ಭಟ್ಕಳದ ಜೆ.ಎಮ್.ಎಫ್.ಸಿ ನ್ಯಾಯಾಲಯ ಕಟ್ಟಡ ಅಗ್ನಿಗಾಹುತಿ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜೆ.ಎಮ್.ಎಫ್.ಸಿ ನ್ಯಾಯಾಲಯ ಕಟ್ಟಡವು ಅಗ್ನಿಗಾಹುತಿಯಾಗಿದ್ದು, ನ್ಯಾಯಾಲಯದಲ್ಲಿದ್ದ ದಾಖಲೆಗಳು ಸಂಪೂರ್ಣ ಸುಟ್ಟು ಹೋಗಿದೆ. ಈ ಅವಘಡ ಬೆಳಿಗ್ಗಿನ ಜಾವಾ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರು.
ತಕ್ಷಣವೇ ಕಾರ್ಯಾಚರಣೆ ನಡೆಸಿ ಕೆಲವು ತಾಸುಗಳ ಸತತ ಪ್ರಯತ್ನದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿರುವುದಾಗಿ ಅಗ್ನಿಶಾಮಕ ದಳ ತಿಳಿಸಿದರು. ನ್ಯಾಯಾಲಯಲಿದ್ದ ಸಾವಿರಾರು ಕಡತಗಳು ಅವಘಡದಲ್ಲಿ ಸುಟ್ಟು ಬೂದಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಸಿವಿಲ್ ನ್ಯಾಯಾಧೀಶ ಜಗದೀಶ್ ಶಿವಪೂಜೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ಸಂಬಂಧ ಪಟ್ಟ ಭಟ್ಕಳದ ನಗರ ಠಾಣೆಯಲ್ಲಿ ದಾಖಲಾಸಿದ್ದಾರೆ.