ಮಣಿಪಾಲದಲ್ಲಿ ಸಿಲಿಂಡರ್ ಸ್ಪೋಟ

ಅಡುಗೆಗೆ ಬಳಸುವ ಸಿಲಿಂಡರ್ ಸ್ಪೋಟಗೊಂಡ ಘಟನೆ ಮಣಿಪಾಲದ ಸೋನಿಯಾ ಕ್ಲಿನಿಕ್ ಬಳಿ ನಡೆದಿದೆ. ಮನೆಗೆ ಬಳಸುವ ಸಿಲಿಂಡರ್‌ನಲ್ಲಿ ಅಡುಗೆ ಅನಿಲ ಸೋರುತ್ತಿರುವುದು ಮನೆಯವರ ಗಮನಕ್ಕೆ ಬಂದಿದ್ದು, ಅದನ್ನು ತಡೆಯುವ ಪ್ರಯತ್ನ ಮಾಡಿದರೂ ಸಫಲವಾಗದೇ ಸಿಲಿಂಡರ್ ಸ್ಪೋಟಗೊಂಡಿದೆ. ಅದೃಷ್ಟವಶತ್ ಮನೆಯವರು ಹೊರ ಓಡಿದ್ದು ಅಡುಗೆ ಮನೆಯ ಮೇಲ್ಚಾವಣೆಗಳು ಸ್ಪೋಟದ ರಭಸಕ್ಕೆ ಹಾರಿ ಹೋಗಿವೆ. ಅಡುಗೆ ಕೋಣೆಯೊಳಗಡೆಯೂ ಹಾನಿ ಉಂಟಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ತಂಡ ತಕ್ಷಣ ತಲುಪಿ ಸುರಕ್ಷಾತ ಕ್ರಮಗಳನ್ನು ಕೈಗೊಂಡರು.

 

Related Posts

Leave a Reply

Your email address will not be published.