ಸರ್ಕಾರ ಇದೆಯೋ ಇಲ್ಲವೊ ಅಥವಾ ಸರ್ಕಾರ ಇಲ್ಲದೇ ಜನರು ಜೀವನ ನಡೆಸುತ್ತಾ ಇದ್ದಾರಾ..? : ಎನ್‍ಎಸ್‍ಯುಐನ ಮನೀಷ್ ಜಿ ರಾಜ್

ಕೊರೋನಾದಿಂದ ದೇಶದಲ್ಲಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿ ಸರ್ಕಾರ ಇದೆಯೋ ಇಲ್ಲವೊ ಅಥವಾ ಸರ್ಕಾರ ಇಲ್ಲದೇ ಜನರು ಜೀವನ ನಡೆಸುತ್ತಾ ಇದ್ದಾರಾ..? ಎಂದು ಎನ್‍ಎಸ್‍ಯುಐ ಜನರಲ್ ಸೆಕ್ರೆಟರಿ ಮನೀಷ್ ಜಿ ರಾಜ್ ಹೇಳಿದರು.

ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಶಿಕ್ಷಣ ಸಚಿವರು ಇತ್ತೀಚಿಗೆ ಪಿಯು ವಿದ್ಯಾರ್ಥಿಗಳ ಪರೀಕ್ಷೆ ರದ್ದು ಮಾಡಿದ್ದಾರೆ. ಸರ್ಕಾರಕ್ಕೆ ಇದರ ಬಗ್ಗೆ ಯಾವುದೇ ಒಂದು ಪ್ಲಾನಿಂಗ್ಸ್ ಇಲ್ಲ. ಪರೀಕ್ಷೆ ರದ್ದು ಮಾಡಿ ಮುಂದಿನ ಯೋಜನೆ ಏನು ಎಂಬುದು ಇನ್ನೂ ಯೋಚಿಸಿಲ್ಲ. ಕೇಂದ್ರದಲ್ಲಿ ಸಿಬಿಎಸ್ಸಿ ಪರೀಕ್ಷೆ ರದ್ದು ಮಾಡಿದ ಹಿನ್ನೆಲೆ ಇವರು ರಾಜ್ಯದಲ್ಲಿ ಪಿಯು ಪರೀಕ್ಷೆ ರದ್ದು ಮಾಡಿದ್ದಾರೆ. ಇಲ್ಲಿ ಎಸ್‍ಎಸ್‍ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇದೆ ಹೇಳ್ತಾರೆ. ವಿದ್ಯಾರ್ಥಿಗಳ ಜೀವನದಲ್ಲಿ ಸರ್ಕಾರ ಚೆಲ್ಲಾಟವಾಡುತ್ತಿದೆ. ಈ ಬಗ್ಗೆ ಎನ್‍ಎಸ್‍ಯುಐ ನಿಂದ ವಿದ್ಯಾರ್ಥಿಗಳ ಪರವಾಗಿ ಹೋರಾಟ ಮಾಡಲಿದೆ. ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಿದೆ ಎಂದು ಹೇಳಿದರು.

 

Related Posts

Leave a Reply

Your email address will not be published.