Home 2024 March (Page 6)

ವಡೋದರ ಬೇಡ ಎಂದ ಹಾಲಿ ಸಂಸದೆ ರಂಜನಾ ಭಟ್

ಗಜರಾತಿನ ವಡೋದರದಿಂದ ಸ್ಪರ್ಧಿಸಲು ಟಿಕೆಟ್ ಪಡೆದಿದ್ದ ಹಾಲಿ ಸಂಸದೆ ರಂಜನಾ ಭಟ್ ಅವರು ತಾನು ಸ್ಪರ್ಧಿಸುವುದಿಲ್ಲ ಎಂದು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. 2014ರಲ್ಲಿ ಪ್ರಧಾನಿ ಮೋದಿಯವರು ಎರಡು ಕಡೆ ಸ್ಪರ್ಧಿಸಿದ್ದರಿಂದ ವಡೋದರಕ್ಕೆ ಮರು ಚುನಾವಣೆ ನಡೆದಿತ್ತು. ಆಗ ಗೆದ್ದಿದ್ದ ರಂಜನಾ ಭಟ್ 2019ರಲ್ಲೂ ಗೆದ್ದಿದ್ದರು ಮತ್ತು ಈ ಬಾರಿಯೂ ಟಿಕೆಟ್ ಪಡೆದಿದ್ದರು.

ಬರ ಪರಿಹಾರ ನೀಡದ ಕೇಂದ್ರ ಸರಕಾರ: ಸುಪ್ರೀಂ ಕೋರ್ಟಿನಲ್ಲಿ ಕರ್ನಾಟಕದ ಅರ್ಜಿ

ಬರಗಾಲದಿಂದಾಗಿ 48 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಆದರೆ ಕೆಂದ್ರ ಸರಕಾರವು ತಾರತಮ್ಯ ನೀತಿ ಅನುಸರಿಸುತ್ತ ಪರಿಹಾರ ನೀಡುತ್ತಿಲ್ಲ ಎಂದು ರಾಜ್ಯ ಸರಕಾರದ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು. ಅವರು ಈ ನಿಟ್ಟಿನಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೊಟ್ಟಿ ನಡೆಸಿ ಮಾಹಿತಿ ನೀಡಿದರು.

ವಿಟ್ಲ: ಎರಡು ಅಂಗಡಿಗಳಿಗೆ ಕನ್ನ

ವಿಟ್ಲ: ವಿಟ್ಲ ಪೇಟೆ ಎರಡು ಅಂಗಡಿಗಳಿಗೆ, ವಿಟ್ಲದ ಮೇಗಿನ ಪೇಟೆಯ ಒಂದು ಅಂಗಡಿಗೆ ಶುಕ್ರವಾರ ರಾತ್ರಿ ಕಳ್ಳರು ನುಗ್ಗಿ ಹಣ ಹಾಗೂ ದಿನಸಿ ಸಾಮಾಗ್ರಿ ಕದ್ದೋಯ್ಯಿದಿದ್ದಾರೆ. ಚುನಾವಣೆ ಹಿನ್ನಲೆ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ನಿಯೋಜನೆಗೊಳಿಸಲಾಗಿದ್ದು, ಅವರು ತಡ ರಾತ್ರಿ ಹೊತ್ತಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ಕಳ್ಳರು ಸಲೀಸಾಗಿ ಬಂದು ಕಳ್ಳತನ ನಡೆಸಿ,

ಕಾಸರಗೋಡು: ಅಂಬಲತ್ತರದಲ್ಲಿ ಪತ್ತೆಯಾದ ಖೋಟಾ ನೋಟು

ಕಾಸರಗೋಡು ಜಿಲ್ಲೆಯ ಕಾಞಾಂಗಾಡ್ ಸಮೀಪ ಅಂಬಲತರ ಪಾರಪಳ್ಳಿ ಗುರುಪುರದ ಬಾಡಿಗೆ ಮನೆಯೊಂದರಲ್ಲಿ ರೂ 2 ಸಾವಿರ ಮುಖಬೆಲೆಯ 7.25 ಕೋಟಿ ರೂ ಪತ್ತೆಯಾಗಿದ್ದು ತನಿಖೆಯ ವೇಳೆ ಇವೆಲ್ಲವೂ ಖೋಟಾ ನೋಟುಗಳು ಎಂದು ತನಿಖೆಯಿಂದ ಸ್ಪಷ್ಟವಾಗಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ನಿವಾಸಿ ಸುಲೈಮಾನ್ ಸಹಿತ ಹಾಗೂ ಇಬ್ಬರನ್ನು ಪೋಲೀಸರು ವಶಕ್ಕೆ ಪಡೆದಿರುವುದಾಗಿ

ಉಡುಪಿ: ಅನಾರೋಗ್ಯ ಪೀಡಿತ ಕುಟುಂಬಕ್ಕೆ ಬೇಕಾಗಿದೆ ಸಹಾಯ ಹಸ್ತ

ಸರಕಾರಿ ಕೆಲಸದಿಂದ ನಿವೃತ್ತಿ ಹೊಂದಿ ಗಂಡನೊಂದಿಗೆ ತನ್ನ ಮುದ್ದಾದ ಮಗುವಿನೊಂದಿಗೆ ಸುಂದರವಾದ ಬದುಕಿನ ಕನಸು ಕಾಣುತ್ತಿದ್ದ ಆ ಮುದ್ದಾದ ಕುಟುಂಬಕ್ಕೆ, ಅದ್ಯಾರ ಕಣ್ಣು ಬಿತ್ತೋ.. ಗೊತ್ತಿಲ್ಲ.! ಬೈಕ್ ಸಾವರನೊಬ್ಬನ ಅತೀವೇಗ , ಅತೀ ಅವಸರ ಇಡೀ ಕುಟುಂಬವನ್ನೇ ಜೀವನಪೂರ್ತಿ ಕಣ್ಣೀರ ಕಡಲಲ್ಲಿ ಕಳೆಯುವಂತೆ ಮಾಡಿದೆ ಈ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ. ಇವರು ಉಡುಪಿಯ

ಮಂಗಳೂರು: ಪಂಪ್ವೆಲ್ ಬಳಿ ಭೀಕರ ಅಪಘಾತ

ನಗರದ ಪಂಪ್ವೆಲ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ತೊಕ್ಕೊಟ್ಟು ನಿವಾಸಿ ಸಮಿತ್ ಶೆಟ್ಟಿ (30) ಮೃತಪಟ್ಟ ಯುವಕ. ಸಮಿತ್ ಶೆಟ್ಟಿ ಕೊಟ್ಟಾರದಲ್ಲಿರುವ ತನ್ನ ರೂಮ್ ನಿಂದ ಇಂದು ಬೆಳಗ್ಗೆ ತೊಕ್ಕೊಟ್ಟಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರಾ.ಹೆ. 66ರ ಪಂಪ್ವೆಲ್ ಬಳಿ ಈ

ಮೂಡುಬಿದಿರೆಗೆ ಆಗಮಿಸಿದ ಮತದಾನ ಜಾಗೃತಿ ಜಾಥಾ ರಥ

ಮೂಡುಬಿದಿರೆ: ಏ. 26 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆ- 2024 ರ ಪ್ರಯುಕ್ತ ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮತದಾನ‌ ಜಾಗೃತಿ ಜಾಥಾ ರಥವು ಶನಿವಾರ ಮೂಡುಬಿದಿರೆ ತಾಲೂಕು ಪಂಚಾಯತ್ ಗೆ ಆಗಮಿಸಿತು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಾದ ಎಸ್. ವೆಂಕಟಚಲಪತಿ ಜಾಗೃತಿ ರಥವನ್ನು ಸ್ವಾಗತಿಸಿದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್

ಕರಾವಳಿ ಭಾಗದಲ್ಲೂ ಕಾಂಗ್ರೆಸ್ ಗೆಲುವು ಖಚಿತ : ಕೆ.ಅಭಯಚಂದ್ರ ಜೈನ್ ವಿಶ್ವಾಸ

ಮೂಡುಬಿದಿರೆ: ಕಾಂಗ್ರೆಸ್ ಯಾವತ್ತಿಗೂ ಹರಿಯುವ ನದಿ. ಕರ್ನಾಟಕದಲ್ಲಿ ಕಾಂಗ್ರೆಸನ್ನು ನಿರ್ನಾಮ ಮಾಡುವುದಾಗಿ ಹೇಳಿದ್ದ ಬಿಜೆಪಿ ಇಂದು ಅಧಿಕಾರವನ್ನು ಕಳೆದುಕೊಂಡಿದೆ. ಜನಸಾಮಾನ್ಯರಿಗೆ ಸದಾ ಸ್ಪಂದಿಸುವ ಗುಣ ಹೊಂದಿರುವ ಕಾಂಗ್ರೆಸನ್ನು ನಿರ್ನಾಮ ಮಾಡಲು ಸಾಧ್ಯವೇ ಇಲ್ಲ. ಈ ಬಾರಿ ಸಂಸತ್ ಚುನಾವಣೆಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್

ರಾಜ್ಯವನ್ನು ದಿವಾಳಿಯೆಬ್ಬಿಸಿ ಅರಾಜಕತೆ ಸೃಷ್ಟಿಸಿದ ಕಾಂಗ್ರೆಸ್ ಸರಕಾರ: ಡಾ. ವೈ ಭರತ್ ಶೆಟ್ಟಿ

ಗ್ಯಾರಂಟಿಗಳ ಆಸರೆಯಿಂದ ಅಧಿಕಾರಕ್ಕೇರಿದ ಕಾಂಗ್ರೆಸ್, ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿ ಮಾಡದೆ ರಾಜ್ಯದ ಜನತೆಗೆ ಮಂಕುಬೂದಿ ಎರಚಿದೆ. ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿರುವ ಕಾಂಗ್ರೆಸ್ ಒಂದೇ ವರ್ಗದ ಅತಿಯಾದ ಓಲೈಕೆಯಲ್ಲಿ ತೊಡಗಿದೆ ಎಂದು ಮಂಗಳೂರು ಉತ್ತರದ ಶಾಸಕ ಡಾ. ವೈ ಭರತ್ ಶೆಟ್ಟಿ ಆರೋಪಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಲೋಕಸಭಾ ಚುನಾವಣೆ

ಮಂಜೇಶ್ವರ: ವಿದ್ಯುತ್ ಶಾಕ್ ತಗುಲಿ ಯುವಕನ ದಾರುಣ ಅಂತ್ಯ

ಮಂಜೇಶ್ವರ: ವಿದ್ಯುತ್ ಶಾಕ್ ತಗುಲಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಹೊಸಂಗಡಿ ಸಮೀಪದ ಅಂಗಡಿಪದವು ನಿವಾಸಿ ದಿವಂಗತ ಅಶೋಕ್ – ಕಲಾವತಿ ದಂಪತಿಯ ಪುತ್ರ ಪ್ರಜ್ವಲ್ (19) ಸಾವನ್ನಪ್ಪಿದ ದುರ್ದೈವಿ. ಅಂಗಡಿಪದವಿನ ಅಂಗಡಿಯೊಂದರ ಮುಂಭಾಗದಲ್ಲಿ ವಿದ್ಯುತ್ ಹರಿಯುತ್ತಿದ್ದ ಕಬ್ಬಿಣದ ಗೇಟ್ ನ್ನು ತಿಳಿಯದೆ ಸ್ಪರ್ಶಿಸಿದಾಗ ವಿದ್ಯುತ್ ಶಾಕ್ ತಗುಲಿದ್ದು,