ಮುರಿದ ಬೆಳ್ತಂಗಡಿಯ ಕನ್ನಾಜೆ-ಸವನಾಳು ಗ್ರಾಮದ ಸಂಪರ್ಕ ಸೇತುವೆ : ಕಂಗಲಾದ ಕುಟುಂಬಗಳು
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಿಂದ ಕನ್ನಾಜೆ, ಸವನಾಳು ಗ್ರಾಮಕ್ಕೆ ಸಂಪರ್ಕ ಸೇತುವೆಯ ಬಜಕ್ರೆ ಸಾಲು ಎಂಬಲ್ಲಿ ಸೇತುವೆ ಮುರಿದು ಹೋಗಿದ್ದು ನೂರಾರು ಕುಟುಂಬಗಳು ದಾರಿ ಕಾಣದೆ ಕಂಗಾಲಾಗಿದ್ದಾರೆ. ಈ ರಸ್ತೆ ಈಗಾಗಲೇ ಗ್ರಾಮ ಸಡಕ್ ರಸ್ತೆಯಾಗಿ ಮಂಜೂರು ಗೊಂಡಿದ್ದು ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ. ಆದರೆ ಬಜಕ್ರೆ ಸಾಲು ಎಂಬಲ್ಲಿ ಹೊಸ ಸೇತುವೆ ಆಗುವ ಮೊದಲೇ ಹಳೇ ಸೇತುವೆ ತೆರವು ಮಾಡಿದ್ದೇ ಈ ಅವಾಂತರಕ್ಕೆ ಕಾರಣವಾಗಿದೆ. ಇದಕ್ಕೆ ಮೊದಲು ಸುಮಾರು ಮೂರು ಸಲ ಅಲ್ಲಿನ ಗ್ರಾಮಸ್ಥರೇ ಸೇರಿ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಇದೀಗ ಮತ್ತೆ ಸೇತುವೆ ಕೊಚ್ಚಿ ಹೋಗಿದ್ದು ಅಲ್ಲಿನ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಕಣ್ಣಾಜೆ ಪರಿಸರದ ಜನರು ಬೆಳ್ತಂಗಡಿ ಪೇಟೆಗೆ ಬರಬೇಕಾದರೆ ಅದೇ ಸೇತುವೆ ಮೂಲಕ ಬರಬೇಕಿದೆ ಆದರೆ ಈಗ ಬೇರೆ ದಾರಿ ಕಾಣದೆ ಕಂಗಾಲಾಗಿದ್ದಾರೆ. ಸಂಬಂಧ ಪಟ್ಟ ಜನ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಎಷ್ಟೇ ಮನವಿ ನೀಡಿದರೂ ಪ್ರಯೋಜನ ಆಗಲಿಲ್ಲ ಎಂದು ಊರವರು ಅವಲತ್ತು ಕೊಂಡಿದ್ದಾರೆ. ಇನ್ನಾದರೂ ಎಚ್ಚೆತ್ತು ಕೊಂಡು ಅಲ್ಲಿನ ಗ್ರಾಮಸ್ಥರಿಗೆ ಸೇತುವೆಯ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಹೋಗಲು ಅನುಕೂಲ ಮಾಡುವಂತೆ ಆಗ್ರಹಿಸಿದ್ದಾರೆ.