ಭಾರತ್ ಸ್ಕೌಟ್ ಆಂಡ್ ಗೈಡ್ಸ್ ತಂಡದಿಂದ ಸೇವಾ ಕಾರ್ಯ: ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ನೈತಿಕ ಸ್ಥೈರ್ಯ
ಕೋರೋನಾ ಭೀತಿಯ ನಡುವೆಯೂ ಮತ್ತೆ ಎಸೆಸೆಲ್ಸಿ ಪರೀಕ್ಷೆ ಕರ್ನಾಟಕದಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಈ ಯಶಸ್ವಿನ ಹಿಂದೆ ಶಿಕ್ಷಣ ಇಲಾಖೆ ಜೊತೆ ಹಲವು ಸಂಘ ಸಂಸ್ಥೆಗಳು ಕೈಜೋಡಿಸಿದೆ. ಈ ಪೈಕಿ ಪ್ರಮುಖ ಪಾತ್ರ ವಹಿಸಿ, ಪರೀಕ್ಷೆ ಸುಸೂತ್ರವಾಗಿ ನಡೆಯಲು ಕಾರಣವಾದವರ ಪೈಕಿ ಈ ತಂಡದ ಪ್ರಯತ್ನ ಕೂಡಾ ಪ್ರಶಂಸಾರ್ಹ. ಅಷ್ಟಕ್ಕೂ ಆ ತಂಡ ಯಾವುದು? ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಅವರು ಮಾಡಿದ ಸೇವೆ ಏನು? ಬನ್ನಿ ನೋಡೋಣ
ನೀಲಿ ಬಣ್ಣದ ಸಮವಸ್ತ್ರ, ತಲೆಗೊಂದು ಟೋಪಿ ಹಾಕಿ ಎಸೆಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಲವಲವಿಕೆಯಿಂದ ಕರ್ತವ್ಯ ನಿರ್ವಸುತ್ತಿರುವ ಈ ತಂಡ ಯಾವುದೆಂದು ಗೊತ್ತಾಯಿತಲ್ಲ. ಹೌದು ಇವರು ಭಾರತ್ ಸ್ಕೌಟ್ ಆಂಡ್ ಗೈಡ್ಸ್ ತಂಡದ ಸದಸ್ಯರು. ಎರಡು ದಿನಗಳ ಕಾಲ ನಡೆದ ಎಸೆಸೆಲ್ಸಿ ಪರೀಕ್ಷೆಯ ಯಶಸ್ವಿನಲ್ಲಿ ಇವರ ಪಾತ್ರವೂ ಮಹತ್ತರ. ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಝಿಂಗ್, ಮಾಸ್ಕ್ ವಿತರಣೆ ಸಹಿತ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ಈ ತಂಡ ಅಚ್ಚುಕಟ್ಟಾಗಿ ಮಾಡಿತ್ತು
ಕೊರೋನಾ ಹಿನ್ನೆಲೆಯಲ್ಲಿ ಒಂದು ಇಡೀ ವರ್ಷವೇ ಮಾಮೂಲಿ ಶಿಕ್ಷಣದಿಂದ ಈ ಬಾರಿ ವಿದ್ಯಾರ್ಥಿಗಳು ವಂಚಿತರಾಗಿದ್ದರುರು. ಸರಕಾರ ಕೂಡಾ ಸರಳೀಕೃತ ಪರೀಕ್ಷಾ ಪದ್ಧತಿಯನ್ನು ವಿದ್ಯಾರ್ಥಿಗಳ ಮುಂದಿಟ್ಟಿತ್ತು. ಈ ನಡುವೆ ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸುವುದು ಹೇಗೆ ಎಂಬುವುದೇ ವಿದ್ಯಾರ್ಥಿಗಳಿಗೆ ಸವಾಲಾಗಿತ್ತು. ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸ್ಕೌಟ್ ಆಂಡ್ ಗೈಡ್ ಮತ್ತು ರೋವರ್ ರೇಂಜರ್ ತಂಡ ಮಾಡಿತ್ತು. ಇದು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಮತ್ತಷ್ಟು ಹುರುಪು ನೀಡಿತ್ತು.
ಇಡೀ ಕರ್ನಾಟಕದಾದ್ಯಂತೆ ಈ ತಂಡ ಒಂದು ಸನ್ನದ್ಧ ಸೇನೆಯಂತೆ ಕಾರ್ಯ ನಿರ್ವಹಿಸಿತ್ತು. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ೧೭೯ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು ೬೧೬ ಸ್ಕೌಟ್ ಆಂಡ್ ಗೈಡ್‌ಸ್ ಮತ್ತು ರೋವರ್ ರೇಂಜರ್ ಸದಸ್ಯರು ಕಾರ್ಯ ನಿರ್ವಹಿಸಿದ್ದರು. ಈ ನಡುವೆ ವಿಕಲಚೇತನ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರುವಲ್ಲಿ ಇವರ ಪ್ರಯತ್ನ ಶ್ಲಾಘನೀಯ. ಅಷ್ಟೇ ಅಲ್ಲ ಕೊರೋನಾ ಪಾಸಿಟಿವ್ ಹೊಂದಿದ್ದ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಕಲ್ಪಸಿದಲ್ಲದೇ ಅವರ ಮೇಲೂ ಸಂಪೂರ್ಣ ನಿಗಾ ವಹಿಸಿದ್ದರು.