ಕನ್ನಡದ ಲೇಖಕಿ ಬಾನು ಮುಷ್ತಾಕ್- ಪ್ರತಿಷ್ಟಿತ ಬೂಕರ್ ಪ್ರಶಸ್ತಿಗೆ ಭಾಜನ

ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರು ಬರೆದಿರುವ ಹಸೀನಾ ಮತ್ತು ಇತರ ಕತೆಗಳು ಕೃತಿಯ ಇಂಗ್ಲಿಷ್ ಅನುವಾದ ಹಾರ್ಟ್ ಲ್ಯಾಂಪ್ ಕೃತಿಯು ಪ್ರತಿಷ್ಟಿತ ಬೂಕರ್ ಪ್ರಶಸ್ತಿಗೆ ಭಾಜನವಾಗಿದೆ.

ದೀಪಾ ಭಸ್ತಿ ಅವರು ಬಾನು ಅವರ ಕೃತಿಯನ್ನು ಇಂಗ್ಲಿಷಿಗೆ ಅನುವಾದಿಸಿದ್ದರು. ಮೇ 20ರಂದು ತೀರ್ಪು ಆಗಿದ್ದು, ಈ ಬಗೆಗೆ ಬುಧವಾರ ಅಧಿಕೃತ ಘೋಷಣೆಯಾಗಿದೆ. ಬೂಕರ್ ವಿಜೇತ ಕೃತಿಗೆ 50,000 ಪೌಂಡ್ ರೊಕ್ಕ ಬಹುಮಾನವಿದ್ದು, ಅದು ಲೇಖಕಿ ಮತ್ತು ಅನುವಾದಕಿಯ ನಡುವೆ ಸಮಾನ ಹಂಚಿಕೆಯಾಗುತ್ತದೆ.

 banu mushtaq booker award

ಶಾರ್ಟ್ ಲಿಸ್ಟಿಗೆ ಆಯ್ಕೆಯಾಗಿದ್ದ ಕೃತಿಗಳ ಎಲ್ಲ ಲೇಖಕರು ಲಂಡನ್ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದರು. ಅಂತಿಮ ಹಂತಕ್ಕೆ ಆರು ಕೃತಿಗಳು ಆಯ್ಕೆಯಾಗಿದ್ದವು. ಅವುಗಳಲ್ಲಿ ಬಾನು ಮುಷ್ತಾಕ್ ಅವರ ಕೃತಿ ಗೆದ್ದಿರುವುದು, ಕನ್ನಡಕ್ಕೆ ಕೋಡು ಮೂಡಿಸಿದ ವಿಚಾರ ಎನ್ನಬಹುದು. ಹಾರ್ಟ್ ಲ್ಯಾಂಪ್ ಕಳೆದ ವರುಷ ಪೆನ್ ಟ್ರಾನ್ಸ್‍ಲೇಟ್ಸ್ ಪ್ರಶಸ್ತಿ ಗೆದ್ದಿತ್ತು.


ಅಂತಿಮ ಹಂತದಲ್ಲಿ ಆಯ್ಕೆಗೆ ಎರಡು ಫ್ರೆಂಚ್ ಮೂಲದ, ತಲಾ ಒಂದು ಕನ್ನಡ, ಜಪಾನಿ, ಇಟಾಲಿಯನ್, ಡ್ಯಾನಿಶ್ ಕೃತಿಗಳು ಇದ್ದವು.

add - rai's kitchen

Related Posts

Leave a Reply

Your email address will not be published.