ಬೆಂಕಿ ಅವಘಡ : ಎಸೆಸೆಲ್ಸಿ ವಿದ್ಯಾರ್ಥಿಗಳು ಸ್ಥಳಾಂತರ
ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದ ಕೊಠಡಿಯ ಸಮೀಪವೆ ಇದ್ದ ಲ್ಯಾಬ್ನಲ್ಲಿ ಬೆಂಕಿ ಅವಘಡ ಸಂಭವಿಸಿ ಇಡೀ ಲ್ಯಾಬ್ ಹೊತ್ತಿ ಉರಿದ ಘಟನೆ ಬಬ್ಬುಕಟ್ಟೆಯ ಖಾಸಗಿ ಮಹಿಳಾ ಕಾಲೇಜಿನಲ್ಲಿ ನಡೆದಿದೆ. ಬೆಂಕಿ ಅವಘಡ ಸಂಭವಿಸಿದ ಲ್ಯಾಬ್ ಇದ್ದ ಕಟ್ಟಡದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿದ್ದು, ಅವರನ್ನೆಲ್ಲಾ ಡ್ಯುಟಿಯಲ್ಲಿದ್ದ ಶಿಕ್ಷಕರು ಮತ್ತು ಸಿಬ್ಬಂದಿಗಳು ಸುರಕ್ಷಿತವಾಗಿ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ.
ಸರ್ವಿಸ್ ಲೈನ್ನಲ್ಲಿನ ವಿದ್ಯುತ್ ಏರಿಳಿತವೇ ಈ ಅವಘಡಕ್ಕೆ ಕಾರಣ ಎಂದು ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ. ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

















