ಯೆನೆಪೋಯ ಆಸ್ಪತ್ರೆಯಿಂದ ಅಪರೂಪದ ಕ್ಯಾನ್ಸರ್ ಕಾಯಿಲೆ ನಿರ್ಮೂಲನೆ….!

ಯೆನೆಪೋಯ ಆಸ್ಪತ್ರೆಯಿಂದ ಎದೆಗೂಡಿನ ಅಪರೂಪದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ಸರ್ಜಿಕಲ್ ಆಂಕೋಲಜಿ ವಿಭಾಗ ಮುಖ್ಯಸ್ಥರಾದ ಡಾ. ಜಲಾಲುದ್ದೀನ್ ಅಕ್ಬರ್ ತಿಳಿಸಿದರು.

ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಸುಮಾರು ೩೨ ವರ್ಷದ ಶ್ವೇತಾ ಎಂಬ ಮಹಿಳೆಯಲ್ಲಿ ಈ ಕಾಯಿಲೆ ಕಾಣಿಸಿಕೊಂಡಿತ್ತು. ಕೇರಳದ ಕೊಯಮತ್ತೂರಿನ ಆಸ್ಪತ್ರೆಯಲ್ಲಿ ೬ ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ ಯೆನೆಪೋಯ ಸರ್ಜಿಕಲ್ ಕ್ಯಾನ್ಸರ್ ವೈದ್ಯರ ತಂಡ ಟ್ಯೂಮರ್ ಬೋರ್ಡ್ ನಲ್ಲಿ ಚರ್ಚಿಸಿ.೯ ಪಕ್ಕೆಲುಬುಗಳ ಜೊತೆಗೆ ಇರುವ ಗಂಟು ಮತ್ತು ಶ್ವಾಸಕೋಶದ ಭಾಗದ ಒಂದು ಸಣ್ಣ ತುಣುಕನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಿ.ಬಲ ಶ್ವಾಸಕೋಶ ಮತ್ತು ಎದೆಯ ಗೋಡೆಯ ಭಾಗವನ್ನು ಡಯಲ್ ಮೆಶ್ ಮತ್ತು ಟೈಟಾನಿಯಂ ಪ್ಲೇಟ್ ಗಳಿಂದ ಕೂಡಿದ ಶಸ್ತ್ರಚಿಕಿತ್ಸೆವನ್ನ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಈ ಎದೆಗೂಡಿನ ಕ್ಯಾನ್ಸರ್ ಕಾಯಿಲೆಯನ್ನ ನಿರ್ಮೂಲನೆ ಮಾಡಿದೆ. ಇನ್ನೂ ಇಂತಹ ಶಸ್ತ್ರಚಿಕಿತ್ಸೆ ಭಾರತದಲ್ಲಿಯೇ ಪ್ರಥಮವಾಗಿದ್ದು.ಯೆನೆಪೋಯ ವೈದ್ಯರ ತಂಡ ಮತ್ತೊಂದು ಸಾಧನೆಯನ್ನ ತನ್ನ ಮುಡಿಗೆ ಹೆಸರಿಸಿಕೊಂಡಿದೆ.ರೋಗಿಯು ಮೊದಲಿನಂತೆ ಜೀವನ ನಡೆಸಲು ಸಾದ್ಯವಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಸರ್ಜಿಕಲ್ ಆಂಕೋಲೊಜಿಸ್ಟ್ ಡಾ. ರೋಹನ್ ಶೆಟಿ, ಯೆನೆಪೋಯ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ಡಾ|| ಆರ್.ಎಮ್. ವಿಜಯಕುಮಾರ್. ಸರ್ಜಿಕಲ್ ಆಂಕೋಲಜಿಸ್ಟ್ ಡಾ||ಅಮರ್ ರಾವ್, ನರಶಸ್ತ್ರ ಚಿಕಿತ್ಸಕ ಡಾ. ಪವಮನ್ ಎಸ್, ಸರ್ಜಿಕಲ್ ಆಂಕೋಲಜಿಸ್ಟ್ ಡಾ. ಮೊಹಮ್ಮದ್, ಆರ್ಥೋಪೆಡಿಕ್ ಸರ್ಜನ್ ಡಾ. ಅಭಿಷೇಕ್ ಶೆಟ್ಟಿ, ಅನೆಸ್ಥೇಸಿಯಾಲಜಿಸ್ಟ್ ಡಾ. ತಿಪ್ಪೇಸ್ವಾಮಿ, ಡಾ. ಏಜಾಜ್ ಅಹಮದ್, ಆನ್ಕೋ ಪಥಾಲಜಿಯ ಡಾ. ಸಿದ್ಧಾರ್ಥ್ ಬಿಶ್ವಾಸ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.