ಶ್ರೀ ಓಂಕಾರೇಶ್ವರೀ ಮಂದಿರ ಹಾಗೂ ಮುಂಡಾಲ ಸಮಾಜ ಸೇವಾ ಟ್ರಸ್ಟ್ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಹಳೆಯಂಗಡಿ:79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶ್ರೀ ಓಂಕಾರೇಶ್ವರೀ ಮಂದಿರ(ರಿ) ಹಾಗೂ ಮುಲ್ಕಿಹೋಬಳಿ 9 ಮಾಗಣೆಯ ಮುಂಡಾಲ ಸಮಾಜ ಸೇವಾ ಟ್ರಸ್ಟ್(ರಿ) ವತಿಯಿಂದ ಜಂಟಿಯಾಗಿ ನಡೆಸಲಾಯಿತು.
ಅಧ್ಯಕ್ಷರಾದ ಶ್ರೀ ಟಿ .ಸದಾಶಿವ ಕುಂದರ್ ರವರು ಧ್ವಜಾರೋಹಣವನ್ನು ನೆರವೇರಿಸಿದರು.
9 ಮಾಗಣೆ ಮುಂಡಾಲ ಸಮಾಜದ ಸೇವಾ ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀ ಶಂಕರ ಮಾಸ್ಟರ್ ಗೋಳಿಜೋರ ಇವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿ ನೂರಾರು ವರ್ಷಗಳಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹಾತ್ಮರನ್ನು ನೆನೆಪಿಸಿದರು ಹಾಗೂ ಅವರು ಪಡೆದ ಸ್ವಾತಂತ್ರ್ಯ ನಾವು ಸತ್ಕಾರ್ಯಗಳಿಗೆ ಬಳಸುವ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀಧರ್ ಕೆಮ್ರಾಲ್, ಮಂದಿರದ ಸಲಹಾ ಸಮಿತಿಯ ಸದಸ್ಯರಾದ ಸಂಜೀವ ಕರ್ಕೇರ, ಮಂದಿರದ ಅರ್ಚಕರಾದ ಕೃಷ್ಣಕುಮಾರ್, ಪಂಚಾಯತ್ ಸದಸ್ಯರಾದ ಅನಿಲ ಯಾನೆ ಸೀತಾರಾಮ, ಮಂದಿರದ ಎಲ್ಲಾ ಸದಸ್ಯರು ಹಾಗೂ ಮಹಿಳಾ ಮಂಡಳಿಯ ಸದಸ್ಯೆಯರು ಉಪಸ್ಥಿತರಿದ್ದು ಮುಲ್ಕಿ ಹೋಬಳಿ ಒಂಬತ್ತು ಮಾಗಣೆಯ ಮುಂಡಾಲ ಸಮಾಜಸೇವಾ ಟ್ರಸ್ಟ್ನ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮವನ್ನು ಶ್ರೀ ಉದಯಕುಮಾರ್ ನಿರೂಪಿಸಿ ವಂದಿಸಿದರು.