ಸೆಲೂನ್‌ಗೆ ನುಗ್ಗಿ ಮಹಿಳೆಗೆ ಹಲ್ಲೆ : ಸಿಸಿಟಿವಿಯಲ್ಲಿ ದಾಖಲು
ಮಂಗಳೂರಿನ ಕದ್ರಿಯಲ್ಲಿ ಸೆಲೂನ್‌ಗೆ ನುಗ್ಗಿ ಮಹಿಳೆಗೆ ಕಿರುಕುಳ ನೀಡಿ, ಹಲ್ಲೆ ನಡೆಸಿ ಹಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಮಂಗಳೂರಿನ ಅತ್ತಾವರ ನಿವಾಸಿ ಅಬ್ದುಲ್ ದಾವೂದ್, ಬಂಧಿತ ವ್ಯಕ್ತಿ.
ಈತ ಯೂನಿಸೆಕ್ಸ್ ಸೆಲೂನ್‌ಗೆ ನುಗ್ಗಿ ಯುವತಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾನೆ. ಕದ್ರಿಯ ಯುನಿಸೆಕ್ಸ್ ಸೆಲೂನ್‌ನಲ್ಲಿ ಜುಲೈ 1 ರಂದು ಈ ಘಟನೆ ನಡೆದಿತ್ತು. ಯುವತಿಯ ಮೈಗೆ ಕೈ ಹಾಕಿ ಕಿರುಕುಳ ನೀಡಿದ್ದ ದಾವೂದ್ ಆಕೆಗೆ ಹಲ್ಲೆ ನಡೆಸಿ 14 ಸಾವಿರ ರೂ. ದರೋಡೆ ನಡೆಸಿ ಪರಾರಿಯಾಗಿದ್ದ. ಈ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯುವತಿಗೆ ಹಲ್ಲೆ ನಡೆಸಿ ಬ್ಯಾಗ್ ಸೆಳೆದುಕೊಂಡು ಹೋಗುವ ದೃಶ್ಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.