ಕಾರ್ಕಳದ ಪತ್ರಕರ್ತರಿಗೆ ಮಣಿಪಾಲ ಆರೋಗ್ಯ ಕಾರ್ಡ್ ವಿತರಣೆ
ಕಾರ್ಕಳ ತಾಲೂಕಿ ಎಲ್ಲಾ ಪತ್ರಕರ್ತರಿಗೆ ಉಚಿತವಾಗಿ ಮಣಿಪಾಲ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಕಳದ ಖಾಸಗಿ ಹೋಟೆಲ್ನಲ್ಲಿ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ವೈದ್ಯಾಧಿಕಾರಿ ಕೀರ್ತಿನಾಥ್ ಬಲ್ಲಾಳ್ ಅವರು. ಕಳೆದ 21 ವರ್ಷದಿಂದ ಸತತವಾಗಿ ಮಣಿಪಾಲ್ ಆರೋಗ್ಯ ಕಾರ್ಡ್ನ್ನು ವಿತರಿಸುತ್ತಿದ್ದೇವೆ. ಸಮಾಜದ ಎಲ್ಲಾರಿಗೂ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಸಿಗಲಿ ಎಂಬ ಉದ್ದೇಶದಿಂದ ವಿತರಿಸುತ್ತಿದ್ದೇವೆ ಎಂದು ಹೇಳಿದರು.
ಆನಂತರ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕರಾದ ಶ್ರೀ ಮೋಹನ್ ಶೆಟ್ಟಿ ಅವರು ಆರೋಗ್ಯ ಕಾರ್ಡ್ನಲ್ಲಿ ಸಿಗುವ ರಿಯಾಯಿತಿಯ ಬಗ್ಗೆ ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಟಿ ಎಂ ಎ ಪೈ ಆಸ್ಪತ್ರೆ ಕಾರ್ಕಳದ ನಟೇಶ್ ಕುಮಾರ್, ಪ್ರತಿನಿಧಿಯಾದ ಶ್ರೀ ಶ್ರೀನಿವಾಸ್ ಭಾಗವತ್ ಹಾಗೂ ಶ್ರೀ ಚೇತನ್ ಉಪಸ್ಥಿತರಿದ್ದರು.


















