ಬೆಸೆಂಟ್ ಮಹಿಳಾ ಕಾಲೇಜು : ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಶಿಫಾನ ಆಯ್ಕೆ

ಮಂಗಳೂರು ನಗರದ ಬೆಸೆಂಟ್ ಮಹಿಳಾ ಕಾಲೇಜಿನ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಇ-ಮತದಾನದ ಮೂಲಕ ಆಯ್ಕೆ ನಡೆಯಿತು . ಪ್ರಸಕ್ತ ಸಾಲಿನ ನೂತನ ಅಧ್ಯಕ್ಷೆಯಾಗಿ ಶಿಫಾನ ಆಯ್ಕೆಯಾದರು .


ಉಪಾಧ್ಯಕ್ಷೆಯಾಗಿ ಖುಷಿ ಶಿವಚಂದ್ರ , ಕಾರ್ಯದರ್ಶಿಯಾಗಿ ನೇಹ , ಜೊತೆ ಕಾರ್ಯದರ್ಶಿಯಾಗಿ ಲಿಖಿತಾ ಆಯ್ಕೆಯಾದರು.ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ಮೀರಾ ಎಡ್ನಾ ಕೊಯಿಲೊ ಚುನಾವಣೆ ಪ್ರಕ್ರಿಯೆಗಳ ಉಸ್ತುವಾರಿ ವಹಿಸಿದ್ದರು. ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಕುಮಾರ್ ಶೆಟ್ಟಿ ಅವರು ಅಭಿನಂದಿಸಿದ್ದಾರೆ.

Related Posts

Leave a Reply

Your email address will not be published.