿದ್ದಾರೆ.

ಎಲ್ಲರಿಗೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಆಸೆ, ಗುರಿ ಇದ್ದೆ ಇರುತ್ತದೆ ಅದೇ ರೀತಿ ಸಿಂಚನಾ ಅವರ ಆಸೆ ಗುರಿ ಎಂದರೆ ತಾನು ಒಂದು ನಿರ್ದೇಶಕಿಯಾಗಿ ಮೂಡಿ ಬರಬೇಕು ಒಂದೊಳ್ಳೆ ಸಿನಿಮಾವನ್ನು ವೀಕ್ಷಕರಿಗೆ ನೀಡಬೇಕು ಎಂಬುದು ಇವರ ಮನದಾಸೆಯಾಗಿದೆ. ಇವರ ಈ ಎಲ್ಲಾ ಆಸೆ ಕನಸುಗಳು ಒಂದೊಳ್ಳೇ ಸಿನಿಮಾ ನಿರ್ದೇಶಕಿಯಾಗಿ ಮಿಂಚಲಿ ಎಂಬುವುದು ನಮ್ಮ ಆಶಯ.

ಕವಿತಾ
ತೃತೀಯ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು
ಪುತ್ತೂರು.

 

Related Posts

Leave a Reply

Your email address will not be published.