Home 2025 May (Page 4)

ಶ್ರೀಹರಿಕೋಟಾ: ಇಸ್ರೋದ 101ನೇ ಉಪಗ್ರಹ ಉಡಾವಣೆ ವಿಫಲ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಶ್ರೀಹರಿಕೋಟಾದಿಂದ ತನ್ನ 101ನೇ ರಾಕೆಟ್ ಉಡಾವಣೆಯನ್ನು ಕೈಗೊಂಡಿದೆ. ಆದರೆ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಇಸ್ರೋ ಮುಖ್ಯಸ್ಥ ವಿ.ನಾರಾಯಣನ್ ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಇಸ್ರೋದ

ಮಂಗಳೂರು: ಕುಂಟಿಕಾನದಲ್ಲಿ ‘ಕಲರವ’ ಮಕ್ಕಳ ಅಭಿವೃದ್ಧಿ ಕೇಂದ್ರದ ಉದ್ಘಾಟನೆ

ಮಂಗಳೂರಿನ ಕುಂಟಿಕಾನದ ಎಜೆ ಅಸ್ಪತ್ರೆಯ ಸಮೀಪದಲ್ಲಿ ಕದ್ರಿಯ ಫೈರ್ ಸ್ಟೇಷನ್ ಹಿಂಭಾಗದಲ್ಲಿ ’ಕಲರವ’ ಮಕ್ಕಳ ಅಭಿವೃದ್ಧಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಡಾ. ಶಿಲ್ಪ ಹೆಗ್ಡೆ ಮಾಲಕತ್ವದಲ್ಲಿ ಕಲರವ ಸೆಂಟರ್ ಫಾರ್ ಚೈಲ್ಡ್ ಡೆವಲಪ್‌ಮೆಂಟ್ ನಗರದ ಕುಂಟಿಕಾನ ಸಮೀಪದಲ್ಲಿ ಕಾರ್ಯಾರಂಭಗೊಂಡಿದೆ. ಕಲರವ ನೂತನ ಕೇಂದ್ರವನ್ನು ಜಯಶ್ರೀ ಹೆಗ್ಡೆ ಮತ್ತು ಗಜಾನನ

ಕಡಬ :ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮತ್ತು ಅವಕಾಶಗಳ ಬಗ್ಗೆ ಶೈಕ್ಷಣಿಕ ಮಾರ್ಗದರ್ಶನ

ಒಕ್ಕಲಿಗ ಗೌಡ ಸೇವಾ ಸಂಘ (ರಿ.) ಕಡಬ ತಾಲೂಕು ಇದರ ವತಿಯಿಂದ ಇಂದು ಒಕ್ಕಲಿಗ ಗೌಡ ಸಮುದಾಯ ಭವನ ಹೊಸಮಠ ಇಲ್ಲಿ, ಕಡಬ ತಾಲೂಕಿನ ಎಲ್ಲಾ ಸಮುದಾಯದ ೯ನೇ, ೧೦ನೇ ತರಗತಿ ಮತ್ತು ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶಿಕ್ಷಣ, ಉದ್ಯೋಗವಕಾಶಗಳು, ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃಧ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮತ್ತು ಅವಕಾಶಗಳ ಬಗ್ಗೆ

ಕೇಂಬ್ರಿಡ್ಜ್ ಶಾಲೆಯ ಸಿಬಿಎಸ್‍ಇ 10ನೇ ತರಗತಿ ಫಲಿತಾಂಶ ಪ್ರಕಟ; ನೂರು ಶೇಕಡಾ ಫಲಿತಾಂಶ, ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆಗಳ ಮಹಾಪೂರ

ಮಂಗಳೂರಿನ ಪಾಲ್ದಾನೆಯ ಕೇಂಬ್ರಿಡ್ಜ್ ಶಾಲೆಯ ಸಿಬಿಎಸ್‍ಇ ಹತ್ತನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ಶೇ.100 ಫಲಿತಾಂಶವನ್ನು ಪಡೆದುಕೊಂಡಿದ್ದಾರೆ. ಹಾಜರಾದ ಒಟ್ಟು 109 ವಿದ್ಯಾರ್ಥಿಗಳಲ್ಲಿ 82 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿ. ಸನ್ನಿಧಿ ಕಾಮತ್ 96.2% ಫಲಿತಾಂಶ ಪಡೆದಿದ್ದು ಪ್ರಥಮ ಸ್ಥಾನ, ನೀಲಾಂಜನ ತಾಲಿತ್ತಾಯ 96 ಶೇಕಡಾ ಫಲಿತಾಂಶ

ಬೆಳ್ಳಾರೆ : ಮೇ.20ರಂದು ’ಸುಸ್ಥಿರ ಕೃಷಿಗಾಗಿ’ ರೈತ ಸಂಗೋಷ್ಟಿ ಕಾರ್ಯಕ್ರಮ

ಬೆಳ್ಳಾರೆ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ವತಿಯಿಂದ ’ಸುಸ್ಥಿರ ಕೃಷಿಗಾಗಿ’ ರೈತ ಸಂಗೋಷ್ಟಿ ಎಂಬ ಕಾರ್ಯಕ್ರಮವು ಮೇ.20ರಂದು ಬೆಳಿಗ್ಗೆ 9.30ಕ್ಕೆ ಬೆಳ್ಳಾರೆಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಇಂದೋರ್‌ನ ಶ್ರೀ ಸಿದ್ಧಿ ಅಗ್ರಿ ಕೋ ಪ್ರೈವೇಟ್ ಲಿಮಿಟೆಡ್‌ನ ಪೆರುವೋಡಿ ನಾರಾಯಣ ಭಟ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ

ಬಂಟ್ವಾಳ: ಅಜಿಲಮೊಗರು-ಕಡೇಶ್ವಾಲ್ಯ ಸೇತುವೆ ಕಾಮಗಾರಿ-ಮುಂದಿನ ಬೇಸಗೆಯೊಳಗೆ ಪೂರ್ಣಗೊಳಿಸಿ – ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ

ಬಂಟ್ವಾಳ: ಅಜಿಲಮೊಗರು-ಕಡೇಶ್ವಾಲ್ಯ ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ವಿಳಂಬ ನೀತಿಯನ್ನು ಬಿಟ್ಟು ಮುಂದಿನ ಬೇಸಗೆಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧಿಕಾರಿಗಳಿಗೆ ಸೂಚಿಸಿದರು. ಅವರು ಸೇತುವೆ ಕಾಮಗಾರಿಯ ವಿಳಂಬದ ಹಿನ್ನೆಲೆಯಲ್ಲಿ ತಮ್ಮ ಕಚೇರಿಯಲ್ಲಿ ಸಂಬಂಧಪಟ್ಟ

ಕಡಬ: ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ನಾಳೆ(ಮೇ17) ಶೈಕ್ಷಣಿಕ ಮಾರ್ಗದರ್ಶನ ಮತ್ತು ಮಾಹಿತಿ ಕಾರ್ಯಗಾರ

ಕಡಬ: ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಎಲ್ಲಾ ಸಮುದಾಯದ ಪ್ರಸ್ತುತ ಸಾಲಿನ ಪ್ರೌಢ ಶಿಕ್ಷಣದಲ್ಲಿ 9 ನೇ ತರಗತಿ, 10 ನೇ ತರಗತಿ ಮತ್ತು 10 ನೇ ತರಗತಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಹಾಗೂ ದ್ವಿತೀಯ ಪಿ.ಯು.ಸಿ ಮತ್ತು ದ್ವಿತೀಯ ಪಿ.ಯು.ಸಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮೇ.17 ರಂದು ಮುಂದಿನ ಶಿಕ್ಷಣ ಮತ್ತು ಉದ್ಯೋಗವಕಾಶಗಳು, ಉದ್ಯಮಶೀಲತೆ

ಪ್ರಮೋದ್ ಕುಮಾರ್ ರೈ ಬೆಳ್ಳಾರೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ

ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು 50ನೇ ವಾರ್ಷಿಕ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಕೊಡಮಾಡುತ್ತಿದ್ದು, ಈ ವರ್ಷದ ‘ಆರ್ಯಭಟ’ ಪ್ರಶಸ್ತಿಯನ್ನು ಘೋಷಿಸಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ವರ್ಷ ಆರ್ಯಭಟ ಸುವರ್ಣ ಸಂಭ್ರಮ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಳೆದ ಮೂರು ದಶಕಗಳಿಂದ ನೃತ್ಯ ಕಲಾವಿದರಾಗಿ, ನಿರ್ದೇಶಕರಾಗಿ,

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ, ಸೇನೆ ನಡೆಸಿದ ಆಪರೇಷನ್ ಸಿಂದೂರ್ ಬಗ್ಗೆ ಮಾತನಾಡಲಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಅವರುಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ,ಸೇನೆ ನಡೆಸಿದ ಆಪರೇಷನ್ ಸಿಂದೂರ್ಬಗ್ಗೆ ಮಾತನಾಡಲಿದ್ದಾರೆ