ಪದ್ಮನಾಭ ಸಾವಂತ್ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಯಲಿ: ಕಾಂಗ್ರೆಸ್ ಒತ್ತಾಯ

ಬಂಟ್ವಾಳ: ದ.ಕ.ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಿತಿ ಉಪಾಧ್ಯಕ್ಷ, ಸಾಮಾಜಿಕ ಹಾಗೂ ಆರ್‌ಟಿಐ ಕಾರ್ಯಕರ್ತ ಪದ್ಮನಾಭ ಸಾವಂತ ಅವರ ಸಾವು ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡು ಬಂದರೂ ಸರಿಯಾಗಿ ಪರಿಶೀಲಿಸಿದರೆ ಇದೊಂದು ಕೊಲೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಆರೋಪಿಸಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪದ್ಮನಾಭ ಸಾಮಂತ್ ಆರ್‌ಟಿಐ ಕಾರ್ಯಕರ್ತನಾಗಿದ್ದು, ಬಂಟ್ವಾಳದಲ್ಲಿ ನಡೆದ ಅನೇಕ ಅಕ್ರಮ ಹಾಗೂ ಭ್ರಷ್ಟಾಚಾರ ಹಾಗೂ ಬಿಜೆಪಿ ಮುಖಂಡರು ಸೇರಿದಂತೆ ಸಮಾಜದಲ್ಲಿ ನಡೆಯುವ ಅನ್ಯಾಯ ವಿರುದ್ದ ದಿಟ್ಟತನದಿಂದ ಹೋರಾಟ ನಡೆಸಿ ಅಕ್ರಮಗಳನ್ನು ಬಯಲಿಗೆಳೆದಿದ್ದ. ಆ ಕಾರಣಕ್ಕಾಗಿ ಬ್ರಾಣ ಬೆದರಿಕೆ ಇತ್ತು ಈ ಬಗ್ಗೆ ಈ ಬಗ್ಗೆ ಪೊಲೀಸ್ ಠಾಣೆಗಳಿಗೆ ದೂರನ್ನು ನೀಡಿದ್ದ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪದ್ಮನಾಭ ಸಾಮಂತನ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಎರಡೇ ದಿನದಲ್ಲಿ ಈತನ ಶವ ಪತ್ತೆಯಾಗಿರುವುದು ಇದೊಂದು ವ್ಯವಸ್ಥಿತ ಕೊಲೆ ಎನ್ನುವುದು ಸಾಬೀತಾಗುತ್ತದೆ. ಪೊಲೀಸ್ ದೂರು ನೀಡಿzವರನ್ನು ಹಾಗೂ ಅದರ ಹಿಂದಿರುವ ವ್ಯಕ್ತಿಗಳನ್ನು ತನಿಖೆ ಮಾಡಿ ವಿಚಾರಣೆಗೊಳಪಡಿಸಬೇಕು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರು ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿದರು.
ಪದ್ಮನಾಭ ಸಾವಂತ್ ಆತ್ಮಹತ್ಯೆ ಮಾಡುವ ಜಾಯಮಾನದವರಲ್ಲ, ಬೆದರಿಕೆಗಳನ್ನು ಅರಗಿಸಿಕೊಳ್ಳುವ ಶಕ್ತಿ ಅವರಲ್ಲಿದೆ. ಅವರ ಮೇಲೆ ವಂಚನೆ ಆರೋಪ ಬಂದರೂ ಆ ಹಣವನ್ನು ವಾಪಸ್ಸು ನೀಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರು. ಆದರೆ ಹಣ ವಾಪಸ್ಸು ಪಡೆಯಲು ದೂರದಾರ ಬಂದಿರಲಿಲ್ಲ. ಈ ನಡುವೆ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಮೃತದೇಹ ಪತ್ತೆಯಾಗಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ. ಮೃತದೇಹದಲ್ಲಿ ಹಣೆಭಾಗದಲ್ಲಿ ಜಜ್ಜಿದ ಗಾಯ, ರಕ್ತ ಚಿಮ್ಮಿದ ಕಲೆಗಳು ಕಂಡು ಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ. ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ ಪದ್ಮನಾಭ ಸಾಮಂತ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಕೊಲೆ ಎಂಬುದು ಸಾಬೀತಾದರೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಟದ ಮೂಲಕ ಸಾವಿಗೆ ನ್ಯಾಯ ಒದಗಿಸುವ ಕೆಲಸ ಕಾಂಗ್ರೆಸ್ ಮಾಡಲಿದೆ. ಪೊಲೀಸ್ ತನಿಖೆಯ ಮೂಲಕ ಸತ್ಯಾಂಶ ಹೊರಬರಬೇಕು ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯ ಪಿಯೂಸ್ ಎಲ್.ರೊಡ್ರಿಗಸ್, ಜಿ.ಪಂ.ಮಾಜಿ ಸದಸ್ಯ ಪದ್ಮಶೇಖರ್ ಜೈನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ ಪಕ್ಷದ ಪ್ರಮುಖರಾದ ಪ್ರಶಾಂತ್ ಕುಲಾಲ್, ಸುರೇಶ್ ಜೋರಾ, ವೆಂಕಪ್ಪ ಪೂಜಾರಿ, ಪ್ರವೀಣ್, ಚಂದ್ರಹಾಸ ಡೆಂಝಿಲ್, ಸಂಜಿತ್ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.