ಸಾಂತೋಮ್ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆ ರೆಂಜಿಲಾಡಿ ಯು. ಕೆ. ಜಿ ಪದವಿ ಪ್ರಧಾನ ಸಮಾರಂಭ

ಸಾಂತೋಮ್ ವಿದ್ಯಾನಿಕೇತನದಲ್ಲಿ ಯು. ಕೆ. ಜಿ ಪುಟಾಣಿಗಳ ಪದವಿ ಪ್ರಧಾನ ಸಮಾರಂಭ ವಿಜೃಂಭಣೆಯಿಂದ ದಿನಾಂಕ 29.03.2025 ಶನಿವಾರದಂದು ಸಾಂತೋಮ್ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಪುಟಾಣಿಗಳು ತಮ್ಮ ಶಿಕ್ಷಣದ ಪ್ರಥಮ ಹಂತವನ್ನು ಪೂರೈಸಿ ಪ್ರಾಥಮಿಕ ಶಿಕ್ಷಣಕ್ಕೆ ಕಾಲಿಡುವ ಈ ಕ್ಷಣವು ಸಂತಸದಾಯಕವಾಗಿತ್ತು.
ಮುಖ್ಯ ಅತಿಥಿಯಾಗಿ ಕರ್ನಲ್ ಎನ್. ಎ. ಮ್ಯಾಥ್ಯು ಕಾರ್ಯಕ್ರಮದಲ್ಲಿ ಭಾಗವಹಿಸಿ ಜೀವನದಲ್ಲಿ ಮಕ್ಕಳಿಗೆ ಶಿಸ್ತು ಅತೀ ಮುಖ್ಯವಾಗಿದೆ. ಹೆತ್ತವರ ಪ್ರೀತಿಯಲ್ಲಿ ಬೆಳೆದ ಮಕ್ಕಳಿಗೆ ಶಿಸ್ತು ಮತ್ತು ಮಾರ್ಗದರ್ಶನ ದೊರೆತರೆ ಅವರು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂಬುದನ್ನು ಕಥೆಗಳ ಮೂಲಕ ವಿವರಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ರೇ. ಫಾ. ಪೌಲ್ ಜೇಕಬ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮನೆಯಲ್ಲಿ ಬೆಳೆದ ಮಗು ಶಾಲೆಗೆ ಬರುವ ಆರಂಭ ಸಮಯದಲ್ಲಿ ಶಿಕ್ಷಕರಿಗೆ ಆ ಮಗುವನ್ನು ಶಾಲೆಯ ವಾತಾವರಣಕ್ಕೆ ಹೊಂದಿಸುವುದು ಕಷ್ಟ ಎಂದು ಯು ಕೆ ಜಿ ಪುಟಾಣಿಗಳ ಕುರಿತು ಮಾತನಾಡಿದರು.
ಮುಖ್ಯ ಹಂತವಾಗಿ ಯು ಕೆ ಜಿ ಪುಟಾಣಿಗಳಿಗೆ ಕರ್ನಲ್ ಶ್ರೀ ಎನ್. ಎ. ಮ್ಯಾಥ್ಯು ಅವರು ಅಧಿಕೃತವಾಗಿ ಪದವಿ ಪ್ರಮಾಣ ಪತ್ರ ವಿತರಿಸಿದರು. ಪುಟಾಣಿಗಳ ಹೊಸ ಉತ್ಸಾಹ ಮತ್ತು ಸಾಧನೆಯನ್ನು ನೋಡಿ ಪೋಷಕರು ಹೆಮ್ಮೆ ಪಟ್ಟರು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ರೇ. ಫಾ.ಪೌಲ್ ಜೇಕಬ್, ಶಾಲಾ ಆಡಳಿತ ಮಂಡಳಿಯ ಶೈಕ್ಷಣಿಕ ಸಲಹೆಗಾರರು ಮತ್ತು ಆಡಳಿತ ಅಧಿಕಾರಿಯಾದ ಶ್ರೀ. T. G. ಮ್ಯಾಥ್ಯು, ಕೋಶಾಧಿಕಾರಿಯಾದ ಶ್ರೀ ಸೈಮನ್ ಕೆ.ಸಿ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀ ವಿನೋದ್, ರಕ್ಷಕ – ಶಿಕ್ಷಕ ಸಂಘದ ಸದಸ್ಯರಾದ ಶ್ರೀಮತಿ ಸಿಜಿ ಸ್ಕರಿಯಾ, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ. ಜ್ಯೋತಿ ಎಸ್ ಕೆ, ಶಾಲಾ ಶಿಕ್ಷಕರು ಶಿಕ್ಷಕೇತರ ವರ್ಗ, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀಮತಿ ಶ್ವೇತಾ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಪ್ರಭಾವತಿ ವಂದಿಸಿದರು ಹಾಗೂ ಶಿಕ್ಷಕಿ ಶ್ರೀಮತಿ ಕ್ರಿಸ್ಟೀನಾ ಪಿ.ಕೆ ಕಾರ್ಯಕ್ರಮವನ್ನು ನಿರೂಪಿಸಿದರು.