Home 2025 November (Page 8)

ಸುಳ್ಯ: ಎನ್ನೆಂಸಿಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ದಿನಾಂಕ 16 -11-2025 (ಆದಿತ್ಯವಾರ) ರಂದು ಅಸೈಗೊಳಿ (ಕೊಣಾಜೆ)ಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮೂಹ ಜನಪದ ಗೀತೆಯಲ್ಲಿ ಪ್ರಥಮ ,(ಅಭಿಷೇಕ್ ಎಂ ( ದ್ವಿತೀಯ ಬಿ. ಎಸ್ಸಿ ), ಚೈತ್ರ . ಕೆ. ಟಿ, ( ತೃತೀಯ ಬಿ. ಎಸ್ಸಿ ), ಜೀಷ್ಮ . ಬಿ. ಎಸ್( ತೃತೀಯ ಬಿ. ಎಸ್ಸಿ ),

ಕಾಪು : ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ) ಪಡು ಕುತ್ಯಾರು ಆರನೇ ವಾರ್ಷಿಕ ಮಹಾಸಭೆ

ಕಾಪು ತಾಲೂಕು ಪಡುಕುತ್ಯಾರು ಗ್ರಾಮದ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ” ಆರನೇ ವಾರ್ಷಿಕ ಮಹಾಸಭೆಯು” ದಿನಾಂಕ: 16.11.2025ರಂದು ಸಂಘದ ಅಧ್ಯಕ್ಷರಾದ ನಾಗೇಶ ಆರ್ ಆಚಾರ್ಯರವರ ಅಧ್ಯಕ್ಷತೆಯಲ್ಲಿ ದುರ್ಗಾ ಮಂದಿರದಲ್ಲಿ ಜರಗಿತು. ಮಹಾಸಭೆಯು ಸುರೇಶ್ ಆರ್ ಆಚಾರ್ಯ ರವರ ಸ್ವಾಗತದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮುಖ್ಯ ಅತಿಥಿಯಾಗಿ ಶ್ರೀ ಶಶಿಧರ್

ಬೆಳ್ತಂಗಡಿ : ಕುತ್ರೋಟ್ಟು ನಿಯಂತ್ರಣ ತಪ್ಪಿ ಆಟೋ ಪಲ್ಟಿ, ಓರ್ವ ಬಾಲಕ ಸಾವು

ಬೆಳ್ತಂಗಡಿ : ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿ ಓರ್ವ ಬಾಲಕ ಸಾವನ್ನಪ್ಪಿದ್ದು. ನಾವೂರಿನ ಶಶಿ ಎಂಬವರ ಆಟೋದಲ್ಲಿದ್ದ ಐದು ಮಂದಿಗೆ ಗಾಯವಾದ ಘಟನೆ ನ.16 ರಂದು ರಾತ್ರಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕುತ್ರೋಟ್ಟು – ಟಿ.ಬಿ.ಕ್ರಾಸ್ ರಸ್ತೆಯ ಹೊಕ್ಕಿಲ ಎಂಬಲ್ಲಿ ನಡೆದಿದೆ. ಆಟೋದಲ್ಲಿದ್ದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುಂಡಡ್ಕ ನಿವಾಸಿ ಗಣೇಶ್

ವಿರಾಜಪೇಟೆ ಗೌಡ ಸಮಾಜದಿಂದ ಅದ್ದೂರಿ ಅಭಿನಂದನಾ ಕಾರ್ಯಕ್ರಮ

ವಿರಾಜಪೇಟೆ ಗೌಡ ಸಮಾಜದಲ್ಲಿ ಇಂದು ಪೂಜ್ಯರಾದ ಕುರುoಜಿ ಜಾನಕಿ ವೆಂಕಟರಮಣ ಗೌಡರ ಸುಪುತ್ರರಾದ ಡಾ.ಚಿದಾನಂದ ಗೌಡರು ಮತ್ತು ಡಾ.ರೇಣುಕಾ ಪ್ರಸಾದ್ ರವರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಅಭಿನಂದನೆ ಯನ್ನು ಸ್ವೀಕರಿಸಿ ಮಾತನಾಡಿದ ಡಾ. ಚಿದಾನಂದರವರು ಸುಮಾರು 20 ವರ್ಷಗಳಿಂದ ಆಗಬೇಕಿದ್ದ ಕೆಲಸವನ್ನು ಕೊಡಗು ಗೌಡ ಸಮಾಜದ ಒಕ್ಕೂಟದ ಅಧ್ಯಕ್ಷರಾದ ಆನಂದ

ಉಡುಪಿಯ ಬನ್ನಂಜೆ ಬಿಲ್ಲವರ ಸೇವಾ ಸಂಘದ ಶ್ರೀ ನಾರಾಯಣಗುರು ವಿದ್ಯಾನಿಧಿ ಟ್ರಸ್ಟ್‌

ಉಡುಪಿಯ ಬನ್ನಂಜೆ ಬಿಲ್ಲವರ ಸೇವಾ ಸಂಘದ ಶ್ರೀ ನಾರಾಯಣಗುರು ವಿದ್ಯಾನಿಧಿ ಟ್ರಸ್ಟ್‌ ವತಿಯಿಂದ 431 ವಿದ್ಯಾರ್ಥಿಗಳಿಗೆ 25 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸಮ್ಮಾನ ಕಾರ್ಯಕ್ರಮವು ರವಿವಾರ ಬನ್ನಂಜೆ ನಾರಾಯಣಗುರು ಆಡಿಟೋರಿಯಂನಲ್ಲಿ ಜರಗಿತು. ನಾರಾಯಣಗುರು ಆಭಿವೃದ್ದಿ ನಿಗಮದ ಅಧ್ಯಕ್ಷ ಮಂಜುನಾಥ್‌ ಪೂಜಾರಿ ಅವರು ಕಾರ್ಯಕ್ರಮವನ್ನು

ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ : ಆಳ್ವಾಸ್ ಶಾಲೆಗೆ 83 ಪದಕದೊಂದಿಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ

ಮೂಡುಬಿದಿರೆ: ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಸುಳ್ಯ ಮತ್ತು ಸರಕಾರಿ ಪದವಿಪೂರ್ವ ಕಾಲೇಜು ಪಂಜ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14 ವರ್ಷ ಹಾಗೂ 17ವರ್ಷ ವಯೋಮಿತಿ ಒಳಗಿನ ಬಾಲಕ ಬಾಲಕಿಯರ ಅಥ್ಲೆಟಿಕ್ಸ್

ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್: ಪುತ್ತೂರಿನ ದಿಶಾನ್ ಎಂ ಗೆ ಚಿನ್ನದ ಪದಕ.

ಪುತ್ತೂರು: ಸಂತ ಫಿಲೋಮಿನಾ ಪ ಪೂ ಕಾಲೇಜಿನ ದಿಶಾನ್ ಎಂ ಗೆ ಚಿನ್ನದ ಪದಕ. ಕರ್ನಾಟಕ ರಾಜ್ಯ ವೈಟ್ ಲಿಫ್ಟಿಂಗ್ ಸಂಘದ ಆಶ್ರಯದಲ್ಲಿ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಅಸೋಸಿಯೇಷನ್ ಸುಳ್ಯದಲ್ಲಿ ನ 8 ಮತ್ತು 9 ರವರೆಗೆ ನಡೆದ ರಾಜ್ಯಮಟ್ಟದ ಯುವ ಕಿರಿಯ ಮತ್ತು ಹಿರಿಯ ವಿಭಾಗದ 71 ಕೆ ಜಿ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ

ಮನು ಇಡ್ಯಾ ತುಳುವಿನ ಯುಗ ಪ್ರವರ್ತಕ ನಾಟಕಕಾರ : ಯು.ಕೆ ಕುಮಾರನಾಥ

ತುಳು ಅಕಾಡೆಮಿ ಪ್ರಕಟಿಸಿದ ಮನು ಇಡ್ಯಾರ ನಾಟಕ ಕೃತಿಗಳ ಬಿಡುಗಡೆ ಮಂಗಳೂರು: ಎಪ್ಪತ್ತರ ದಶಕದ ಬಳಿಕ ತುಳು ರಂಗಭೂಮಿಯ ದಿಕ್ಕು ಬದಲಾಯಿಸಿದ ಯುಗ ಪ್ರವರ್ತಕ ನಾಟಕಕಾರ ಮನು ಇಡ್ಯಾರ ತುಳು ರಂಗಭೂಮಿಯ ಕೊಡುಗೆ ಅಪೂರ್ವದದು ಎಂದು ವಿಜಯ ಕರ್ನಾಟಕ ಪತ್ರಿಕೆಯ ನಿವೃತ್ತ ಸ್ಥಾನೀಯ ಸಂಪಾದಕ ಯು. ಕೆ .ಕುಮಾರನಾಥ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು

ಕೊಲೆ : ಆರೋಪಿಗೆ ಜೀವಾವಧಿ ಶಿಕ್ಷೆ

ಮೂಡುಬಿದಿರೆ : ಕಳೆದ ಐದು ವಷ೯ಗಳ ಹಿಂದೆ ಆಳ್ವಾಸ್ ಕ್ಯಾಂಟೀನ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಚೇತನ್ ಎಂಬವನನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆಗೈದ ಆರೋಪಿ ಚಿದಾನಂದ ಪರಶುನಾಯ್ಕಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಆಳ್ವಾಸ್ ಕ್ಯಾಂಟೀನ್ ನಲ್ಲಿ 2020 ರ ಅಕ್ಟೋಬರ್ 30 ರಂದು ಈ ಪ್ರಕರಣ ನಡೆದಿತ್ತು.

ಮೂಡುಬಿದಿರೆಗೆ ಆಗಮಿಸಿದ ಶ್ರೀರಾಮ ದಿಗ್ವಿಜಯ ರಥಯಾತ್ರೆ

ಮೂಡುಬಿದಿರೆ :ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ, ಗೋವಾ ಅಧೀನದಲ್ಲಿ ನಡೆಯುತ್ತಿರುವ ಶ್ರೀ ರಾಮ ದಿಗ್ವಿಜಯ ರಥಯಾತ್ರೆಯು ಮಂಗಳೂರಿನ ಮಂಗಲರಾಮ ಜಪಕೇಂದ್ರದಿಂದ ಬುಧವಾರ ಮೂಡುಬಿದಿರೆಗೆ ಆಗಮಿಸಿತು. ಆಗಮಿಸಿದ ರಥವನ್ನು ಭಜಕರು ಹನುಮಂತ ದೇವಳದ ಎದುರು ಪೂರ್ಣಕುಂಭ, ಮಂಗಳವಾದ್ಯ, ಭಜನೆ ಸಂಕೀರ್ತನೆಯೊಂದಿಗೆ ವೆಂಕಟರಮಣ ದೇವಳದ ಎದುರು ಬರಕೊಂಡರು.