ಮುಳ್ಳು ಹಂದಿಗೆ ಢಿಕ್ಕಿಯಾಗಿ ಕಾರು ಪಲ್ಟಿ
ರಸ್ತೆ ದಾಟುತ್ತಿದ್ದ ಮುಳ್ಳು ಹಂದಿಯೊಂದಕ್ಕೆ ಕಿಯಾ ಕಾರೊಂದು ಡಿಕ್ಕಿಯಾಗಿ ನಿಯಂತ್ರಣ ಕಳೆದು ಕೊಂಡು ಪಕ್ಕದ ತಗ್ಗಿನ ಪೊದೆಯೊಂದಕ್ಕೆ ಸಾಗಿ ಪಲ್ಟಿಯಾಗಿದ ಘಟನೆ ತಡರಾತ್ರಿ ನಡೆದಿದೆ.
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗವಾಗಿ ಸಾಗುತ್ತಿದ್ದ ಮಂಗಳೂರು ನೊಂದಾಣಿ ಸಂಖ್ಯೆಯ ಕಿಯಾ ಕಾರು ತೆಂಕ ಎರ್ಮಾಳು ಗರೋಡಿ ಬಳಿ ಸಾಗುತ್ತಿದಂತೆ ಮಳ್ಳು ಹಂದಿಗೆ ಡಿಕ್ಕಿಯಾಗಿ ನಿಯಂತ್ರಣ ಕಳೆದುಕೊಂಡು ಸುಮಾರು ನೂರು ಮೀಟರ್ ಸಾಗಿ ತಗ್ಗಿನ ಪೊದೆಗೆ ಉರುಳಿದೆ. ಕಾರಿನಲ್ಲಿ ಚಾಲಕನೊರ್ವನೇ ಪ್ರಯಾಣಿಸುತ್ತಿದ್ದು ಪಲ್ಟಿಯಾದ ಪರಿಣಾಮ ತಲೆಗೆ ಗುದ್ದಿನ ಏಟು ತಗುಲಿದ್ದರಿಂದ ತಲೆ ಸುತ್ತು ಬರುತ್ತಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಕಾರಿನ ಒಡೆತಕ್ಕೆ ಮುಳ್ಳು ಹಂದಿ ಸ್ಥಳದಲ್ಲೇ ಮೃತ ಪಟ್ಟಿದ್ದು ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.