ಫೆಡರೇಶನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಕಾರ್ಯಕಾರಿಣಿ ಸಮಿತಿ ಸಭೆ
ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ ಅಸೋಸಿಯೇಷನ್ ಕಾರ್ಯಕಾರಿಣಿ ಸಮಿತಿ ಸಭೆಯು ಮೈಸೂರು ನಗರದ ಹಾರ್ಡಿಂಜ್ ಸರ್ಕಲ್ ಬಳಿ ಇರುವ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕಾರಿಣಿ ಸಭೆಯಲ್ಲಿ ಹಿಂದಿನ ನಡಾವಳಿಗಳನ್ನು ಅಂಗಿಕರಿಸಲಾಗಿ,ಸಂಘಕ್ಕೆ ತಮ್ಮದೇ ನಿವೇಶನವನ್ನು ಕೊಂಡುಕೊಳ್ಳಲು ಪ್ರಸ್ತಾಪಿಸಲಾಯ್ತು. ಸಂಘದ ಅಧ್ಯಕ್ಷರಾದ ಬಿ.ಚೆನ್ನರೆಡ್ಡಿಯವರು ಮಾತನಾಡಿ, ಲಾಕ್ಡೌನ್ ಸಮಯದಲ್ಲಿ ಸಾಕಷ್ಟು ಸಮಸ್ಯೆಯನ್ನು ಕಂಡಿದ್ದೇವೆ. ಇನ್ನು ಫೈನಾನ್ಸ್ ನಲ್ಲಿ ಸಾಲ ಮಾಡಿ ಖರೀದಿಸಿದ ಲಾರಿಯ ಕಂತನ್ನು ಕಟ್ಟಲಾಗದೆ ಸಮಸ್ಯೆಯನ್ನ ನಾವು ಕಂಡಿದ್ದೇವೆ ಪ್ರೆಟೋಲ್ ದರ ಏರಿಕೆ ನಮ್ಮಗೆ ಮತ್ತಷ್ಟು ಸಮಸ್ಯೆಯಾಗಿದೆ ಎಂದು ಅವರು ಹೇಳಿದರು.
ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ವಿರುದ್ಧ ಆಗಸ್ಟ್ 15 ರಿಂದ ತೀವ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಸಭೆಯಲ್ಲಿ ಹೇಳಿದರು. ಇದೇ ವೇಳೆ ಅಸೋಸಿಯೇಷನ್ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ನಡೆದವು. ಕಾರ್ಯಕಾರಿಣಿ ಸಭೆಯಲ್ಲಿ ಮೈಸೂರು ಉಪಾಧ್ಯಕ್ಷರಾದ ಎನ್ ಶ್ರೀನಿವಾಸ ರಾವ್ , ಹುಬ್ಬಳ್ಳಿ ಉಪಾಧ್ಯಕ್ಷರಾದ ಗಲ್ಬೂಸಾಬ್ ಹೊನ್ನಾಯಲ್ , ಗಂಗಾವತಿ ಉಪಾಧ್ಯಕ್ಷರಾದ ಸುರೇಶ್ ಸಿಂಘನಲ್ , ಕುಂದಾಪುರ ಉಪಾಧ್ಯಕ್ಷರಾದ ಮನ್ಸೂರ್ ಇಬ್ರಾಹಿಂ , ಜಿ.ನಾರಾಯಣ್ ಪೃಸಾದ್,ಕೆ.ಕ್ರಷ್ಣಮೂರ್ತಿ, ಎಚ್.ಎಸ್ ಸಂಜಯ್ ಕುಮಾರ್,ಎನ್.ಶ್ರೀಕಂಠಸ್ವಾಮಿ,ಮೊಹಮ್ಮದ್ ಗೌಸ್ಮು ಲ್ಲಾ,ಎಚ್.ಮುದ್ದುಹನುಮೆಗೌಡ ವಿಶ್ವನಾಥ್ ಉಪಸ್ಥಿತರಿದ್ದರು.