ಉಡುಪಿಯಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ವಿವಿಧ ಸಂಘಟನೆಗಳಿಂದ ಜನಾಂದೋಲನ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆಯೂ ಕೋವಿಡ್ ಸಂಕಷ್ಟ ಕಾಲದಲ್ಲಿ ಜನರಿಗೆ ಪ್ಯಾಕೇಜ್ ಗಳನ್ನು ನೀಡುವಂತೆ ಅಗ್ರಹಿಸಿ ಹಮ್ಮಿಕೊಂಡಿರುವ ಜನಂದೋಲನವು ಇಂದು ಉಡುಪಿ ಶಾಸಕ ರಘುಪತಿ ಭಟ್ ಕಚೇರಿ ಮುಂದುಗಡೆ ನಡೆಸಲಾಯಿತು.ವಿವಿಧ ಸಂಘಟನೆಗಳ ಕಾರ್ಯಕರ್ತರು ಜನಾಂದೋಲನದಲ್ಲಿ ಭಾಗವಹಿಸಿ ಶಾಸಕ ರಘುಪತಿ ಭಟ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ದ ಘೊಷಣೆಗಳನ್ನು ಕೂಗಿದ್ರು.
ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಮಾತನಾಡಿ ಕೊವಿಡ್ ಸಂಕಷ್ಟ ಕಾಲದಲ್ಲಿ ಜನರಿಗೆ ಪ್ಯಾಕೇಜ್ ಗಳನ್ನ ಘೊಷಣೆ ಮಾಡುವುದರ ಬದಲು ,ಮಕ್ಕಳಂತೆ ಬಿಜೆಪಿಗರು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ.
ದಲಿತ ಮುಖಂಡ ಸಮಿತಿಯ ಸುಂದರ್ ಮಾಸ್ಟರ್ ,ಕಾಂಗ್ರೆಸ್ ಮುಖಂಡೆ ವೆರೋನಿ ಕಾಕರ್ನೆಲಿಯೋ,ಜೆಡಿಎಸ್ ಮುಖಂಡ ಯೋಗಿಶ್ ಶೆಟ್ಟಿ ,ಕೀರ್ತಿ ಶೆಟ್ಟಿ ,ಯತೀಶ್ ಕರ್ಕೇರಾ.ಹುಸೇನ್ ಕೋಡಿ ಬೆಂಗ್ರೆ ,ಯಾಸೀನ್ ಮಲ್ಪೆ ಮತ್ತಿತ್ತರರು ಉಪಸ್ಥಿತರಿದ್ದರು.